ಕೊರೋನಾ ಹಾವಳಿಗೆ ಬೆಚ್ಚಿಬಿದ್ದ ಭಾರತ| ಎರಡನೇ ಅಲೆ, ದೇಶದಲ್ಲಿ ಲಕ್ಷಾಂತರ ಹೊಸ ಪ್ರಕರಣಗಳು| ಬಿಸಿಲಿದ್ದರೂ, ಕೈಯ್ಯಲ್ಲೊಂದು ಲಾಠಿ ಹಿಡಿದು ರಸ್ತೆಯಲ್ಲಿ ಓಡಾಡುವವರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ ಗರ್ಭಿಣಿ ಮಹಿಳಾ ಡಿಎಸ್‌ಪಿ

ರಾಯ್ಪುರ(ಏ,.22): ದೇಶದಲ್ಲಿ ಮತ್ತೊಮ್ಮ ಕೊರೋನಾ ಸೋಂಕು ಆವರಿಸಿದೆ. ಸದ್ಯ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದರ ಪರಿಣಾಮ ಎಂಬಂತೆ ಮತ್ತೊಮ್ಮೆ ರಾಜ್ಯ ಸರ್ಕಾರ ಕರ್ಫ್ಯೂ ಹಾಗೂ ಲಾಕ್‌ಡೌನ್ ಮೊರೆ ಹೋಗಿವೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೊರೊನಾಗೆ ಸಂಬಂಧಿಸಿದ ಶಾಕಿಂಗ್ ವಿಡಿಯೋಗಳೂ ಹರಿದಾಡಲಾರಂಭಿಸಿವೆ. ಹೀಗಿರುವಾಗಲೇ ಸದ್ಯ ಮಹಿಳಾ ಡಿಎಸ್‌ಪಿಯೊಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದು ಅನೇಕ ಅಧಿಕಾರಿ ಹಾಗೂ ಜನ ಸಾಮಾನ್ಯರಿಗೆ ಪ್ರೇರಣೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ ಎಲ್ಲಾ ಕಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಪೊಲೀಸರು ಹಾಆಗೂ ಆಸಳಿತಾಧಿಕಾರಿಗಳೂ ತೀವ್ರ ನಿಗಾ ಇರಿಸುತ್ತಿದ್ದಾರೆ. ಹೀಗಿರುವಾಗ ಛತ್ತೀಸ್‌ಗಢದ ದುರ್ಗ್ ನಿವಾಸಿ, ದಂತೇವಾಡಾದ ಡಿಎಸ್‌ಪಿ ಶಿಲ್ಪಾ ಸಾನೂ ತಮ್ಮ ಕೆಲಸದ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. 

ಲಭ್ಯವಾದ ಮಾಹಿತಿ ಅನ್ವಯ ಡಿಎಸ್‌ಪಿ ಶಿಲ್ಪಾ ಗರ್ಭಿಣಿಯಾಗಿದ್ದಾರೆ. ಹೀಗಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸದ್ಯ ವೈರಲ್ ಆದ ಫೋಟೋದಲ್ಲೂ ಅವರು ಕೈಯ್ಯಲ್ಲಿ ಲಾಠಿ ಹಿಡಿದು ಜನರ ಬಳಿ ಏನೋ ಹೇಳುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಹಾಜರಾಗಿ, ಕೊರೋನಾ ಕಾಲದಲ್ಲಿ ಎಚ್ಚರ ಬಹಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

Scroll to load tweet…

ಅವರ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಐಪಿಎಸ್‌ ಆಫೀಸರ್ ದೀಪಾಂಶು ಕಾಬ್ರಾ ಶೇರ್ ಮಾಡಿದ್ದಾರೆ. ಜೊತೆಗೆ ಅವರ ಧೈರ್ಯ ಹಾಗೂ ಕರ್ತವ್ಯಪ್ರಜ್ಞೆಗೆ ಸಲಾಂ ಎಂದಿದ್ದಾರೆ.