ಕಾರ್ಗಿಲ್ ವಿಜಯ ದಿವಸಕ್ಕೆ ಭರದ ಸಿದ್ಧತೆ: ದೆಹಲಿಯಿಂದ ಕಾರ್ಗಿಲ್‌ಗೆ ವೀರನಾರಿಯರ ಬೈಕ್ ರೈಡ್
ಕಾರ್ಗಿಲ್ ವಿಜಯ ದಿವಸಕ್ಕೆ ಸೇನಾಪಡೆ ಭರದ ಸಿದ್ಧತೆ ನಡೆಸುತ್ತಿದೆ. ಭಾರತ ಪಾಕಿಸ್ತಾನ ನಡುವಿನ ಈ ಯುದ್ಧದಲ್ಲಿ ಭಾರತ ಗೆಲುವಿನ ಪತಾಕೆ ಹರಿಸಿ ಜುಲೈ 26ಕ್ಕೆ 24 ವರ್ಷಗಳು ತುಂಬುತ್ತಿದ್ದು, ಈ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಯೋಧರ ನೆನಪಿಗಾಗಿ ಅವರ ಶೌರ್ಯ ತ್ಯಾಗದ ಸಂಕೇತವಾಗಿ ಈ ವಿಜಯ್ ದಿವಸವನ್ನು ಪ್ರತಿವರ್ಷ ಸೇನೆ ಆಚರಿಸಿಕೊಂಡು ಬರುತ್ತಿದೆ.
ಕಾರ್ಗಿಲ್: ಕಾರ್ಗಿಲ್ ವಿಜಯ ದಿವಸಕ್ಕೆ ಸೇನಾಪಡೆ ಭರದ ಸಿದ್ಧತೆ ನಡೆಸುತ್ತಿದೆ. ಭಾರತ ಪಾಕಿಸ್ತಾನ ನಡುವಿನ ಈ ಯುದ್ಧದಲ್ಲಿ ಭಾರತ ಗೆಲುವಿನ ಪತಾಕೆ ಹರಿಸಿ ಜುಲೈ 26ಕ್ಕೆ 24 ವರ್ಷಗಳು ತುಂಬುತ್ತಿದ್ದು, ಈ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಯೋಧರ ನೆನಪಿಗಾಗಿ ಅವರ ಶೌರ್ಯ ತ್ಯಾಗದ ಸಂಕೇತವಾಗಿ ಈ ವಿಜಯ್ ದಿವಸವನ್ನು ಪ್ರತಿವರ್ಷ ಸೇನೆ ಆಚರಿಸಿಕೊಂಡು ಬರುತ್ತಿದೆ. ಲಡಾಕ್‌ನ ದ್ರಾಸ್ ಬಳಿ ಇರುವ ಕಾರ್ಗಿಲ್ ಯುದ್ಧಸ್ಮಾರಕದ ಬಳಿ ಸೇನೆಯಿಂದ ಬರದ ಸಿದ್ಧತೆ ನಡೆಯುತ್ತಿದ್ದು, ಕೆಲವು ಯೋಧರು ಇಲ್ಲಿ ಪೇಟಿಂಗ್ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತದ ರಕ್ಷಣಾ ಪಡೆಯ (Indian Defense Force) ಮೂರು ವಿಭಾಗದಲ್ಲಿರುವ 26 ಮಹಿಳಾ ಯೋಧರು ಒಟ್ಟಾಗಿ ನಾಳೆ ದೆಹಲಿಯಿಂದ ಕಾರ್ಗಿಲ್ ಸ್ಮಾರಕದ ಬಳಿಗೆ 900 ಕಿಲೋ ಮೀಟರ್ ದೂರದ ಬೈಕ್ ಜಾಥಾ ನಡೆಸಲಿದ್ದಾರೆ. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳದಿಂದ ನಾಳೆ(ಜುಲೈ18) ಈ ಬೈಕ್ ಜಾಥಾ ಆರಂಭವಾಗಲಿದ್ದು, ಜುಲೈ 26 ರ ಕಾರ್ಗಿಲ್ ವಿಜಯ ದಿವಸದಂದು ಈ ಮಹಿಳಾ ಬೈಕರ್‌ಗಳ ತಂಡ ಲಡಾಕ್‌ನ ದ್ರಾಸ್ ಬಳಿ ಇರುವ ಕಾರ್ಗಿಲ್ ಯುದ್ಧ ಸ್ಮಾರಕ ಸ್ಥಳವನ್ನು ತಲುಪಲಿದೆ.
21 ವರ್ಷದ ಬಳಿಕ ಯೋಧನ ಜೊತೆ PM Modi ಪುನರ್ಮಿಲನ
ಭಾರತೀಯ ಸೇನಾ ಮುಖ್ಯಸ್ಥ (Army general) ಜನರಲ್ ಮನೋಜ್ ಪಾಂಡೆ ಸೇನಾ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆ ಅರ್ಚನಾ ಪಾಂಡೆ (Archana Pande) ಈ ಬೈಕ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಶೌರ್ಯ ಹಾಗೂ ತ್ಯಾಗದ ಸ್ಮರಣಾರ್ಥಈ ಬೈಕ್ ಜಾಥಾವನ್ನು ಆಯೋಜಿಸಲಾಗಿದೆ. 1999ರಲ್ಲಿ ಪಾಕಿಸ್ತನದ ಜೊತೆ ನಡೆದ ಈ ಯುದ್ಧದಲ್ಲಿ 674 ವೀರಯೋಧರು ದೇಶಕ್ಕಾಗಿ ತಮ್ಮ ಪ್ರಾಣ ತೆತ್ತಿದ್ದರು.
ಈ ಬೈಕ್ ರಾಲಿಯೂ ಮಹಿಳಾ ಬೈಕರ್‌ಗಳ (women Bikers) ಮೂಲಕ ಮಹಿಳೆಯರ ದಿಟ್ಟ ಮತ್ತು ಅದಮ್ಯ ಮನೋಭಾವವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ, ಆ ಮೂಲಕ ರಾಷ್ಟ್ರಮಟ್ಟದಲ್ಲಿ 'ನಾರಿ ಸಶಕ್ತಿಕರಣ' ಧ್ಯೇಯಕ್ಕೆ ಕೊಡುಗೆ ನೀಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 26 ಬೈಕರ್‌ಗಳಲ್ಲಿಲ್ಲಿ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳು ಮತ್ತು ಇನ್ನು ನಿಯೋಜನೆಗೊಳ್ಳದ ಅಧಿಕಾರಿಗಳು, ಸೇವೆಯಲ್ಲಿರುವ ಮತ್ತು ನಿವೃತ್ತ ಸೇನಾ ಸಿಬ್ಬಂದಿಯ ಸಂಗಾತಿಗಳು ಮತ್ತು 'ವೀರ ನಾರಿಯರು' ಸೇರಿದ್ದಾರೆ. ಯುದ್ಧದಲ್ಲಾಗಲಿ ಅಥವಾ ಸೇನಾ ಕಾರ್ಯಾಚರಣೆಯಲ್ಲಾಗಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಶಸ್ತ್ರ ಪಡೆ ಸಿಬ್ಬಂದಿಯ ಪತ್ನಿಯನ್ನು ವೀರ್ ನಾರಿ ಎಂದು ಕರೆಯಲಾಗುತ್ತದೆ.
ಕಾರ್ಗಿಲ್ ವಿಜಯ ದಿವಸಕ್ಕೆ 23 ವರ್ಷ, ಎಲ್ಲೂ ಕೇಳಿರದ ಕಾರ್ಗಿಲ್ ರಣಕಲಿಗಳ ಕಥಾನಕ!
ಭಾರತೀಯ ಸೇನೆಯಿಂದ ಇಬ್ಬರು ವೀರ ನಾರಿಗಳಿದ್ದು, 14 ಜನ ಸೇನೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿಗಳು, ಇಬ್ಬರು ಭಾರತೀಯ ವಾಯುಸೇನೆಯ (Indian Airforce) ಸಿಬ್ಬಂದಿ ಹಾಗೂ ಓರ್ವ ಭಾರತೀಯ ನೌಕಾಪಡೆ ಸಿಬ್ಬಂದಿ ಹಾಗೂ ಇಬ್ಬರು ಇನ್ನು ನಿಯೋಜಿಲ್ಪಡದ ಅಧಿಕಾರಿಗಳು ಈ ಬೈಕ್ ರಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಜೊತೆಗೆ ಈ ಒಂಬತ್ತು ದಿನಗಳ ಬೈಕ್ ಜಾಥಾದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳ ಸಂಗಾತಿಯಾಗಿರುವ ಎಂಟು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಹಾಗೆಯೇ ಇಬ್ಬರು ಅಧಿಕಾರಿಗಳನ್ನು ಮೀಸಲು ಇಡಲಾಗಿದೆ.
ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳದಿಂದ ನಾಳೆ ಹೋರಾಡುವ ಈ ವೀರನಾರಿಯರು ಹರ್ಯಾಣ ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದ ಹಲವು ನಗರಗಳನ್ನು ಕ್ರಮಿಸಿ ಕೊನೆಯದಾಗಿ ಲಡಾಕ್‌ನ ಯುದ್ಧ ಸ್ಮಾರಕವನ್ನು ತಲುಪಲಿದ್ದಾರೆ. ನಾರ್ತರ್ನ್ ಕಮಾಂಡ್‌ನ ಹಡ್ ಕ್ವಾಟರ್ ಅಧೀನದಲ್ಲಿ ಈ ರಾಲಿ ಆಯೋಜಿಸಲಾಗಿದೆ. ಕಾರ್ಗಿಲ್ ಯುದ್ಧವೂ (Kargil war) ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮೂರು ತಿಂಗಳ ಸುದೀರ್ಘ ಕದನವಾಗಿತ್ತು. ಇದು ಮೇ 1999 ರಲ್ಲಿ ಪ್ರಾರಂಭವಾದ ಈ ಯುದ್ಧವೂ ಸುಮಾರು ಮೂರು ತಿಂಗಳ ಕಾಲ ನಡೆದು ಜುಲೈ 26 ರಂದು ಭಾರತ ಕಾರ್ಗಿಲ್ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯಿತು. ಸುಮಾರು 1,500 ಪಾಕಿಸ್ತಾನಿ ಸೈನಿಕರು ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕವನ್ನು ಕಡಿದು ಹಾಕುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭಾರತೀಯ ಪ್ರದೇಶಕ್ಕೆ ಒಳನುಗ್ಗಿದ ನಂತರ ಈ ಯುದ್ಧ ಪ್ರಾರಂಭವಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ, 674 ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರಲ್ಲಿ ನಾಲ್ವರು ಯೋಧರಿಗೆ ಪರಮ ವೀರ ಚಕ್ರಗಳು, 10 ಯೋಧರಿಗೆ ಮಹಾವೀರ ಚಕ್ರಗಳು ಮತ್ತು 70 ವೀರ ಚಕ್ರಗಳನ್ನು ಮರಣೋತ್ತರವಾಗಿ ನೀಡಿ ಪುರಸ್ಕರಿಸಲಾಯಿತು.