ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರ ಕಟ್ ಮಾಡುತ್ತೇನೆ ಎಂದು ಖಡ್ಗ ಹಿಡಿದು ಕೊಲೆ ಬೆದರಿಕೆ ಹಾಕಿದ ವಿಡಿಯೋವನ್ನು ಮೊಹಮದ್ ರಸೂಲ್ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಾದಗಿರಿ (ಮಾ.04): ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರ ಕಟ್ ಮಾಡುತ್ತೇನೆ ಎಂದು ಖಡ್ಗ ಹಿಡಿದು ಕೊಲೆ ಬೆದರಿಕೆ ಹಾಕಿದ ವಿಡಿಯೋವನ್ನು ಮೊಹಮದ್ ರಸೂಲ್ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಮ್ಮ, ಅಕ್ಕನೆಂದು ತೀವ್ರ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಯಾದಗಿರಿ ಜಿಲ್ಲೆ ರಂಗಪೇಟೆ ನಿವಾಸಿ ರಸೂಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಚಿತ; ಮೂವರನ್ನು ಬಂಧಿಸಿದ ಪೊಲೀಸರು!
ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿದ ರಸೂಲ್ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಮೋದಿ ನೀವು ಸರಿಯಾಗಿ ಆಡಳಿತ ಮಾಡುತ್ತಿಲ್ಲ. ದೇಶದ ಪ್ರಧಾನಮಂತ್ರಿಯಾಗಿ ನಾಟಕ ಮಾಡುತ್ತಿದ್ದೀಯ. ಸುಮ್ಮನೆ ಕಾಂಗ್ರೆಸ್ ಬಗ್ಗೆ ಬೈಯಬೇಡ. ಆ ಪಾರ್ಟಿಯನ್ನು ಬಿಟ್ಟು ನನ್ನ ಜೊತೆಗೆ ಜಗಳಕ್ಕೆ ಬಾ ಎಂದು ಹೇಳಿದ್ದಾನೆ. ಮುಂದುವರೆದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಂ ಮೋದಿ ನಿನ್ನ ದೇಹದ ನರಗಳನ್ನು ಕಟ್ ಮಾಡುತ್ತೇನೆ ಎಂದು ಖಡ್ಗವನ್ನು ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿದ್ದಾನೆ.
ಪ್ರಧಾನಿ ಮೋದಿ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯನ್ನು ಮೊಹಮ್ಮದ್ ರಸೂಲ್ ಕಡ್ದಾರೆ ಎಂದು ಗುರುತಿಸಲಾಗಿದೆ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದ ರಂಗಂಪೇಟೆಯ ನಿವಾಸಿ ಆಗಿರುವ ರಸೂಲ್ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿ ಅಲ್ಲಿವೇ ವಾಸವಾಗಿದ್ದಾನೆ. ಈಗ ಮೋದಿಗೆ ಬೈಯುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ. ಆತನ ಮೇಲೆ ಈಗ ಸ್ಥಳೀಯ ಬಿಜೆಪಿ ನಾಯಕರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಲಾಟೆ ಮಾಡಿ ಸಾಯಲು ಹೊರಟ ಮಗ ರಕ್ಷಿಸಲು ಹೋದ ತಾಯಿ ಕೂಡ ರೈಲಿಗೆ ಬಲಿ, ತಂಗಿ ಆತ್ಮಹತ್ಯೆ!
ಸ್ಥಳೀಯರ ದೂರನ್ನು ಆಧರಿಸಿ ಸುರಪುರ ಪೋಲಿಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಐಪಿಸಿ ಸೆಕ್ಷನ್ IPC 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಆರೋಪಿಗಾಗಿ ಸುರಪುರ ಪೊಲೀಸರು ಹೈದರಾಬಾದ್ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಆರಂಭಿಸಿದ್ದಾರೆ.
