ಸರ್ಕಾರಿ ಸ್ವಾಮ್ಯದ 'ಪ್ರಸಾರ ಭಾರತಿ', ತನ್ನ ರೇಡಿಯೋ ವಾಹಿನಿಯಾದ 'ಆಲ್‌ ಇಂಡಿಯಾ ರೇಡಿಯೋ' (AIR) ಹೆಸರನ್ನು ಬದಲಿಸಿ ಈ ಹಿಂದಿನಂತೆ 'ಆಕಾಶವಾಣಿ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ 'ಪ್ರಸಾರ ಭಾರತಿ', ತನ್ನ ರೇಡಿಯೋ ವಾಹಿನಿಯಾದ 'ಆಲ್‌ ಇಂಡಿಯಾ ರೇಡಿಯೋ' (AIR) ಹೆಸರನ್ನು ಬದಲಿಸಿ ಈ ಹಿಂದಿನಂತೆ 'ಆಕಾಶವಾಣಿ' ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ಸಂಬಂಧ ಬುಧವಾರ ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ (Vasudha Gupta) ಆಂತರಿಕ ಆದೇಶ ಹೊರಡಿಸಿದ್ದಾರೆ. ಇದು ತುಂಬಾ ಹಳೆಯ ನಿರ್ಧಾರವಾಗಿತ್ತು. ಆದರೆ ಜಾರಿಗೆ ಬಂದಿರಲಿಲ್ಲ. ಈಗ ಜಾರಿಗೆ ತರಲಾಗುತ್ತಿದೆ ಎಂದು ಪ್ರಸಾರ ಭಾರತಿ ಸಿಇಒ (Prasar Bharti CEO) ಗೌರವ್‌ ದ್ವಿವೇದಿ (Gaurav Dwivedi) ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಅನೇಕ 'ಆಲ್‌ ಇಂಡಿಯಾ ರೇಡಿಯೋ' ಕೇಂದ್ರಗಳಲ್ಲಿ ಈಗಲೂ ಆಕಾಶವಾಣಿ ಎಂಬ ಫಲಕವೇ ಇದೆ. ಆದರೆ ಕೆಲವು ಕಡೆ ಬರೀ 'ಆಲ್‌ ಇಂಡಿಯಾ ರೇಡಿಯೋ' ಎಂದು ಮಾತ್ರ ನಮೂದಾಗಿದೆ. ಹೊಸ ಆದೇಶದಿಂದ ಆಲ್‌ ಇಂಡಿಯಾ ರೇಡಿಯೋದ ಎಲ್ಲ ದಾಖಲಾತಿಗಳಲ್ಲಿ ಇನ್ನು ಎಐಆರ್‌ ಬದಲು 'ಆಕಾಶವಾಣಿ' ಎಂದು ನಮೂದಾಗಲಿದೆ.

'ಮನ್‌ ಕೀ ಬಾತ್‌' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್‌ ಖಾನ್‌ ಪ್ರಶಂಸೆಯ ಮಳೆ

ಎಐಆರ್‌ಗೆ 'ಆಕಾಶವಾಣಿ' ಎಂದು ಖ್ಯಾತ ಕವಿ ರವೀಂದ್ರನಾಥ ಠಾಗೋರರು (Rabindranath Tagore) 1939ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್‌ ರೇಡಿಯೋ ಕೇಂದ್ರದ (Calcutta Shortwave Radio Station) ಉದ್ಘಾಟನೆ ವೇಳೆ ಸಂಬೋಧಿಸಿದ್ದರು. ಇದಕ್ಕೂ ಮುನ್ನ 1935ರ ಸೆ.10ರಂದು 'ಆಕಾಶವಾಣಿ ಮೈಸೂರು' (Akashvani Mysore) ಎಂಬ ಖಾಸಗಿ ರೇಡಿಯೋ ಕೇಂದ್ರ ಆರಂಭವಾಗಿತ್ತು. ಆಗ ಅದಕ್ಕೆ ಹೆಸರು ಕೊಟ್ಟವರು ಕನ್ನಡಿಗ ಗೋಪಾಲಸ್ವಾಮಿ.

ಡಿಡಿ, ಆಕಾಶವಾಣಿಯ ಮೂಲಸೌಕರ್ಯ ಹೆಚ್ಚಳಕ್ಕೆ 2500 ಕೋಟಿ ರೂ. ಪ್ರಕಟ