ಕಲ್ಲಿದ್ದಲು ಕೊರತೆ ಉಂಟಾಗದಂತೆ ಕ್ರಮಕ್ಕೆ ಸೂಚನೆ ಉತ್ತರ ಕೋಲ್‌ಫೀಲ್ಡ್‌ ಲಿಮಿಟೆಡ್‌ನ 4 ಯೋಜನೆಗಳ ಶಂಕು ಗಣಿಗಾರಿಕೆ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ

ನವದೆಹಲಿ(ಮಾ.23): ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯವು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಗಳಿಗೆ ಸಂಪರ್ಕಿಸಿ ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಲು ಕೋರುವ ಸಾಧ್ಯತೆಗಳಿವೆ ಎಂದು ಕೇಂದ್ರ ಕಲ್ಲಿದ್ದಲು, ಗಣಿಗಾರಿಕೆ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಉತ್ತರ ಕೋಲ್‌ಫೀಲ್ಡ್‌ ಲಿಮಿಟೆಡ್‌ನ 4 ಯೋಜನೆಗಳ ಶಂಕು ಸ್ಥಾಪನೆಯ ವರ್ಚುವಲ್‌ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಬೆಲೆಯೇರಿಕೆ ನಡುವೆ ಕಲ್ಲಿದ್ದಲಿಗಾಗಿ ಆಂತರಿಕ ಬೇಡಿಕೆಯಲ್ಲಿ ಹೆಚ್ಚಳವುಂಟಾಗಿದೆ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು ಸಾಧಿಸಲು ಕೋಲ್‌ ಇಂಡಿಯಾ ಲಿಮಿಟೆಡ್‌ ಹಾಗೂ ಅಂಗಸಂಸ್ಥೆಗಳು ಉತ್ಪಾದನೆಯನ್ನು ಇನ್ನಷ್ಟುಹೆಚ್ಚಿಸಬೇಕು. ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲು ಸಚಿವಾಲಯವು ಬದ್ಧವಾಗಿದೆ’ ಎಂದರು.

ಬರೋಬ್ಬರಿ 313 ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವೇಳೆ ನಿಗಾಹಿ ಕಲ್ಲಿದ್ದಲು ನಿರ್ವಹಣಾ ಘಟಕ, ಬಿನಾ-ಕಾರ್ಕಿ ಕಲ್ಲಿದ್ದಲು ನಿರ್ವಹಣಾ ಘಟಕ, ಜಯಂತನಿಂದ ಸಿಂಗ್ರೌಲಿಯವರೆಗೆ 3.1 ಕಿಮೀ ಕಾಂಕ್ರೀಟ್‌ ರಸ್ತೆ ನಿರ್ಮಾಣ ಹಾಗೂ ಎನ್‌ಸಿಎಲ್‌ ಯೋಜನೆಗೆ ಕಲ್ಲಿದ್ದಲು ಸಾಗಿಸಲು 49.6 ಕಿಮೀ ಕಲ್ಲಿದ್ದಲು ರಸ್ತೆ ನಿರ್ಮಾಣ ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಲಿದ್ದಲು, ಗಣಿಗಾರಿಕೆ, ರೇಲ್ವೆ ವಿಭಾಗದ ರಾಜ್ಯ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ, ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಡಾ. ಅನಿಲ್‌ಕುಮಾರ್‌ ಜೈನ್‌ ಮತ್ತಿತರರು ಹಾಜರಿದ್ದರು.

28, 29ರಂದು ಖಾಸಗೀಕರಣದ ವಿರುದ್ಧ ಚಳುವಳಿ
ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಷನ್‌ಗಳು ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳು ಮತ್ತು ಕ್ರಮಗಳ ವಿರುದ್ಧ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ದೇಶದಾದ್ಯಂತ ಮಾಚ್‌ರ್‍ 28 ಮತ್ತು 29 ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಎಲ್ಲ ಯೂನಿಯನ್‌ಗಳ ಕಾರ್ಮಿಕರು ಇದರಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಈ ಸಾರ್ವತ್ರಿಕ ಮುಷ್ಕರವನ್ನು ಚಿತ್ರದುರ್ಗದಲ್ಲಿ ಸಂಪೂರ್ಣ ಯಶಸ್ವಿ ಮಾಡಬೇಕೆಂದು ಜೆಸಿಟಿಯು ಚಿತ್ರದುರ್ಗ ಸಮಿತಿಯು ಕರೆ ನೀಡಿದೆ.

ಭಾರತಕ್ಕೊಂದು ಗುಡ್‌ನ್ಯೂಸ್‌: ಆರ್ಥಿಕತೆಯಲ್ಲಿ ಚೇತರಿಕೆ, ಅಂಕಿ ಅಂಶಗಳೇ ಸಾಕ್ಷಿ!

ಸರ್ಕಾರಗಳ ಜನ ವಿರೋಧಿ ಮತ್ತು ಕಾರ್ಪೊರೇಟ್‌ ಪರ ನೀತಿ ನಿಯಮಾವಳಿಗಳ ವಿರುದ್ಧ ಒಂದು ಒಗ್ಗಟ್ಟಿನ ಮತ್ತು ದೀರ್ಘಕಾಲೀನ ಚಳುವಳಿ ಬೆಳೆಸುವುದು ಇವತ್ತಿನ ಅವಶ್ಯಕತೆಯಾಗಿದೆ. ಹಲವಾರು ತ್ಯಾಗ ಬಲಿದಾನಗಳಿಂದ ಮತ್ತು ಧೀರೋದ್ಧಾತ ಹೋರಾಟಗಳಿಂದ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ಫ್ಯಾಸೀವಾದಿ ಬಿಜೆಪಿ ಸರ್ಕಾರದ ದಾಳಿಗಳನ್ನು ಎದೆಗುಂದದೆ ಎದುರಿಸುತ್ತ ಜನರು ಬೀದಿಗಿಳಿಯುತ್ತಿರುವುದು ಸಂತೋಷದ ವಿಷಯ. ಕಲ್ಲಿದ್ದಲು ಕಾರ್ಮಿಕರ ಮೂರು ದಿನದ ಮುಷ್ಕರ, ಬಿಪಿಸಿಎಲ್‌ ನೌಕರರ ಎರಡು ದಿನಗಳ ಮುಷ್ಕರ, ರೈಲ್ವೆ, ವಿದ್ಯುತ್‌, ರಕ್ಷಣಾ ವಲಯ, ಉಕ್ಕು, ಅಸಂಘಟಿತ ವಲಯ ಮತ್ತು ಯೋಜನಾ ಕಾರ್ಮಿಕರು ಮತ್ತು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ರೈತರು ನಡೆಸಿದ ಚಾರಿತ್ರಿಕ ಹೋರಾಟದ ಪ್ರೇರಣೆ ಪಡೆದು ನಾವು ಸನ್ನದ್ಧರಾಗಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಆರ್ಟಿಪಿಎಸ್‌ಗೆ ಕಲ್ಲಿದ್ದಲು ಶಾಕ್‌: ನಾಲ್ಕು ಘಟಕಗಳ ಬಂದ್‌
ತಾಲೂಕಿನ ಶಕ್ತಿನಗರದಲ್ಲಿರುವ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್ಟಿಪಿಎಸ್‌)ಕ್ಕೆ ಅಸಮರ್ಪಕ ಕಲ್ಲಿದ್ದಲು ಪೂರೈಕೆಯಾಗುತ್ತಿರುವುದರಿಂದ, ನಾಲ್ಕು ಘಟಕಗಳನ್ನು ಬಂದ್‌ ಮಾಡಲಾಗಿದೆ.

ದೇಶದ ವಿವಿಧ ಕಲ್ಲಿದ್ದಲು ಗಣಿಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಸರಬರಾಜು ಆಗದ ಕಾರಣಕ್ಕೆ ಆರ್ಟಿಪಿಎಸ್‌ನ ಎಂಟು ಘಟಕಗಳ ಪೈಕಿ 210 ಮೆಗಾ ವ್ಯಾಟ್‌ ಸಾಮರ್ಥ್ಯದ 2, 4,5 ಮತ್ತು 7 ನೇ ಘಟಕಗಳಿಂದ ವಿದ್ಯುತ್‌ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದು, ಉಳಿದಂತೆ 210 ಮೆಗಾ ವ್ಯಾಟ್‌ ಸಾಮರ್ಥ್ಯದ 1,3, 6 ಮತ್ತು 250 ಮೆಗಾ ವ್ಯಾಟಿನ 8 ನೇ ಘಟಕದಿಂದ ಕ್ರಮವಾಗಿ 147 ಮೇಗಾ ವ್ಯಾಟ್‌,152 ಮೆಗಾ ವ್ಯಾಟ್‌,141 ಮೇಗಾ ವ್ಯಾಟ್‌ ಮತ್ತು 168 ಮೆಗಾ ವ್ಯಾಟ್‌ ಸೇರಿದಂತೆ ಒಟ್ಟಾರೆ 1720 ಮೆಗಾ ವ್ಯಾಟ್‌ ಪೈಕಿ ಕೇವಲ 588 ಮೆಗಾ ವ್ಯಾಟ್‌ ಕರೆಂಟ್ಟನ್ನು ಉತ್ಪಾದಿಸಿ ರಾಜ್ಯಜಾಲಕ್ಕೆ ರವಾನಿಸಲಾಗುತ್ತಿದೆ.

ಆರ್ಟಿಪಿಎಸ್‌ನ ಎಂಟು ಘಟಕಗಳಿಂದ ನಿತ್ಯ 35 ಸಾವಿರ ಮೆಟ್ರಿಕ್‌ ಟನ್‌ ಅಂದರೆ ಕನಿಷ್ಠ 6 ರಿಂದ 8 ರೇಕುಗಳ ಅಗತ್ಯವಿದ್ದು, ಆದರೆ ಕಳೆದ ಐದಾರು ದಿನಗಳಿಂದ ಕೇವಲ 2 ರಿಂದ 4 ರೇಕುಗಳು ಮಾತ್ರ ಬರುತ್ತಿವೆ. ಕಲ್ಲಿದ್ದಲು ಸಂಗ್ರಹ ಯಾರ್ಡ್‌ನಲ್ಲಿ ಕೇವಲ ಒಂದು ದಿನಕ್ಕೆ ಬೇಕಾಗುವಷ್ಟು(45 ಸಾವಿರ ಮೆಟ್ರಿಕ್‌ ಟನ್‌) ಕಲ್ಲಿದ್ದಲನ್ನು ಸಂಗ್ರಹಿಸಿಡಲಾಗಿದೆ. ಇದರಿಂದಾಗಿ ನಿತ್ಯ ವಿವಿಧ ಕಲ್ಲಿದ್ದಲು ಗಣಿಗಳಿಂದ ಬರುತ್ತಿರುವ ಎರಡರಿಂದ ನಾಲ್ಕು ರೇಕುಗಳನ್ನು ವಿದ್ಯುತ್‌ ಉತ್ಪಾದನೆ ಘಟಕಗಳ ಬಂಕರ್‌ಗಳಿಗೆ ಸಾಗಿಸಲಾಗುತ್ತಿದೆ.