Asianet Suvarna News Asianet Suvarna News

1000 ವರ್ಷಗಳ ಅಭಿವೃದ್ಧಿಗೆ ಭದ್ರ ಬುನಾದಿ ಸಿದ್ಧಪಡಿಸಲಾಗುತ್ತಿದೆ: ಮೋದಿ

ಮುಂದಿನ 1000 ವರ್ಷಗಳ ಅಭಿವೃದ್ಧಿಗಾಗಿ ಭಾರತ ಬುನಾದಿಯನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನಕ್ಕೇರುವುದಷ್ಟೇ ನಮ್ಮ ಆದ್ಯತೆಯಲ್ಲ, ಆ ಪಟ್ಟವನ್ನು ಉಳಿಸಿಕೊಳ್ಳುವುದು ಕೂಡ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

preparing Foundation for 1000 years of long development: PM Modi akb
Author
First Published Sep 17, 2024, 9:37 AM IST | Last Updated Sep 17, 2024, 10:34 AM IST

ಪಿಟಿಐ ಗಾಂಧಿನಗರ: ದೇಶದ ಕ್ಷಿಪ್ರ ಪ್ರಗತಿಗಾಗಿ ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಪ್ರತಿಯೊಂದು ವಲಯ ಹಾಗೂ ಅಂಶಗಳಿಗೂ ಸ್ಪಂದಿಸಲು ಯತ್ನಿಸಿದ್ದೇವೆ. ನಮ್ಮ ಸರ್ಕಾರದ ಆದ್ಯತೆಗಳು, ವೇಗ ಹಾಗೂ ಪ್ರಮಾಣವನ್ನು ನೀವು ಗಮನಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದಿನ 1000 ವರ್ಷಗಳ ಅಭಿವೃದ್ಧಿಗಾಗಿ ಭಾರತ ಬುನಾದಿಯನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನಕ್ಕೇರುವುದಷ್ಟೇ ನಮ್ಮ ಆದ್ಯತೆಯಲ್ಲ, ಆ ಪಟ್ಟವನ್ನು ಉಳಿಸಿಕೊಳ್ಳುವುದು ಕೂಡ ಆಗಿದೆ. ಅಯೋಧ್ಯೆ ಹಾಗೂ ಇತರೆ 16 ನಗರಳನ್ನು ಮಾದರಿ ಸೌರನಗರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

4ನೇ ಆವೃತ್ತಿಯ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್‌ಪೋ (ರೀ-ಇನ್‌ವೆಸ್ಟ್‌ 2024) ಅನ್ನು ಗುಜರಾತಿನ ಗಾಂಧಿನಗರದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ಭಾರತೀಯರಷ್ಟೆ ಅಲ್ಲ, ಇಡೀ ವಿಶ್ವವೇ ಭಾರತ 21ನೇ ಶತಮಾನದ ಯಶಸ್ವಿ ದೇಶ ಎಂಬ ಭಾವನೆ ಹೊಂದಿದೆ ಎಂದು ತಿಳಿಸಿದರು.

ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಧರಿಸುವ ಇಷ್ಟದ 3 ಬಣ್ಣದ ಸೂಟ್‌ಗಳಿವು!

ಹಸಿರು ಭವಿಷ್ಯ ಹಾಗೂ ನೆಟ್‌ ಜೀರೋ ಎಂಬುದು ನಮಗೆ ಅಲಂಕಾರಿಕ ಪದಗಳಲ್ಲ. ಇದು ದೇಶದ ಅಗತ್ಯಗಳು. ಅದನ್ನು ಸಾಧಿಸಲು ಬದ್ಧವಾಗಿದ್ದೇವೆ. 21ನೇ ಶತಮಾನವು ಭಾರತದ ಪಾಲಿಗೆ ಸೌರಶಕ್ತಿಯಲ್ಲಿ ಸುವರ್ಣ ಯುಗವಾಗಲಿದೆ ಎಂದು ತಿಳಿಸಿದರು.

ಹೂಡಿಕೆಗೆ ಜೋಶಿ ಮನವಿ:

ದೇಶದ ಹಸಿರು ಯೋಜನೆಗಳಿಗೆ 32.45 ಲಕ್ಷ ಕೋಟಿ ರು. ಹಣಕಾಸು ನೆರವು ನೀಡಲು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಬದ್ಧತೆ ವ್ಯಕ್ತಪಡಿಸಿವೆ. ಹೀಗಾಗಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದು ಸಮಾರಂಭದಲ್ಲಿ ಹಾಜರಿದ್ದ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.

ಮೋದಿಗೆ ಇಂದು 74ನೇ ಜನ್ಮದಿನ ಸಂಭ್ರಮ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 74ನೇ ವಸಂತಕ್ಕೆ ಕಾಲಿಡಲಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ಬಿಜೆಪಿ ಒಂದೆಡೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಮೋದಿ ಅಭಿಮಾನಿಗಳು ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಜ್ಮೀರ್‌ನ ಷರೀಫ್ ದರ್ಗಾವು 4 ಸಾವಿರ ಕೆಜಿಯ ಸಸ್ಯಾಹಾರಿ ಲಂಗೇರ್ ಆಹಾರ ವಿತರಿಸಲು ಮುಂದಾಗಿದೆ. ಚೆನ್ನೈ ಮೂಲದ 13 ವರ್ಷದ ಬಾಲಕಿ ಮೋದಿ ಚಿತ್ರವನ್ನು 800 ಕೆ.ಜಿ ಸಿರಿಧಾನ್ಯ ಬಳಸಿ ತಯಾರಿಸಿದ್ದಾಳೆ. ತವರು ರಾಜ್ಯ ಗುಜರಾತಿನ ಸೂರತ್‌ನಲ್ಲಿ ಪ್ರಧಾನಿ ಜನ್ಮದಿನದಂದು ವ್ಯಾಪಾರಿಗಳು ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

74ರ ಇಳಿವಯಸ್ಸಿನಲ್ಲೂ ಚುರುಕುತನ; ಫಿಟ್‌ನೆಸ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ!

ಇಂದಿನಿಂದ ಮೋದಿ ಕಾಣಿಕೆಗಳ ಹರಾಜು
ಮೋದಿ ಅವರಿಗೆ ಬಂದ ಸುಮಾರು 600 ಕಾಣಿಕೆಗಳನ್ನು ಜನ್ಮದಿನವಾದ ಸೆ.17ರಿಂದ ಅ.2ರವರೆಗೆ ಹರಾಜು ಹಾಕಲಾಗುತ್ತದೆ. ಮೂಲ ಬೆಲೆ 1.5 ಕೋಟಿ ರುಪಾಯಿ. ಮತ್ತೊಂದೆಡೆ ದೇಶದಲ್ಲಿ ಎನ್‌ಡಿಎ ಸರ್ಕಾರ ಸೆ.15ಕ್ಕೆ ಅಧಿಕಾರಕ್ಕೆ ಬಂದು100ದಿನಗಳು ಸಂದಿದೆ. ಹೀಗಾಗಿ ಮೋದಿ ಹುಟ್ಟುಹಬ್ಬದ ದಿನ ಬಿಜೆಪಿ ನಾಯಕರು 100 ದಿನದ ಸಾಧನೆ ವಿವರಿಸಲಿದ್ದಾರೆ.
 

Latest Videos
Follow Us:
Download App:
  • android
  • ios