ಪಾಟ್ನಾ(ಜ.29): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರನ್ನು ಜೆಡಿಯು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಇಬ್ಬರೂ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಕಳೆದ ಕೆಲವು ತಿಂಗಳಿನಿಂದ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಸಿಎಂ ನಿತೀಶ್ ಕುಮಾರ್ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರು.

ಪ್ರಶಾಂತ್‌ ಕಿಶೋರ್‌ ಪಕ್ಷ ತೊರೆಯಲು ಸ್ವತಂತ್ರರು: ಪಕ್ಷ ಗೆಲ್ಲಿಸಿದ ನಾಯಕನಿಗೆ ಗೇಟ್‌ಪಾಸ್?

ಸಿಎಎ ಕಡುವಿರೋಧಿಯಾಗಿದ್ದ ಪ್ರಶಾಂತ್ ಕಿಶೋರ್, ಸಿಎಎ ಬೆಂಬಲಿಸಿದ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ಪವನ್ ವರ್ಮಾ ಆರೋಪಿಸಿದ್ದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಯು ಸೇರಿದ್ದ ಪ್ರಶಾಂತ್ ಕಿಶೋರ್, ಪಕ್ಷ ಚುನಾವಣೆ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್  ಅವರೊಂದಿಗಿನ ಸಂಬಂಧ ಹಳಸಿತ್ತು.

ಇನ್ನು ತಮ್ಮ ಉಚ್ಛಾಟನೆ ನಿರ್ಧಾರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್,  ಧನ್ಯವಾದ ನಿತೀಶ್ ಕುಮಾರ್, ಬಿಹಾರದ ಮುಂದಿನ ಸಿಎಂ ನೀವೇ  ಆಗಬೇಕು ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದ್ದಾರೆ.