* ಮತ್ತೆ ಹೇಗೆ ಹಿಡಿತ ಸಾಧಿಸಲಿದೆ ಕಾಂಗ್ರೆಸ್? ಪಿಕೆ ಪ್ಲಾನ್‌ ರೆಡಿ* ಕಾಂಗ್ರೆಸೇತರರಿಗೂ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ* ಹೀಗಿದೆ ಕಾಂಗ್ರೆಸ್ ಉಳಿಸುವ ತಂತ್ರ

ನವದೆಹಲಿ(ಏ.21): 2014ರ ಲೋಕಸಭೆ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್‌ ಘನತೆ ನಿರಂತರವಾಗಿ ಕುಸಿಯುತ್ತಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಕೈ ಜೋಡಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ದೊಡ್ಡ ನಾಯಕರೊಂದಿಗೆ ಪ್ರಶಾಂತ್ ಕಿಶೋರ್ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ, ಪ್ರಶಾಂತ್ ಕಿಶೋರ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಪ್ರಸ್ತುತಿಯನ್ನು ಸಹ ನೀಡಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಈ ಸಂಪೂರ್ಣ ಯೋಜನೆಯ ಬ್ಲೂ ಪ್ರಿಂಟ್ ಮುನ್ನೆಲೆಗೆ ಬಂದಿದೆ. ಪ್ರಶಾಂತ್ ಕಿಶೋರ್ ಅವರು ಈ ಪಿಪಿಟಿಯನ್ನು 2021ರ ಜೂನ್‌ನಲ್ಲಿ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

ಆಜ್ ತಕ್ ಪ್ರಶಾಂತ್ ಕಿಶೋರ್ ಅವರ ಯೋಜನೆಯ ವಿಶೇಷ ಪ್ರತಿ ನಬಗ್ಗೆ ವರದಿ ಪ್ರಕಟಿಸಿದೆ. ಇದರಲ್ಲಿ ಅವರು ಮಹಾತ್ಮಾ ಗಾಂಧಿಯವರ ಮಾತುಗಳಾದ ''The Indian National Congress… cannot be allowed to die, it can only die with the nation'' "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಸಾಯಲು ಬಿಡಲಾಗುವುದಿಲ್ಲ, ಅದು ರಾಷ್ಟ್ರದೊಂದಿಗೆ ಮಾತ್ರ ಸಾಯಬಹುದು". ಅಂದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಎಂದಿಗೂ ಸಾಯಲು ಬಿಡಲಾಗುವುದಿಲ್ಲ, ಅದು ರಾಷ್ಟ್ರದೊಂದಿಗೆ ಮಾತ್ರ ಸಾಯಬಹುದು" ಮೂಲಕ ಆರಂಭಿಸಲಾಗಿದೆ.

PK ಅಂದರೆ ಪ್ರಶಾಂತ್ ಕಿಶೋರ್ ಅವರು ತಮ್ಮ ಪ್ರಸ್ತುತಿಯಲ್ಲಿ ಭಾರತದ ಜನಸಂಖ್ಯೆ, ಮತದಾರರು, ವಿಧಾನಸಭಾ ಸ್ಥಾನಗಳು, ಲೋಕಸಭಾ ಸ್ಥಾನಗಳ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರು, ಯುವಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳ ಸಂಖ್ಯೆಯನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಇದು 2024 ರಲ್ಲಿ 13 ಕೋಟಿ ಮೊದಲ ಬಾರಿಗೆ ಮತದಾರರ ಮೇಲೆ ಕೇಂದ್ರೀಕರಿಸಿದೆ.

ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ವಿವರಿಸಿದ ಪಿ.ಕೆ

ಪ್ರಸ್ತುತ ಕಾಂಗ್ರೆಸ್ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 90 ಸಂಸದರನ್ನು ಹೊಂದಿದೆ ಎಂದು ಪ್ರಶಾಂತ್ ಕಿಶೋರ್ ತಮ್ಮ ಪ್ರಸ್ತುತಿಯಲ್ಲಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ 800 ಶಾಸಕರಿದ್ದಾರೆ. ಅಷ್ಟೇ ಅಲ್ಲ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದೆ. 3ರಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳೊಂದಿಗೆ ಸರ್ಕಾರದಲ್ಲಿದೆ. ಅದೇ ಸಮಯದಲ್ಲಿ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ಇಷ್ಟೇ ಅಲ್ಲ 3 ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. 1984ರ ನಂತರ ಕಾಂಗ್ರೆಸ್‌ನ ಮತಗಳು ನಿರಂತರವಾಗಿ ಹೇಗೆ ಕಡಿಮೆಯಾಗುತ್ತಿವೆ ಎಂದು ಪಿಕೆ ತಮ್ಮ ಪ್ರಸ್ತುತಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಬಲವರ್ಧನೆಗಾಗಿ 5 ಕಾರ್ಯತಂತ್ರದ ಹೆಜ್ಜೆಗಳನ್ನು ಇಡಬೇಕಾಗುತ್ತದೆ ಎಂದ ಪಿ.ಕೆ.

1- ನಾಯಕತ್ವದ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ
2- ಮೈತ್ರಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಬೇಕಾಗುತ್ತದೆ
3- ಪಕ್ಷದ ಹಳೆಯ ತತ್ವಗಳಿಗೆ ಮರಳಬೇಕಾಗುತ್ತದೆ
4- ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಾಯಕರ ಸೈನ್ಯವನ್ನು ರಚಿಸಬೇಕಾಗಿದೆ.
5- ಕಾಂಗ್ರೆಸ್ ನ ಸಂವಹನ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ

ಇದರೊಂದಿಗೆ ನಾಯಕತ್ವ ಹೇಗಿರಬೇಕು ಎಂದೂ ಪಿಕೆ ವಿವರಿಸಿದ್ದಾರೆ. ಇಲ್ಲಿ ಯಾವ ಸ್ಥಾನ ಯಾವ ನಾಯಕನಿಗೆ ನೀಡಬೇಕು? ಗಾಂಧೀಯೇತರ ಪರಿವಾರದವರಿಗೆ ಯಾವ ಸ್ಥಾನ ನೀಡಬೇಕು. ಸೋನಿಯಾ, ರಾಹುಲ್, ಪ್ರಿಯಾಂಕಾ ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬ ಬಗ್ಗೆಯೂ ಉಲ್ಲೇಖಿಸಿದ್ದಾರೆ. 

ಮೈತ್ರಿ ಬಗ್ಗೆ ಕಾಂಗ್ರೆಸ್ ಪ್ಲಾನ್ ಹೇಗಿದೆ?

ಮೈತ್ರಿಗೆ ಸಂಬಂಧಿಸಿದಂತೆ 3 ಸನ್ನಿವೇಶಗಳನ್ನು ಪಿಕೆ ಪ್ರಸ್ತಾಪಿಸಿದ್ದಾರೆ. ಮೊದಲ ಸನ್ನಿವೇಶದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸಬೇಕು. ಎರಡನೇ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಮೋದಿಯನ್ನು ಸೋಲಿಸಲು ಮತ್ತು ಯುಪಿಎಯನ್ನು ಬಲಪಡಿಸಲು ಕಾಂಗ್ರೆಸ್ ಎಲ್ಲಾ ಪಕ್ಷಗಳೊಂದಿಗೆ ಬರಬೇಕು. ಮೂರನೇ ಪರಿಸ್ಥಿತಿ ಏನೆಂದರೆ ಕೆಲವೆಡೆ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ನಡೆಸಿದರೆ ಮತ್ತೆ ಕೆಲವೆಡೆ ಮಿತ್ರಪಕ್ಷಗಳೊಂದಿಗೆ ಸೇರಿ ಹೋರಾಟ ನಡೆಸಿದೆ. ಈ ಸಂದರ್ಭದಲ್ಲಿ