ಬುರ್ಖಾ ಹಾಕಿ ಸುತ್ತಾಡಿದ ಪೂಜಾರಿ ಪೊಲೀಸ್ ವಶಕ್ಕೆ, ಚಿಕನ್ ಫಾಕ್ಸ್ ಕಾರಣ ನೀಡಿದ ಅರ್ಚಕ

ಬುರ್ಖಾ ಹಾಕಿ ಮಹಿಳೆಯರಂತೆ ಸುತ್ತಾಡಿದ ದೇವಸ್ಥಾನ ಅರ್ಚಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.  ಪೊಲೀಸರ ಬಳಿ ತನಗೆ ಚಿಕಿನ್ ಫಾಕ್ಸ್ ಇದೆ ಹಾಗಾಗಿ ಬುರ್ಖಾ ಧರಿಸಿರುವುದಾಗಿ ಹೇಳಿದ್ದಾರೆ

Police caught Hindu temple priest after roaming streets of Kerala in Burqa ckm

ತಿರುವನಂತಪುರಂ(ಅ.09):  ದೇವಸ್ಥಾದಲ್ಲಿ ಪೂಜೆ ಮಾಡುವ ಅರ್ಚಕನಿಗೆ ನಗರ ಸುತ್ತಾಡುವ ಬಯಕೆಯಾಗಿದೆ. ಹಾಗೇ ತೆರಳಿದರೆ ಜನ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಬುರ್ಖಾ ಧರಿಸಿ ಸುತ್ತಾಟ ಆರಂಭಿಸಿದ್ದಾರೆ. ಆದರೆ ಅದೃಷ್ಠ ಚೆನ್ನಾಗಿರಲಿಲ್ಲ. ಈ ಅರ್ಚಕ ಪೊಲೀಸರ ಕೈವಶವಾಗಿದ್ದಾನೆ. ಈ ಘಟನೆ ನಡೆದಿರುವುದು ಕೇರಳದ ಕೊಯ್ಲಾಂಡಿಯಲ್ಲಿ.  ಈತನ ನಡಿಗೆ ಮಹಿಳೆ ರೀತಿ ಇರಲಿಲ್ಲ. ಕೆಲ ಅನುಮಾನಗಳು ಬಂದ ಕಾರಣ ಪೊಲೀಸರಿಗೆ ಸ್ಥಳೀಯರು ಅರ್ಚಕನ ಹಿಡಿದಿದ್ದಾರೆ.. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅರ್ಚಕನ ವಶಕ್ಕೆ ಪೆಡೆದಿದ್ದಾರೆ. ಈ ವೇಳೆ ಅರ್ಚಕ, ತನಗೆ ಚಿಕನ್ ಫಾಕ್ಸ್ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಬುರ್ಖಾ ಧರಿಸಿದ್ದೇನೆ. ಇದರಿಂದ ಇತರರಿಗೆ ಹರಡುವುದಿಲ್ಲ ಎಂಬ ಕಾರಣ ನೀಡಿದ್ದಾರೆ. 

28ರ ಹರೆಯದ ಜಿಷ್ಣು ನಂಬೂದಿರಿ ಅನ್ನೋ ಅರ್ಚಕ ಬುರ್ಖಾ ಧರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೆಪ್ಪಾಯೂರ್ ಬಳಿ ಇರುವ ದೇವಸ್ಥಾನದಲ್ಲಿ ಅರ್ಚಕನಾಗಿರುವ ಜಿಷ್ಣು, ಅಕ್ಟೋಬರ್ 7 ರಂದು ಬುರ್ಖಾ ಹಾಕಿ ಕೊಂಡು ನಗರ ಸುತ್ತಾಡಲು ತೆರಳಿದ್ದಾನೆ. ಕೊಯ್ಲಾಂಡಿ ಜಂಕ್ಷನ್ ಬಳಿ ಆಟೋ ರಿಕ್ಷಾ ಹತ್ತಿದ ಅರ್ಚಕ ಮಾತುಗಳು, ನಡತೆಯಲ್ಲಿ ಅನುಮಾನ ಬಂದಿದೆ. ಹೀಗಾಗಿ ಆಟೋ ಚಾಲಕ ಅರ್ಚಕ ಹಿಡಿದಿದ್ದಾನೆ. ಬಳಿಕ ಸ್ಥಳೀಯರು ಸೇರಿ ಅರ್ಚಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

 

Love Jihad: ಬುರ್ಖಾ ಧರಿಸಲು ನಿರಾಕರಿಸಿದ ರೂಪಾಲಿ, ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ!

ಪೊಲೀಸರ ಬಳಿಕ ತನಗೆ ಚಿಕನ್ ಫಾಕ್ಸ್ ಇದೆ ಎಂದಿದ್ದಾನೆ. ಆದರೆ ಪೊಲೀಸರು ಪರಿಶೀಲಿಸಿದಾಗ ಈತನಲ್ಲಿ ಯಾವುದೇ ಚಿಕನ್ ಫಾಕ್ಸ್ ಲಕ್ಷಣ ಕಾಣಿಸಿಲ್ಲ. ಯಾವುದೇ ಸಮುದಾಯಕ್ಕೆ, ಧರ್ಮಕ್ಕೆ ಅಪಚಾರ ಮಾಡಿಲ್ಲ. ಹೀಗಾಗಿ ಅರ್ಚಕನ ವಿರುದ್ದ ಯಾವುದೇ ಕೇಸ್ ದಾಖಲಿಸಿಲ್ಲ. ಈತನ ಮಾಹಿತಿ ಸಂಗ್ರಹಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಅರ್ಚಕ ಬುರ್ಖಾ ಧರಿಸಿದ್ದು ಯಾಕೆ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅರ್ಚಕ ನೀಡಿರುವ ಕಾರಣಗಳನ್ನು ಒಪ್ಪುವಂತೆ ಇಲ್ಲ. ಇದೀಗ ದೇಶ ವಿದೇಶದಲ್ಲಿ ಬುರ್ಖಾ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅರ್ಚಕ ಈ ವೇಷ ಧರಿಸಿದ್ದು ಯಾಕೆ? ಅನ್ನೋ ಹಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಪ್ರೇಯಸಿ ಭೇಟಿಗೆ ಬುರ್ಖಾ ಹಾಕಿದ ಪ್ರೇಮಿ ಅರೆಸ್ಟ್‌!
ಅವರಿವರ ಕಣ್ಣು ತಪ್ಪಿಸಿ ಪ್ರೇಮಿಗಳು ಪರಸ್ಪರ ಭೇಟಿಯಾಗುವುದು ಬಹಳ ಕಷ್ಟ. ಹೀಗೆಂದೇ ಉತ್ತರಪ್ರದೇಶ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಭೇಟಿ ಮಾಡಲು ಬುರ್ಖಾ ಧರಿಸಿಕೊಂಡು ಹೋಗಿ ಇದೀಗ ಪೊಲೀಸರ ಪಾಲಾಗಿದ್ದಾನೆ. ಹುಡುಗಿ ವಾಸವಿದ್ದ ಪ್ರದೇಶದಲ್ಲಿ ಪರಿಚಿತರು ಇದ್ದ ಕಾರಣ, ಯುವಕ ಬುರ್ಖಾ ಧರಿಸಿ ಅಲ್ಲಿಗೆ ತೆರಳಿದ್ದ. ಆದರೆ ಈತನ ಚಲನವಲನ ನೋಡಿ ಅನುಮಾನಗೊಂಡ ಸ್ಥಳೀಯರು ಅಡ್ಡಹಾಕಿದಾಗ ಬಣ್ಣ ಬಯಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಗೆಳತಿಯ ಭೇಟಿ ಮಾಡಲು ಬುರ್ಖಾ ತೊಟ್ಟು ಬಂದ ಗೆಳೆಯ

ಬುರ್ಖಾ, ಹಿಜಾಬ್ ದೇಶ ವಿದೇಶದಲ್ಲಿ ಭಾರಿ ಚರ್ಚೆ, ಪ್ರತಿಭಟನೆಗೆ ಕಾರಣಾಗಿದೆ. ಭಾರತದಲ್ಲಿ ಹಿಜಾಪ್ ಪರ ಪ್ರತಿಭಟನೆ ನಡೆಯುತ್ತಿದ್ದರೆ, ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. 

ಮಹಿಳಾ ಪ್ರತಿಭಟನೆ ಹತ್ತಿಕ್ಕಲು ತಾಲಿಬಾನ್‌ ಗಾಳಿಯಲ್ಲಿ ಗುಂಡು
ಆಷ್ಘಾನಿಸಾನದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತಾಲಿಬಾನ್‌ ಮಹಿಳೆಯರ ಮೇಲೆ ದೌರ್ಜನ್ಯವನ್ನು ಮುಂದುವರೆಸಿದೆ. ಕಾಬೂಲ್‌ನಲ್ಲಿ ನಡೆದ ಮಹಿಳೆಯರ ಪ್ರತಿಭಟನೆಯನ್ನು ಚದುರಿಸಲು ತಾಲಿಬಾದ್‌ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ ಹೆದರಿ ಓಡಿದ ಮಹಿಳೆಯರನ್ನು ಹಿಂಬಾಲಿಸಿ, ಥಳಿಸುವ ಮೂಲಕ ಕ್ರೌರ್ಯ ಮೆರೆದಿದ್ದಾರೆ.

Latest Videos
Follow Us:
Download App:
  • android
  • ios