ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಟ್ವೀಟ್‌ ಮಾಡಿರುವ ನಟ ಪ್ರಕಾಶ್‌ ರಾಜ್‌, ಮೋದಿ ಭೇಟಿಯನ್ನು ಟೀಕೆ ಮಾಡಿದ್ದಾರೆ. 

ಬೆಂಗಳೂರು (ಮೇ.6): ಸದಾಕಾಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕೆ ಮಾಡತ್ತಲೇ ಸುದ್ದಿಯಾಗುವ ನಟ ಪ್ರಕಾಶ್‌ ರಾಜ್‌ ಚುನಾವಣಾ ಸಮಯದಲ್ಲಿ ಮತ್ತಷ್ಟು ಆಕ್ಟೀವ್‌ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದರು. ಈ ಭೇಟಿಯ ವಿಡಿಯೋವನ್ನು ಹಂಚಿಕೊಂಡಿದ್ದ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ನನ್ನ ದೇಶದ 140 ಕೋಟಿ ಭಾರತೀಯರ ಯೋಗಕ್ಷೇಮಕ್ಕಾಗಿ ಪ್ರಭು ಶ್ರೀರಾಮರಲ್ಲಿ ಪ್ರಾರ್ಥನೆ ಸಲ್ಲಿಸಿದೆ ಎಂದು ಬರೆದುಕೊಂಡಿದ್ದರು. ಇದನ್ನು ವ್ಯಂಗ್ಯ ಮಾಡಿ ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌, ನನ್ನ ಮಾತನ್ನು ಗುರುತು ಮಾಡಿಟ್ಟುಕೊಳ್ಳಿ. ಪ್ರಭು ಶ್ರೀರಾಮ 140 ಕೋಟಿ ಭಾರತೀಯರನ್ನು ಪ್ರೀತಿ ಮಾಡುತ್ತಾರೆ. ಹಾಗಾಗಿ ನೀವು 400 ದಾಟುವ, ಅಥವಾ 300 ದಾಟುವ ಕನಸನ್ನೇ ಬಿಟ್ಟುಬಿಡಿ. ಕನಿಷ್ಠ 200 ಸ್ಥಾನ ದಾಟೋಕೆ ಪ್ರಯತ್ನ ಮಾಡಿ' ಎಂದು ಅವರು ಬರೆದಿದ್ದಾರೆ. ಅದರೊಂದಿಗೆ ಸೇವ್‌ ಡೆಮಾಕ್ರಸಿ, ಸೇವ್‌ ಇಂಡಿಯಾ ಎನ್ನುವ ಹ್ಯಾಶ್‌ ಟ್ಯಾಗ್‌ಅನ್ನೂ ಅವರು ಬಳಸಿದ್ದಾರೆ.

ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. 'ನನ್ನ ಮಾತನ್ನು ನೀವು ಗುರುತು ಮಾಡಿಕೊಳ್ಳಿ. ಪ್ರಭು ಶ್ರೀರಾಮ ಖಂಡಿತವಾಗಿ 140 ಕೋಟಿ ಭಾರತೀಯರನ್ನು ಪ್ರೀತಿ ಮಾಡ್ತಾರೆ. 400 ಸ್ಥಾನ, 300 ಸ್ಥಾನ ಗೆಲ್ಲೋದನ್ನ ಮರೆತುಬಿಡಿ.. 500ಕ್ಕಿಂತ ಅಧಿಕ ಸ್ಥಾನ ಟಾರ್ಗೆಟ್‌ ಮಾಡಿ. ಈ ಅಳು ಮಗು ಅಳುತ್ತಲೇ ಇರಲಿ' ಎಂದು ಪ್ರವೀಣ್‌ ಕುಮಾರ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ಹೌದು, ಪ್ರಭು ಶ್ರೀರಾಮನು ತನ್ನ ಅಸ್ತಿತ್ವವನ್ನು ನಿರಾಕರಿಸಿದ ಮತ್ತು "ಕಾಲ್ಪನಿಕ್" ಎಂದು ಹೇಳಿದ ಪ್ರಾಣಿಗಳನ್ನು ಹೊರತುಪಡಿಸಿ 140 ಕೋಟಿ ಭಾರತೀಯರನ್ನು ಪ್ರೀತಿಸುತ್ತಾನೆ. ಆದ್ದರಿಂದ, ರಾಮಲಲ್ಲಾ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಮತ್ತು ಕಾಂಗ್ರಸ್ಸಿನ ಅಂತಿಮ ಸಂಸ್ಕಾರವನ್ನು ಖಚಿತಪಡಿಸಿದ್ದಾರೆ. ಕನ್ವರ್ಟೆಡ್‌ ಆಗಿರುವ ನೀವು ಇದನ್ನು ಇಲ್ಲಿಯೇ ಬಿಟ್ಟುಬಿಡಿ' ಎಂದು ಟೀಕಿಸಿದ್ದಾರೆ. ಈ ವ್ಯಕ್ತಿ ಪ್ರಭು ಶ್ರೀರಾಮನನ್ನು ನಂಬಲು ಆರಂಭಿಸಿದ್ದಾರೆ. ಇದು ಆಗಿದ್ದು ಯಾವಾಗ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

ನೀವು ಕ್ರಿಶ್ಚಿಯನ್‌ ಎಂದು ಕೇಳಿಪಟ್ಟಿದ್ದೇನೆ. ಶ್ರೀರಾಮ ನಿಮ್ಮ ಮನವಿಯನ್ನ ಹೇಗೆ ಕೇಳ್ತಾನೆ ಎಂದೂ ಇನ್ನೊಬ್ಬರು ಬರೆದಿದ್ದಾರೆ. 'ನಿಮ್ಮ ಮಾತಿನಿಂದ ಖಚಿತವಾಗಿದ್ದು ಏನೆಂದರೆ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವ ಭರವಸೆ. ಈಗ ನೀವು ನಿಮ್ಮ ದಿನಗಳನ್ನು ಎಣಿಸುತ್ತೀರಿ ಏಕೆಂದರೆ ನೀವು ಜೂನ್ 4 ರ ನಂತರ ಅಳಬೇಕಾಗುತ್ತದೆ. ಅದು ನಿಮ್ಮ ಹಣೆಬರಹ' ಎಂದು ಮೋದಿ ಹೇಳಿದ್ದಾರೆ.

ಪ್ರಭು ನೀವೇ ನೋಡಿ..ಕಮ್ಯುನಿಸ್ಟ್‌ ಹಾಗೂ ಲೆಫ್ಟಿಸ್ಟ್‌ಗಳು ಭಗವಾನ್‌ ರಾಮನನ್ನು ಪ್ರಭು ಎಂದು ಕರೆಯಲು ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ರಾಮಮಂದಿರವನ್ನು ವಿರೋಧಿಸಿದ ಎಲ್ಲರನ್ನೂ, ಮೋದಿಯವರು ಅಕ್ಷರಶಃ ಬದಲಿಸಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ, ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇರಲ್ಲ: ಬೊಮ್ಮಾಯಿ

ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ವಿಫಲವಾಗಿರುವ ವ್ಯಕ್ತಿ. ತನ್ನ ಮೊದಲ ಹೆಂಡತಿಯ ಮಂಗಳಸೂತ್ರವನ್ನು ಎರಡನೇ ಹೆಂಡತಿಗೆ ಕೊಡಲು ಕದ್ದವನು. ಎರಡೂ ಜೀವಗಳನ್ನು ಬೆರೆಸಿ ತನ್ನ ಸಂಪೂರ್ಣ ವೈಯಕ್ತಿಕ ಮತ್ತು ರಾಜಕೀಯ ಜೀವನವನ್ನು ಖಿಚಡಿ ಮಾಡಿದವನು ಎಂದು ಟ್ವೀಟ್‌ ಮಾಡಿದ್ದಾರೆ. ಪ್ರಭು ಶ್ರೀರಾಮನು ಕೇವಲ 140 ಕೋಟಿ ಜನರನ್ನು ಮಾತ್ರವಲ್ಲ ಎಲ್ಲಾ ಜೀವಿಗಳನ್ನು ಪ್ರೀತಿಸುತ್ತಾನೆ. ಆದರೆ ಅದೇ ಬೇರೆ ರೀತಿಯಲ್ಲಿ ಅಲ್ಲ, ಇಲ್ಲದಿದ್ದರೆ ಅವನನ್ನು ಪೌರಾಣಿಕ ಎಂದು ಕರೆಯಲಾಗುವುದಿಲ್ಲ. ನಮ್ಮ ದೇವಸ್ಥಾನದಲ್ಲಿ ಅವರ ಮನೆ ಕೆಡವುತ್ತಿರಲಿಲ್ಲ. ಚೂಸ್ಲಿಮ್‌ಗಳು ಅದನ್ನು ಮತ್ತೊಮ್ಮೆ ನಾಶಮಾಡುವ ಬೆದರಿಕೆ ಹಾಕುತ್ತಿರಲಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದ ಸೆಲೆಬ್ರಿಟೀಸ್! ಇವ್ರೇನಂದ್ರು ನೋಡಿ..