ನವದೆಹಲಿ(ಜು.02): ಟಿಕ್‌ ಟಾಕ್‌ ಸಹಿತ 59 ಚೀನೀ ಆ್ಯಪ್‌ಗಳಿಗೆ ದೇಶದಿಂದ ಗೇಟ್‌ಪಾಸ್‌ ನೀಡಿದ ಬೆನ್ನಲ್ಲೇ, ಚೀನಾ ಮೂಲದ ಸಿನಾ ವೆಬಿಯೋ ಎಂಬ ಟ್ವೀಟರ್‌ ಮಾದರಿಯ ಸಾಮಾಜಿಕ ಜಾಲತಾಣಕ್ಕೆ ಪ್ರಧಾನಿ ಮೋದಿ ಗುಡ್‌ಬೈ ಹೇಳಿದ್ದಾರೆ.

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ವೆಬಿಯೋದಲ್ಲಿದ್ದ ತಮ್ಮ ಪೋಸ್ಟ್‌, ಪ್ರೊಫೈಲ್‌ ಚಿತ್ರ ಹಾಗೂ ಕಮೆಂಟ್‌ಗಳನ್ನು ಪ್ರಧಾನಿ ಮೋದಿ ಡಿಲೀಟ್‌ ಮಾಡಿದ್ದಾರೆ. ವಿವಿಐಪಿಗಳ ಖಾತೆ ನಿಷ್ಕ್ರಿಯಕ್ಕೆ ವೆಬಿನಾರ್‌ನಲ್ಲಿ ಕಠಿಣ ನಿಯಮಾವಳಿಗಳಿರುವುದರಿಂದ, ಹಂಚಲಾಗಿದ್ದ 115 ಪೋಸ್ಟ್‌ಗಳ ಪೈಕಿ 113 ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ.

ಚೀನಾ ಅಧ್ಯಕ್ಷರ ಜತೆಗಿರುವ ಎರಡು ಫೋಟೋಗಳು ಮಾತ್ರ ಬಾಕಿಯಾಗಿದೆ. ಚೀನಾ ಅಧ್ಯಕ್ಷರು ಇರುವ ಫೋಟೋ ಡಿಲೀಟ್‌ ಮಾಡಲು ಹಲವು ತಾಂತ್ರಿಕ ನಿಯಮಾವಳಿಗಳಿವೆ. ಹೀಗಾಗಿ ಅವು ಉಳಿದುಕೊಂಡಿದೆ.