ಪಟನಾ[ಜ.29]: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದಲ್ಲಿ ಆಂತರಿಕ ಗುದ್ದಾಟ ನಡೆಯುತ್ತಿದೆ ಎಂಬುದು ಮತ್ತೊಮ್ಮೆ ಬಯಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬಿಜೆಪಿ ವಿರುದ್ಧ ನೇರ ವಾಗ್ದಾಳಿ ಮಾಡಿದ ಜೆಡಿಯು ಉಪಾಧ್ಯಕ್ಷ ಹಾಗೂ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಬಿಹಾರ ಸಿಎಂ ನಿತೀಶ್‌, ‘ಪಕ್ಷದಲ್ಲಿ ಇರುವುದಾದರೆ, ಹೋಗುವುದಾದರೆ, ಹೋಗಲಿ’ ಎಂದು ಪ್ರಶಾಂತ್‌ ಕಿಶೋರ್‌ಗೆ ತಿವಿದಿದ್ದಾರೆ. ಅಲ್ಲದೆ, ಪ್ರಶಾಂತ್‌ ಈಗಾಗಲೇ ಹಲವು ಪಕ್ಷಗಳಿಗೆ ಚುನಾವಣಾ ತಂತ್ರಗಾರರಾಗಿ ಸೇವೆ ಕಲ್ಪಿಸುತ್ತಿದ್ದಾರೆ. ಪಕ್ಷದಲ್ಲಿ ಇರುವುದಾದರೆ, ಪಕ್ಷದ ಸಿದ್ಧಾಂತಗಳನ್ನು ಪಾಲಿಸಬೇಕು ಎಂದರು.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!

ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆ ಮೇರೆಗೆ ಪ್ರಶಾಂತ್‌ ಕಿಶೋರ್‌ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರಶಾಂತ್‌, ನನ್ನನ್ನು ಹೇಗೆ ಮತ್ತು ಯಾಕಾಗಿ ಜೆಡಿಯುಗೆ ಸೇರಿಸಿಕೊಳ್ಳಲಾಯಿತು ಎಂಬ ಬಗ್ಗೆ ಸುಳ್ಳೇಕೆ ಹೇಳುತ್ತೀರಿ. ನನ್ನನ್ನೂ ಸಹ ನಿಮ್ಮಂತೆಯೇ ರೂಪಾಂತರಿಸುವ ವಿಫಲ ಯತ್ನ ಮಾಡುತ್ತಿದ್ದೀರಿ! ಹಾಗೊಂದು ನೀವು ಹೇಳುವುದೇ ವಾಸ್ತವವಾದರೆ, ಶಾ ಅವರಿಂದ ಶಿಫಾರಸ್ಸಾದ ವ್ಯಕ್ತಿಯ ಮಾತನ್ನೇ ಉಪೇಕ್ಷಿಸುತ್ತೀರಿ ಎಂದರೆ, ನಿಮ್ಮ ಮಾತನ್ನು ಯಾರು ನಂಬಲು ಸಾಧ್ಯ ಎಂದು ಟಾಂಗ್‌ ನೀಡಿದ್ದಾರೆ.

ಚುನಾವಣಾ ಚಾಣಕ್ಯನ ಒಂದು ಟ್ವೀಟ್: ಇಕ್ಕಟ್ಟಿನಲ್ಲಿ ಸಿಎಂ, ಬಿಜೆಪಿ ತತ್ತರ!