ಕಂಪನಿಗಳ ಆಟಾಟೋಪದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬುಧವಾರವಷ್ಟೇ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶ ನಾಲಯವು ದರ ಇಳಿಕೆ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. 

ನವದೆಹಲಿ(ಜ.30): ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ದರ ಏರಿಕೆ ಬರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಡಿವಾಣ ಹಾಕಿದ್ದಾರೆ. 

ಕಂಪನಿಗಳ ಈ ಆಟಾಟೋಪದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬುಧವಾರವಷ್ಟೇ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶ ನಾಲಯವು ದರ ಇಳಿಕೆ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. 

ಕುಂಭಮೇಳದ ವ್ಯಂಗ್ಯ, ಖರ್ಗೆ ಮನಸ್ಥಿತಿಗೆ ಕನ್ನಡಿ: ಶೆಟ್ಟರ್ ಟೀಕೆ

ಜೊತೆಗೆ ದರವನ್ನು ಮಿತಿಯಲ್ಲೇ ಇರಿಸುವಂತೆ ಸೂಚಿಸಿದೆ. ಪರಿಣಾಮವಾಗಿ ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳು ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್ ದರವನ್ನು ಶೇ.30ರಿಂದ ಶೇ.50ರವರೆಗೂ ಇಳಿಸಿವೆ. ವಿಮಾನ ಟಿಕೆಟ್ ದರ ಏರಿಕೆ ಬಗ್ಗೆ ಬುಧವಾರ ಬೆಳಗ್ಗೆ ಕಳವಳ ವ್ಯಕ್ತಪಡಿಸಿ ಜೋಶಿ ಅವರು ಅವರು ಪತ್ರ ಬರೆದಿದ್ದರು.

* ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳ ನಿಗದಿ ಹಿನ್ನೆಲೆ
* ದೇಶದ ಮೂಲೆಮೂಲೆಗಳಿಂದ ಪ್ರಯಾಗರಾಜ್‌ಗೆ ತೆರಳುತ್ತಿರುವ ಅಸಂಖ್ಯಾತ ಸಾರ್ವಜನಿಕರು
* ಬೇಡಿಕೆ ಹೆಚ್ಚಾದ್ದರಿಂದ ವಿಮಾನ ಟಿಕೆಟ್ ದರ ಭಾರಿ ಹೆಚ್ಚಳವಾಗಿತ್ತು
* ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಧ್ಯ ಪ್ರವೇಶ
* ಇಂಡಿಗೋ ವಿಮಾನಯಾನ ಕಂಪನಿಯ ಟಿಕೆಟ್ ದರ ಶೇ.30 ರಿಂದ ಶೇ.50ರ ವರೆಗೂ ಕಡಿತ