ಜಿ20 ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ-ವ್ಲಾಡಿಮಿರ್‌ ಪುಟಿನ್‌ ಮಾತುಕತೆ!

ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವೆ ಕೆಲವು ಮಾತುಕತೆಗಳು ನಡೆದಿವೆ. ಅಧ್ಯಕ್ಷ ಪುಟಿನ್ ಅವರು 9-10 ಸೆಪ್ಟೆಂಬರ್ 2023 ರಂದು ನವದೆಹಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗಹಿಸಲು ಸಾಧ್ಯವಾಗೋದಿಲ್ಲ ಎಂದಿದ್ದಾರೆ. 
 

President Vladimir putin called PM Narendra Modi before G20 know what issues were discussed between the two leaders san

ನವದೆಹಲಿ (ಆ.28): ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳ ಪ್ರಗತಿಯ ಬಗ್ಗೆ ಚರ್ಚೆ ಮಾಡಿದರು. ಅದರೊಂದಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯ ಬಗ್ಗೆಯೂ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತೂ ಚರ್ಚಿಸಿದ್ದಾರೆ. ಅಧ್ಯಕ್ಷ ಪುಟಿನ್ ಅವರು 9-10 ಸೆಪ್ಟೆಂಬರ್ 2023 ರಂದು ನವದೆಹಲಿಯಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದು, ರಷ್ಯಾವನ್ನು ಒಕ್ಕೂಟದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರತಿನಿಧಿಸುತ್ತಾರೆ ಎಂದು ಮೋದಿಗೆ ಮಾಹಿತಿ ನೀಡಿದ್ದಾರೆ. ರಷ್ಯಾದ ನಿರ್ಧಾರವನ್ನು ಒಪ್ಪಿದ ಪ್ರಧಾನಿ, ಭಾರತದ ಜಿ20 ಅಧ್ಯಕ್ಷರ ಅಡಿಯಲ್ಲಿ ಎಲ್ಲಾ ಉಪಕ್ರಮಗಳಿಗೆ ರಷ್ಯಾದ ನಿರಂತರ ಬೆಂಬಲಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಹೇಳಿದರು. ಇಬ್ಬರೂ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು.

ಚಂದ್ರನ ದಕ್ಷಿಣ ಧ್ರುವದ ಬಳಿ ಇಸ್ರೋ  ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಬಗ್ಗೆ ನರೇಂದ್ರ ಮೋದಿಯವರನ್ನು ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಅಭಿನಂದಿಸಿದರು. ಬಾಹ್ಯಾಕಾಶ ಪರಿಶೋಧನೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ತಮ್ಮ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಈ ಸಂವಾದದಲ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಫಲಿತಾಂಶಗಳನ್ನು ಚರ್ಚಿಸಲಾಯಿತು.

ಇದೇ ವೇಳೆ ಸಮ್ಮೇಳನದಲ್ಲಿ ಪ್ರಮುಖವಾಗಿ ಬ್ರಿಕ್ಸ್ ವಿಸ್ತರಣೆ ಕುರಿತ ಒಪ್ಪಂದಗಳ ಮಹತ್ವವನ್ನು ಒತ್ತಿ ಹೇಳಲಾಯಿತು. ಇದೇ ವೇಳೆ 2024ರ ಜನವರಿ 1 ರಿಂದ ರಷ್ಯಾದ ಅಧ್ಯಕ್ಷತೆಯಲ್ಲಿ ಮುಂದಿನ ಜಿ20 ಶೃಂಗಸಭೆಯ ನಡೆಯಲಿದೆ. ಈ ಸಂದರ್ಭದಲ್ಲಿ ನಿಕಟ ಸಂವಾದವನ್ನು ನಡೆಯಲು ಉಭಯ ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಈ ದೂರವಾಣಿ ಸಂಭಾಷಣೆಯ ಹೊರತಾಗಿ ಹೊಸ ದೆಹಲಿಯಲ್ಲಿ ನಡೆಯಲಿರುವ ಮುಂಬರುವ ಜಿ 20 ಶೃಂಗಸಭೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಬಹಿರಂಗವಾಗಿದೆ. ಪುಟಿನ್ ಭಾರತಕ್ಕೆ ಬರುವುದಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಖಚಿತಪಡಿಸಿದ್ದರು. ಜಿ20ಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರತಿನಿಧಿಸಲಿದ್ದಾರೆ. ವಿಮಾನ ಅಪಘಾತದಲ್ಲಿ ಯೆವ್ಗೆನಿ ಪ್ರಿಗೋಜಿನ್ ಸಾವಿನಲ್ಲಿ ಕ್ರೆಮ್ಲಿನ್ ಭಾಗಿಯಾಗಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಪೆಸ್ಕೋವ್ ಹೇಳಿದ್ದಾರೆ. ಪ್ರಿಗೋಜಿನ್ ಸಾವಿನ ಹಿಂದೆ ಕ್ರೆಮ್ಲಿನ್ ಕೈವಾಡವಿದೆ ಎಂದು ಪಾಶ್ಚಿಮಾತ್ಯ ದೇಶಗಳು ಹೇಳುತ್ತಿದೆ. ಆದರೆ, ಇದು ಸಂಪೂರ್ಣ ಸುಳ್ಳು ಎಂದು ಪೆಸ್ಕೋವ್ ಹೇಳಿದ್ದಾರೆ.

 

Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

ಜಿ-20ಗೆ ಖಾಯಂ ಅಧ್ಯಕ್ಷರಿಲ್ಲ. ಅದರ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಸದಸ್ಯ ರಾಷ್ಟ್ರವು ಶೃಂಗಸಭೆಯನ್ನು ಆಯೋಜಿಸುತ್ತದೆ. ಭಾರತವು 1 ಡಿಸೆಂಬರ್ 2022 ರಿಂದ ಅದರ ಅಧ್ಯಕ್ಷರಾಗಿರುತ್ತದೆ. ಭಾರತವು ನವೆಂಬರ್ 2023 ರವರೆಗೆ G-20 ಅಧ್ಯಕ್ಷರಾಗಿರುತ್ತದೆ. G20 ನಾಯಕರ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ.

ಚಂದ್ರಯಾನ ಲೂನಾ 25 ನೌಕೆ ಪತನದಿಂದ ಅಸ್ವಸ್ಥಗೊಂಡ ರಷ್ಯಾ ವಿಜ್ಞಾನಿ ಆಸ್ಪತ್ರೆ ದಾಖಲು!

Latest Videos
Follow Us:
Download App:
  • android
  • ios