ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ‘ಇದು ಬಡವರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಿದ ಬಡವರ ಮಗನ ವಿರುದ್ಧ ಮಂಡಿಸಲಾದ ಅವಿಶ್ವಾಸ’ ಎಂದು ಟೀಕಿಸಿದ್ದಾರೆ.

ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ‘ಇದು ಬಡವರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಿದ ಬಡವರ ಮಗನ ವಿರುದ್ಧ ಮಂಡಿಸಲಾದ ಅವಿಶ್ವಾಸ’ ಎಂದು ಟೀಕಿಸಿದ್ದಾರೆ. ಅವಿಶ್ವಾಸ ಚರ್ಚೆ ವೇಳೆ ಸರ್ಕಾರದ ಕಡೆಯಿಂದ ಚರ್ಚೆ ಪ್ರಾರಂಭಿಸಿದ ದುಬೆ ‘ಈ ಅವಿಶ್ವಾಸ ಗೊತ್ತುವಳಿ ಬಡವರ ಮಗನ ವಿರುದ್ಧ, ಇದು ಬಡವರಿಗೆ ಮನೆ ಕೊಟ್ಟವನ ವಿರುದ್ಧ, ಜನರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ (Toilet)ನಿರ್ಮಿಸಿಕೊಟ್ಟ, ಎಲ್ಲರ ಮನೆಗೂ ಬೆಳಕು ತರಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧವಾಗಿದೆ. ಕೌರವರು ದ್ರೌಪದಿಯ ಮಾನಭಂಗ ಮಾಡಿದಂತೆ ಮೋದಿ ಸರ್ಕಾರದ (Modi government) ನೀತಿಗಳನ್ನು ಮಾನಭಂಗ ಮಾಡಲು ವಿಪಕ್ಷಗಳು ಹೀಗೆ ಮಾಡುತ್ತಿವೆ. ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಮೋದಿಯ ಮಾನಭಂಗ ಮಾಡುವ ವಿಪಕ್ಷಗಳು 2024ರಲ್ಲಿಯೂ ಯಾರೂ ಉಳಿಯುವುದಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400 ಸ್ಥಾನಗಳನ್ನು ಗೆದ್ದು ಮರಳಲಿದೆ ಎಂದರು.

ಸೆಮಿಫೈನಲ್‌ ಆಯ್ತು, ಫೈನಲ್‌ ಬಾಕಿ: ಮೋದಿ ವ್ಯಂಗ್ಯ

ವಿಪಕ್ಷವು ಅವಿಶ್ವಾಸ ನಿರ್ಣಯ ತಂದಿರುವುದು ಕೇಂದ್ರ ಸರ್ಕಾರದ ವಿರುದ್ಧ ಅಲ್ಲ. ಬದಲಾಗಿ ‘ಇಂಡಿಯಾ’ (INDIA) ಕೂಟದ ಸದಸ್ಯರ ನಡುವೆಯೇ ಪರಸ್ಪರ ನಂಬಿಕೆ ಇಲ್ಲ. ಹೀಗಾಗಿ ತಮ್ಮ ಬಲ ಎಷ್ಟುಇದೆ? ಅವಿಶ್ವಾಸ ನಿರ್ಣಯದ ಪರ ತಮ್ಮಲ್ಲೇ ಎಷ್ಟು ಜನ ಮತ ಹಾಕುತ್ತಾರೆ ಎಂದು ತಿಳಿಯಲು ಅವರು ಆ ನಿರ್ಣಯ ಮಂಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಛೇಡಿಸಿದ್ದಾರೆ.

ಅಲ್ಲದೆ, ದ್ಲಿಲಿ ಸುಗ್ರೀವಾಜ್ಞೆ ಮಸೂದೆ (Delhi ordinance Bill) ಕುರಿತು ಕೇಂದ್ರ ಸರ್ಕಾರ (central Govt) ಜಯ ಸಾಧಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿರುವ ಮೋದಿ, 2024ರ ಲೋಕಸಭೆ ಚುನಾವಣೆ ಮೊದಲು ಸುಗ್ರೀವಾಜ್ಞೆ ವಿಚಾರದಲ್ಲಿ ಸೆಮಿಫೈನಲ್‌ ಆಟ ಆಡಲು ಇಂಡಿಯಾ ಕೂಟ ಮುಂದಾಗಿತ್ತು. ಆದರೆ ಅದರ ಫಲಿತಾಂಶ ಏನು ಎಂದು ನಿನ್ನೆ ರಾತ್ರಿಯೇ ಸ್ಪಷ್ಟವಾಗಿದೆ ಎಂದೂ ವ್ಯಂಗ್ಯವಾಡಿದ್ದಾರೆ.

No Confidence Motion: ಮಣಿಪುರದ ಮೌನವ್ರತ, ಮೋದಿಗೆ ಮೂರು ಪ್ರಶ್ನೆ!

ಮಂಗಳವಾರ ಅವಿಶ್ವಾಸ ನಿರ್ಣಯವು ಲೋಕಸಭೆಯಲ್ಲಿ ಚರ್ಚೆಗೆ ಒಳಪಡುವ ಮುನ್ನ ಮಾತನಾಡಿದ ಮೋದಿ, ವಿಪಕ್ಷವು ಕೊನೆಯ ಎಸೆತದಲ್ಲಿ ಸಿಕ್ಸರ್‌ ಹೊಡೆಯುವ ಕನಸು ಕಾಣುತ್ತಿದೆ. ಆದರೆ ಅವಿಶ್ವಾಸ ನಿರ್ಣಯವು ಕೇಂದ್ರ ಸರ್ಕಾರದ (Union Govt)ಅಗ್ನಿಪರೀಕ್ಷೆ ಅಲ್ಲ. ಬದಲಾಗಿ ಅದು ವಿಪಕ್ಷಗಳದ್ದೇ ಅಗ್ನಿಪರೀಕ್ಷೆ ಎಂದರು.

2018ರಲ್ಲೇ ಅವಿಶ್ವಾಸ ನಿರ್ಣಯದಲ್ಲಿ ನಾವು ಜಯಿಸಿ ಅವರಲ್ಲಿ ‘ಅವಿಶ್ವಾಸ’ ಮೂಡಿಸಿದೆವು’ ಎಂದೂ ಕುಹಕವಾಡಿದರು. ‘ವಿಪಕ್ಷಗಳ ಕೂಟ ‘ಇಂಡಿಯಾ’ ಅಲ್ಲ. ‘ಘಮಂಡಿಯಾ’ (ದುರಹಂಕಾರಿಗಳು)’ ಎಂದು ಮೋದಿ ಪುನರುಚ್ಚರಿಸಿದರು.

No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!