Asianet Suvarna News Asianet Suvarna News

ಆರೆಸ್ಸೆಸ್ ನಾಯಕರ ಫೋಟೋ ಇಟ್ಕೊಳ್ಳೋದು ಭಯೋತ್ಪಾದಕ ಕೃತ್ಯವಲ್ಲ: ಪಿಎಫ್‌ಐ ಕಾರ್ಯಕರ್ತರಿಗೆ ಹೈಕೋರ್ಟ್‌ ಜಾಮೀನು!

ಭಯೋತ್ಪಾದಕ ಕೃತ್ಯಗಳನ್ನು ಎಸಗಲು ನಿಧಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎನ್‌ಐಎ ಈ ಆರೋಪಿಗಳನ್ನು ಬಂಧಿಸಿದ್ದು, ಆದರೆ, ಯಾವುದೇ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರ ಪೀಠವು ಗಮನಿಸಿ ಪಿಎಫ್‌ಐ ಕಾರ್ಯಕರ್ತರಿಗೆ ಜಾಮೀನು ನೀಡಿದೆ.  

possessing photos of rss leaders not terrorist act madras high court grants alleged pfi members bail in uapa case ash
Author
First Published Oct 27, 2023, 12:05 PM IST

ಚೆನ್ನೈ (ಅಕ್ಟೋಬರ್ 27, 2023): ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಎಂದು ಆರೋಪಿಸಲಾದ ಎಂಟು ಮಂದಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ. 

 "ಭಯೋತ್ಪಾದಕ ಕೃತ್ಯಗಳನ್ನು ಎಸಗಲು" ನಿಧಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎನ್‌ಐಎ ಈ ಆರೋಪಿಗಳನ್ನು ಬಂಧಿಸಿದ್ದು, ಆದರೆ, ಯಾವುದೇ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರ ಪೀಠವು ಗಮನಿಸಿದ್ದು, ಪಿಎಫ್‌ಐ ಕಾರ್ಯಕರ್ತರಿಗೆ ಬೇಲ್‌ ನೀಡಿದೆ. 

ಇದನ್ನು ಓದಿ: ಹೀಗೆ ಮಾಡದಿದ್ದರೆ ಪ್ರಧಾನಿ ಮೋದಿ ಹತ್ಯೆ ಜತೆಗೆ ಮೋದಿ ಸ್ಟೇಡಿಯಂ ಉಡಾಯಿಸ್ತೇವೆ: ಎನ್‌ಐಎಗೆ ಬಂತು ಬೆದರಿಕೆ ಇಮೇಲ್

ಆರೆಸ್ಸೆಸ್ ನಾಯಕರು ಮತ್ತು ಇತರ ಹಿಂದೂ ಸಂಘಟನೆಗಳ ಕೆಲವರ ಮಾರ್ಕ್‌ ಮಾಡಿರುವ ಫೋಟೋಗಳು ಸೇರಿದಂತೆ ಹಲವಾರು ದಾಖಲೆಗಳು ಮೇಲ್ಮನವಿದಾರರ ಬಳಿ ಕಂಡುಬಂದಿವೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿತ್ತು. ಅಂದರೆ, ಮಾರ್ಕ್‌ ಆಗಿರುವ ಫೋಟೋವುಳ್ಳ ಈ ನಾಯಕರು "ಹಿಟ್ ಲಿಸ್ಟ್" ನಲ್ಲಿದ್ದಾರೆ ಎಂದು ಸೂಚಿಸುತ್ತದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್‌ “ಆರ್‌ಎಸ್‌ಎಸ್ ಅಥವಾ ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರ ಕೆಲವು ಫೋಟೋಗಳನ್ನು ನಿರ್ದಿಷ್ಟ ಗುರುತುಗಳೊಂದಿಗೆ ಸೆರೆಹಿಡಿಯಲಾಗಿದೆ. ಅಂದರೆ, ಪಿಎಫ್‌ಐನ 'ಹಿಟ್ ಲಿಸ್ಟ್' ನಲ್ಲಿರುವ ಗುರುತಿಸಲಾದ ವ್ಯಕ್ತಿಗಳನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಗುರುತು ಸೂಚಿಸುತ್ತದೆ ಎಂಬುದು ಕೇವಲ ವ್ಯಾಖ್ಯಾನವಾಗಿದೆ. 

ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್

ಈ ಕಲ್ಪನೆಯಿಂದ ವಿಷಯಗಳನ್ನು ಅರ್ಥೈಸಲು ಅನುಮತಿಸಿದಾಗ, A6 ಸಂಭಾವ್ಯ ಬೆದರಿಕೆಯನ್ನು ಉಂಟುಮಾಡಬಹುದು ಎಂದು ಒಬ್ಬರು ನಂಬಬಹುದು. ಆದರೆ, ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ A6 ಭಾಗಿಯಾಗಿರುವುದನ್ನು ಅಥವಾ ಭಯೋತ್ಪಾದಕ ಸಂಘಟನೆಯೊಂದಿಗಿನ ಅವರ ಸಂಬಂಧವನ್ನು ಈ ಯಾವುದೇ ದಾಖಲೆಗಳಿಂದ ಊಹಿಸಲು ಸಾಧ್ಯವಿಲ್ಲ ಎಂದೂ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

"ವಿಷನ್ ಡಾಕ್ಯುಮೆಂಟ್" ಅನ್ನು ಆಧರಿಸಿ, PFI ರಾಜಕೀಯ ಅಧಿಕಾರವನ್ನು ಗಳಿಸುವ ಉದ್ದೇಶವನ್ನು ಹೊಂದಿದೆ ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಸರ್ಕಾರವನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ ಎಂದು NIA ವಾದಿಸಿತ್ತು. ಈ ಬಗ್ಗೆ ಮಾತನಾಡಿದ ಕೋರ್ಟ್‌, ಮೇಲ್ಮನವಿದಾರರ ಚಟುವಟಿಕೆಗಳನ್ನು ಎನ್‌ಐಎ "ಕಾಮಾಲೆಯ ಕಣ್ಣುಗಳ" ಮೂಲಕ ನೋಡಿದಾಗ, ಅವರ ಪ್ರತಿಯೊಂದು ಕ್ರಮಗಳು ಕಾನೂನುಬಾಹಿರವೆಂದು ತೋರಬಹುದು ಎಂದು ಹೇಳಿದೆ. ಆದರೆ, ಇದನ್ನು ಸತ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದೂ ತಿಳಿಸಿದೆ.

ಹಾಗೂ, "ವಿಷನ್ ಡಾಕ್ಯುಮೆಂಟ್" ಗೆ ಮೇಲ್ಮನವಿದಾರರನ್ನು ಸಂಪರ್ಕಿಸುವ ಯಾವುದೇ ದಾಖಲೆಗಳ ಅನುಪಸ್ಥಿತಿಯಲ್ಲಿ, ಪ್ರತಿ ಗಂಭೀರ ಆರೋಪವು ಊಹೆಯ ಮೂಲಕ ಸಂಭವನೀಯತೆಗಳನ್ನು ಆಧರಿಸಿದೆ. ಅಂದರೆ, ಈ ಅಭಿಪ್ರಾಯಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದೂ ಹೈಕೋರ್ಟ್‌ ಹೇಳಿದೆ. ಅಲ್ಲದೆ, ಕೆಲವು ಮೇಲ್ಮನವಿದಾರರು ಚಾಕು ಮತ್ತು ಕತ್ತಿಗಳನ್ನು ಬಳಸಿ ಶಸ್ತ್ರಾಸ್ತ್ರ ತರಬೇತಿಯನ್ನು ಆಯೋಜಿಸಿದ್ದರು ಎಂಬ ಸಾಕ್ಷಿಗಳ ಹೇಳಿಕೆಗಳನ್ನು ಹೊರತುಪಡಿಸಿ, ಯಾವುದೇ ಮೇಲ್ಮನವಿದಾರರು ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ ಅಥವಾ ಭಯೋತ್ಪಾದಕ ಗ್ಯಾಂಗ್‌ನ ಸದಸ್ಯರಾಗಿ ಭಾಗಿಯಾಗಿದ್ದಾರೆಂದು ತೋರಿಸಲು ಬೇರೆ ಯಾವುದೇ ದಾಖಲೆ  ಇಲ್ಲ ಎಂದೂ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳು ಹೇಳಿದ್ದಾರೆ.   

Follow Us:
Download App:
  • android
  • ios