ಹುದ್ದೆ ಇರಲಿ, ಇಲ್ಲದಿರಲಿ ನಾನೆಂದಿಗೂ ಪ್ರಿಯಾಂಕಾ, ರಾಹುಲ್ ಜೊತೆಗಿರುತ್ತೇನೆ: ಸಿಧು!

* ಪಂಜಾಬ್‌ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು

* ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಧು ಮಹತ್ವದ ಹೇಳಿಕೆ

* ಹುದ್ದೆ ಇರಲಿ, ಇಲ್ಲದಿರಲಿ ನಾನೆಂದಿಗೂ ಪ್ರಿಯಾಂಕಾ, ರಾಹುಲ್ ಜೊತೆಗಿರುತ್ತೇನೆ

Post Or No Post Will Stand By Rahul And Priyanka Gandhi says Navjot Sidhu pod

ಚಂಡೀಗಢ(ಅ.02): ಪಂಜಾಬ್ ಕಾಂಗ್ರೆಸ್‌ನಲ್ಲಿ(Punjab Congress) ನಡೆಯುತ್ತಿರುವ ಗದ್ದಲದ ನಡುವೆ ನವಜೋತ್ ಸಿಂಗ್ ಸಿಧು(Navjot Singh Sidhu) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು ತಾನು ಹುದ್ದೆಯಲ್ಲಿರಲಿ, ಇಲ್ಲದಿರಲಿ ಆದರೆ ಯಾವತ್ತೂ ರಾಹುಲ್(Rahul gandhi) ಹಾಗೂ ಪ್ರಿಯಾಂಕಾ ಗಾಂಧಿ(Priyanka Gandhi) ಜೊತೆಗಿರುತ್ತೇನೆ ಎಂದಿದ್ದಾರೆ. ಚನ್ನಿ ಸರ್ಕಾರದ ರಚನೆಯಾದ ಬಳಿಕ, ಸಿಎಂ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು, ಕೆಲ ದಿನಗಳ ಹಿಂದೆ ಅಧ್ಯಕ್ಷ ಸ್ಥಾನ ತೊರೆದಿದ್ದರು. ಆದರೆ ಸಿಎಂ ಚನ್ನಿಯನ್ನು ಭೇಟಿ ಮಾಡಿದ ಬಳಿಕ ಮತ್ತೆ ಈ ಸ್ಥಾನದಲ್ಲಿ ಮುಂದುವರೆಯಲು ಒಪ್ಪಿಕೊಂಡಿದ್ದಾರೆ.

ನವಜೋತ್ ಸಿಂಗ್ ಸಿಧು ಕಳೆದ ವಾರ ರಾಜೀನಾಮೆ ನೀಡಿದ  ಬಳಿಕ ಪಂಜಾಬ್‌ ಕಾಂಗ್ರೆಸ್‌ನಲ್ಲಿ ತೀವ್ರ ಬಿಕ್ಕಟ್ಟು ಕಾಣಿಸಿಕೊಂಡಿದೆ. ಇದು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದೇ ಸಮಯದಲ್ಲಿ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಾ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಎನ್ಎಸ್ಎ ಅಜಿತ್ ದೋವಲ್ ಅವರನ್ನು ಭೇಟಿ ಕೂಡಾ ಮಾಡಿದ್ದರು. ಹೀಗಿದ್ದರೂ ತಾನು ಬಿಜೆಪಿಗೆ ಹೋಗುತ್ತಿಲ್ಲ ಎಂದು ಅಮರೀಂದರ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು 'ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸಿದ್ಧಾಂತಗಳನ್ನು ಪಾಲಿಸುತ್ತೇನೆ. ಹುದ್ದೆ ಇರಲಿ ಇಲ್ಲದಿರಲಿ ನಾನು ಯಾವತ್ತೂ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಜೊತೆಗಿರುತ್ತೇನೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios