ಒಂದು ಮನೆ ಮತ್ತು ಆರು ಕೋಣೆ; 32 ಪುರುಷರ ಜೊತೆಯಲ್ಲಿದ್ರು ಐವರು ಮಹಿಳೆಯರು

ಪೊಲೀಸರು ದಾಳಿ ನಡೆಸಿ 32 ಪುರುಷರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಐದು ಮಹಿಳೆಯರೂ ಇದ್ದರು. ದಾಳಿ ವೇಳೆ ಸಿಕ್ಕಿರುವ ಪುರುಷರು ಬಿಹಾರದ ಕಾರ್ಮಿಕರು ಎಂದು ವರದಿಯಾಗಿದೆ.

Police Raided on House 32 Bihari male workers arrested mrq

ರಾಜಸ್ಥಾನ: ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯ ಕಿಶನ್‌ಗಢ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಅತಿದೊಡ್ಡ ರೈಡ್ ನಡೆಸಿದ್ದಾರೆ.  ಸ್ಥಳೀಯರಿಂದ ಖಚಿತ ಮಾಹಿತಿ ಪಡೆದ ಪೊಲೀಸರು ಮಾರ್ಬಲ್ ಪ್ರದೇಶದ ಮೋಹನ್‌ಪುರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದರು. ಈ ಮನೆಯಲ್ಲಿದ್ದ 6 ಕೋಣೆಗಳಲ್ಲಿ ಐವರು ಮಹಿಳೆಯರು ಮತ್ತು 32 ಪುರುಷರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗಲೇ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯಿಂದ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಮೋಹನ್‌ಪುರದಲ್ಲಿರುವ ಬಾಡಿಗೆ ಮನೆಯಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಗಾಂಧಿನಗರ ಠಾಣಾಧಿಕಾರಿ ಸುರೇಶ್ ಸೋನಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಯಿತು. ಪೊಲೀಸರು ಬಾಡಿಗೆ ಮನೆಗೆ ನುಗ್ಗಿ ಕೊಠಡಿಗಳನ್ನು ಪರಿಶೀಲಿಸಿದರು. ಅಲ್ಲಿನ ಪರಿಸ್ಥಿತಿ ಕಂಡು ಪೊಲೀಸರೂ ಬೆಚ್ಚಿಬಿದ್ದರು. ಬಾಡಿಗೆ ಮನೆಯ ಆರು ಕೋಣೆಗಳಲ್ಲಿ ಐದು ಮಹಿಳೆಯರು ಮತ್ತು 32 ಪುರುಷರಿದ್ದರು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಎಲ್ಲ ಪುರುಷರನ್ನು ಬಂಧಿಸಿ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ವೇಳೆ ಬಂಧಿತ ಪುರುಷರಲ್ಲಿ ಹೆಚ್ಚಿನವರು ಬಿಹಾರ ರಾಜ್ಯದವರು ಮತ್ತು ಮಾರ್ಬಲ್ ಪ್ರದೇಶದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಮಹಿಳೆಯರ ಹೆಸರು ಮತ್ತು ವಿಳಾಸವನ್ನು ಪಡೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. 

ಇದನ್ನೂ ಓದಿ: ಸ್ಪಾ ಗರ್ಲ್ ಅಂತೇಳಿ ಅದನ್ನೆಲ್ಲಾ ಮಾಡ್ತಿದ್ಳು… ರೈಡ್ ನಡೆಸಿದ ಪೊಲೀಸರಿಗೆ ಒದ್ದು, ಶೂ ಎಸೆದ ಲೇಡಿ

 ಈ ಸ್ಥಳ ದೀರ್ಘಕಾಲದಿಂದ ಅನುಮಾನಾಸ್ಪದ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು  ಸ್ಥಳೀಯರು ಆರೋಪಿಸಿದ್ದಾರೆ. 

ಇದನ್ನೂ ಓದಿ: ಹೊರಗೆ ಪಿಜಿ, ಒಳಗೆ ಮಾಂಸ ದಂಧೆ... ವಾಟ್ಸಪ್‌ನಲ್ಲಿ ಡೀಲ್, ಯುವತಿಯರು ಈ ಜಾಲದಲ್ಲಿ ಸಿಲುಕಿದ್ದೇಗೆ?

 

Latest Videos
Follow Us:
Download App:
  • android
  • ios