Asianet Suvarna News Asianet Suvarna News

Banaras Station ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ತಡ ರಾತ್ರಿ ರೈಲು ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಮೋದಿ!

  • ತಡ ರಾತ್ರಿ 1 ಗಂಟೆಗೆ ಬನಾರಸ್ ರೈಲು ನಿಲ್ದಾಣಕ್ಕೆ ಪ್ರಧಾನಿ ಮೋದಿ ಭೇಟಿ
  • ಸ್ವಚ್ಚ, ಆಧುನಿಕ ಹಾಗೂ ಪ್ರಯಾಣಕ ಸ್ನೇಹಿ ರೈಲು ನಿಲ್ದಾಣದ ಕಾಮಗಾರಿ
  • ಸಾರ್ವಜನಿಕರಿಗೆ ತೊಂದರೆಯಾಗದಿರಲು ತಡರಾತ್ರಿ ಕಾಮಗಾರಿ ಪರಿಶೀಲನೆ
PM Modi visits banaras railway station late night to Inspection development work ckm
Author
Bengaluru, First Published Dec 14, 2021, 4:00 AM IST

ವಾರಾಣಸಿ(ಡಿ.14): ಎರಡು ದಿನಗಳ ವಾರಾಣಸಿ(Varanasi) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ಮೊದಲ ದಿನ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟಿಸಿದ್ದಾರೆ. ಬಳಿಕ ಗಂಗಾ ಆರತಿಯಲ್ಲಿ ಪಾಲ್ಗೊಂಡ ಮೋದಿ, ತಡರಾತ್ರಿ ಬನಾರಸ್ ರೈಲು(Banaras Railway Station) ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗದಿರಲು ಮೋದಿ, ತಡರಾತ್ರಿ ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಬನಾರಸ್ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲಾಗುತ್ತಿದೆ.  ಈ ಆಧುನೀಕರಣದಲ್ಲಿ ಸ್ವಚ್ಚ ನಿಲ್ದಾಣ, ಪ್ರಯಾಣಕರ ಸ್ನೇಹಿ, ರೈಲು ಸಂಪರ್ಕ ಹೆಚ್ಚಿಸುವ ಕಾಮಗಾರಿಗಳು ನಡೆಯುತ್ತಿದೆ. ಈ ಕಾಮಗಾರಿಯನ್ನು ಮೋದಿ ಪರಿಶೀಲನೆ ನಡೆಸಿದ್ದಾರೆ.

Kashi Vishwanath Dham ಸುಲ್ತಾನರು ಮತ್ತೆ ಮತ್ತೆ ಕೆಡವಿದ ದೇಗುಲ, ಪ್ರತಿ ಬಾರಿ ಪುಟಿದೆದ್ದ ಕಾಶಿ ಈಗಲೂ ಅಚಲ!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಜೊತೆ ತಡರಾತ್ರಿ 1 ಗಂಟೆಗೆ ಬನಾರಸ್ ರೈಲು ನಿಲ್ದಾಣಕ್ಕೆ ಆಗಮಿಸಿದ ಮೋದಿ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.  ಬಳಿಕ ಬನಾರಸ್ ರೈಲು ನಿಲ್ಜಾಣದ ಆಧುನೀಕರಣದ ಕುರಿತು ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 

ಕಾಶಿ ವಿಶ್ವನಾಥನ ಸನ್ನಿಧಾನವನ್ನು(Kashi Vishwanath Dham) ಮತ್ತೆ ದೇಗುಲ ನಗರವನ್ನಾಗಿ ಮಾಡಿದ ಪ್ರಧಾನಿ ಮೋದಿ, ಮುಂದಿನ ಕೆಲಸ ಬನಾರಸ್ ರೈಲು ನಿಲ್ದಾಣ ಎಂದಿದ್ದಾರೆ. ರೈಲು ಸಂಪರ್ಕವನ್ನು ಹೆಚ್ಚಿಸಲು, ಮೂಲಭೂತ ಸೌಕರ್ಯ, ಅತ್ಯಂತ ಸ್ವಚ್ಚ ಪರಿಸರ ಹಾಗೂ ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣ ಒದಗಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

Kashi Vishwanath Dham ಬೊಮ್ಮಾಯಿ ಸೇರಿ ಬಿಜೆಪಿ ಸಿಎಂಗಳ ಜೊತೆ PM ಮೋದಿ ಇಂದು ಮ್ಯಾರಥಾನ್‌ ಸಭೆ!

ಡಿ.13ರಂದು ವಾರಾಣಸಿ ತಲುಪಿರುವ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟಿಸಿದ್ದಾರೆ ಇಂದು ಬೆಳಗ್ಗೆ ತಮ್ಮ ಸ್ವಕ್ಷೇತ್ಪ ವಾರಾಣಸಿ ತಲುಪಿದ ಮೋದಿ, ನೇರವಾಗಿ ಖಿಡಕಿಯಾ ಘಾಟ್‌ಗೆ ತೆರಳಿ  ಗಂಗಾ ಸ್ನಾನ ಮಾಡಿದರು. ಈ ವೇಳೆ ಅವರು ಗಂಗೆಗೆ ಕಲಶದಲ್ಲಿನ ನೀರು ಹಾಗೂ ಹೂವುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು ಹಾಗೂ ಸೂರ್ಯನಿಗೆ ಅಘ್ರ್ಯ ಸಮರ್ಪಿಸಿದರು. ಈ ನಡುವೆ ಅವರು ಕಾಲಭೈರವ ದೇವಾಲಯಕ್ಕೂ ಭೇಟಿ ನೀಡಿ ಮಂಗಳಾರತಿ ಮಾಡಿದರು. 

ವಿಶ್ವನಾಥ ಕಾರಿಡಾರ್‌ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ‘ಶತಮಾನಗಳ ದಾಸ್ಯತನದ ಪರಿಣಾಮವಾಗಿ ಭಾರತ ಯಾವ ಕೀಳರಿಮೆಯ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿತ್ತೋ ಅದರಿಂದ ಇದೀಗ ಹೊರಬಂದಿದೆ ಎಂದರು. ಕಾಶಿ ವಿಶ್ವನಾಥ ಧಾಮವು ಕೇವಲ ಭವ್ಯ ಕಟ್ಟಡವಲ್ಲ, ಭಾರತದ ಧಾರ್ಮಿಕ ಅಸ್ಮಿತೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಸೋಮವಾರ ಉದ್ಘಾಟಿಸಿದ ಕಾಶಿ ವಿಶ್ವನಾಥ ಧಾಮದಲ್ಲಿ ಅನೇಕ ವೈಶಿಷ್ಟ್ಯಗಳಿದ್ದು, ಉದ್ಘಾಟನೆ ಮೇಲೆ ಒಂದಾದ ನಂತರ ಒಂದು ಅನಾವರಣಗೊಳ್ಳತೊಡಗಿವೆ. ಭಾರತಮಾತೆ, ಕಾಶಿ ವಿಶ್ವನಾಥನ ಈಗಿನ ಮಂದಿರ ನಿರ್ಮಾಣ ಮಾಡಿದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್‌ ಹಾಗೂ ಆದಿ ಜಗದ್ಗುರು ಶಂಕರಾಚಾರ್ಯರ ಕಲ್ಲಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಅಹಲ್ಯಾಬಾಯಿ 1780ರಲ್ಲಿ ಈಗಿನ ಮಂದಿರ ನಿರ್ಮಾಣ ಮಾಡಿ ಚಿನ್ನದ ಶಿಖರ ನಿರ್ಮಿಸಿದ್ದರು. ಮಹಾರಾಣಿ ಪುತ್ಥಳಿ ಪಕ್ಕದಲ್ಲೇ ಶಂಕರಾಚಾರ್ಯರ ಪ್ರತಿಮೆ ಇದೆ. ತ್ರಿವರ್ಣಧ್ವಜ ಹಿಡಿದ ಭಾರತಮಾತೆಯ ಆಭರಣಭೂಷಿತ ಕಲ್ಲಿನ ಪ್ರತಿಮೆ ಕೂಡ ನಿರ್ಮಾಣವಾಗಿದ್ದು, ಹಿನ್ನೆಲೆಯಲ್ಲಿ ಭಾರತ ಎಂದು ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಂಗಾ ನದಿಯ ಸಂತ ರವಿದಾಸ್‌ ಘಾಟ್‌ನಲ್ಲಿ ಹಚ್ಚಲಾಗಿದ್ದ ಲಕ್ಷಾಂತರ ದೀಪಗಳನ್ನು ಬೆಳಗಿದ ಈ ಭವ್ಯ ಕಾರ್ಯಕ್ರಮವನ್ನು ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವೀಕ್ಷಿಸಿದರು.

ವಾರಾಣಸಿಯಲ್ಲಿ ಎರಡನೇ ದಿನ ಮೋದಿ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ವಾರಣಸಿಯಲ್ಲಿ ಎರಡು ಸಭೆಗಳನ್ನು ಮಾಡಲಿರುವ ಮೋದಿ, ಬಳಿಕ ದೆಹಲಿಗೆ ಮರಳಲಿದ್ದಾರೆ.

Follow Us:
Download App:
  • android
  • ios