Asianet Suvarna News Asianet Suvarna News

ರಾಮಮಂದಿರಕ್ಕೆ ದೇಣಿಗೆ: 4 ಲಕ್ಷ ಹಳ್ಳಿಗಳು, 10 ಕೋಟಿ ಜನರ ಭೇಟಿಯ ಗುರಿ

ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಆರಂಭ | ಜ.14 ರಿಂದ ಫೆ.27ರವರೆಗೆ ದೇಶವ್ಯಾಪಿ ಅಭಿಯಾನ |4 ಲಕ್ಷ ಹಳ್ಳಿಗಳು, 10 ಕೋಟಿ ಜನರ ಭೇಟಿಯ ಗುರಿ | 10, 100, 1000 ಮುಖಬೆಲೆ ಕೂಪನ್‌ ವಿತರಣೆ ಮೂಲಕ ಹಣ ಸಂಗ್ರಹ

Ayodhya Ram mandir donation rss and associate association campaign dpl
Author
Bangalore, First Published Jan 15, 2021, 9:50 AM IST

ನವದೆಹಲಿ(ಜ.15): ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರಕ್ಕೆ ಭಕ್ತರಿಂದ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಸಹಯೋಗಿ ಸಂಘಟನೆಗಳ ಕಾರ್ಯಕರ್ತರು ಫೆ.27ರವರೆಗೆ ಈ ದೇಶವ್ಯಾಪಿ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಈ ಅಭಿಯಾನದಡಿ ಕಾರ್ಯಕರ್ತರು ದೇಶದ 4 ಲಕ್ಷ ಹಳ್ಳಿಗಳು ಮತ್ತು 10 ಕೋಟಿ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಆಸಕ್ತರು 10, 100 ಮತ್ತು 1000 ರು. ಮೌಲ್ಯದ ಕೂಪನ್‌ಗಳನ್ನು ಪಡೆದುಕೊಂಡು, ಮುಖಬೆಲೆ ಮೊತ್ತದ ದೇಣಿಗೆ ನೀಡಬಹುದಾಗಿದೆ.

CBI ಅಧಿಕಾರಿಗಳ ಮೇಲೆ CBI ದಾಳಿ: ನಾಲ್ವರ ವಿರುದ್ಧ ಕೇಸ್

ಅಯೋಧ್ಯೆಯಲ್ಲಿ ರಾಮಮಂದಿರ ಸಂಕೀರ್ಣವನ್ನು ಒಟ್ಟು 1100 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ 2.7 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ವೆಚ್ಚವೇ 300-400 ಕೋಟಿ ರು. ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ದೇಗುಲವನ್ನು 2024ರೊಳಗೆ ಪೂರ್ಣಗೊಳಿಸುವ ಉದ್ದೇಶವನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್‌ ಹೊಂದಿದೆ. ದೇಗುಲಕ್ಕೆ ಕಳೆದ ವರ್ಷದ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದರು.

Follow Us:
Download App:
  • android
  • ios