Asianet Suvarna News Asianet Suvarna News

ಜಪಾನಿನಲ್ಲಿ ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ!

ಜಪಾನಿನಲ್ಲಿ ಕೊರೋನಾ ವೈರಸ್‌ನಿಂದಾಗಿ ಜನರಲ್ಲಿ ಖಿನ್ನತೆ| ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ| 2018ರಲ್ಲಿ ಬ್ರಿಟನ್‌ ಇಂತಹುದೇ ಒಂದು ಸಚಿವ ಹುದ್ದೆ

Japan PM appoints Minister of Loneliness after spike in suicides amid Covid 19 pod
Author
Bangalore, First Published Feb 25, 2021, 9:27 AM IST

ಟೋಕಿಯೋ(ಫೆ.25): ಜಪಾನಿನಲ್ಲಿ ಕೊರೋನಾ ವೈರಸ್‌ನಿಂದಾಗಿ ಜನರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಜನರ ಒಂಟಿತನ ನಿವಾರಿಸಲು ಹೊಸದೊಂದು ಸಚಿವ ಹುದ್ದೆಯನ್ನು ಸೃಷ್ಟಿಸಲಾಗಿದೆ.

2018ರಲ್ಲಿ ಬ್ರಿಟನ್‌ ಇಂತಹುದೇ ಒಂದು ಸಚಿವ ಹುದ್ದೆಯನ್ನು ಸೃಷ್ಟಿಸಿತ್ತು. ಅದನ್ನೇ ಉದಾಹರಣೆಯನ್ನಾಗಿ ಇಟ್ಟುಕೊಂಡು ಜಪಾನ್‌ ಈಗ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ನಿಯಂತ್ರಣಕ್ಕೆ ತೆಸುಶಿ ಸಕಾಮೊಟೊ ಎನ್ನುವವರನ್ನು ಒಂಟಿತನ ನಿವಾರಣಾ ಸಚಿವರನ್ನಾಗಿ ನೇಮಿಸಿದೆ.

ಇದೇ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಸಚಿವ ಸಕಾಮೊಟೊ, ಜನರು ಖಿನ್ನತೆಗೆ ಒಳಗಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ಸಾಮಾಜಿಕ ಏಕಾಂಗಿತವನ್ನು ನಿವಾರಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜನರ ಮಧ್ಯೆ ಸಂಬಂಧವನ್ನು ಬಲಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

Follow Us:
Download App:
  • android
  • ios