ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಡಿಜಿಟಲ್ ರೇಪ್ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವಾಗ ಇಬ್ಬರು ನರ್ಸ್ ಸ್ಥಳದಲ್ಲೇ ಇದ್ದರೂ ಪ್ರತಿರೋಧ ತೋರಿಲ್ಲ ಅನ್ನೋದು ಮತ್ತೂ ಭಯಾನಕವಾಗಿದೆ.
ನವದೆಹಲಿ(ಏ.20) ಮಕ್ಕಳು ಮತ್ತು ಮಹಿಳೆ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲ, ಯಾವ ಸ್ಥಳವೂ ಸುರಕ್ಷಿತವಲ್ಲ ಅನ್ನೋ ಪರಿಸ್ಥಿತಿ ತಲುಪಿದೆ. ಇದೀಗ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ವಿಮಾನದ ಗಗನಸಖಿ ಮೇಲೆ ಡಿಜಿಟಲ್ ಅತ್ಯಾ*ರ ನಡೆದಿದೆ. ಗುರುಗ್ರಾಂನ ಮೆದಾಂತ ಆಸ್ಪತ್ರೆ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ
ಪಶ್ಚಿಮ ಬಂಗಳಾದ ಮೂಲದ ಯುವತಿ ಏರ್ ಹೋಸ್ಟರ್ಸ್ ಟ್ರೈನಿಂಗ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದಳು. ಗಗನಸಖಿ ತರಬೇತಿ ನಡುವೆ ಯುವತಿ ಆರೋಗ್ಯ ಕೈಕೊಟ್ಟಿದೆ. ಆರೋಗ್ಯದಲ್ಲಿ ತೀವ್ರ ಏರುಪೇರಾದಾದ ಗುರುಗ್ರಾಂನ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಕಟುಂಬಸ್ಥರು ಪಶ್ಚಿಮ ಬಂಗಾಳದಲ್ಲಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಮೆದಾಂತ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಕ್ಷೀಣಿಸಿದ್ದ ಕಾರಣ ವೆಂಟಿಲೇಟರ್ ನೆರವು ನೀಡಲಾಗಿತ್ತು.
ಶಾಲೆಯಲ್ಲಿ 3 ವರ್ಷದ ಮಗುವಿನ ಮೇಲೆ ಡಿಜಿಟಲ್ ರೇಪ್
ಆಸ್ಪತ್ರೆ ತಾಂತ್ರಿಕ ಸಿಬ್ಬಂದಿಯಿಂದ ಕೃತ್ಯ
ಗಗನಸಖ ಆರೋಗ್ಯದ ಮೇಲೆ ವೈದ್ಯರು ನಿಗಾ ಇರಿಸಿದ್ದರು. ನರ್ಸ್‌ಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಇತ್ತ ವೆಂಟಿಲೇಟರ್ ನೆರವು ನೀಡಿದ್ದ ಕಾರಣ ತಾಂತ್ರಿಕ ಸಿಬ್ಬಂದಿ ಕೂಡ ಐಸಿಯು ಕೋಣೆಗೆ ತೆರಳಿ ಪದೇ ಪದೇ ಪರಿಶೀಲನೆ ನಡೆಸುತ್ತಿದ್ದ. ಇದರ ನಡುವೆ ಇಬ್ಬರು ನರ್ಸ್ ಗಗನಸಖಿಯೆ ಸುಶ್ರೂಶೆ ಮಾಡಿದ್ದಾರೆ. ಐಸಿಯು ಕೋಣೆಯಲ್ಲಿ ಇಬ್ಬರು ನರ್ಸ್ ಇರುವಾಗಲೇ ಈ ತಾಂತ್ರಿಕ ಸಿಬ್ಬಂದಿ ಡಿಜಿಟಲ್ ರೇP ಕೃತ್ಯ ಎಸಗಿದ್ದಾನೆ.
ಏನಿದು ಡಿಜಿಟಲ್ ರೇಪ್?
ಡಿಜಿಟಲ್ ರೇಪ್, ಅಅತ್ಯಾ*ರ ದಷ್ಟೇ ಗಂಭೀರ ಪ್ರಕರಣವಾಗಿದೆ. ಬಲತ್ಕಾರವಾಗಿ, ಒಪ್ಪಿಗೆ ಇಲ್ಲದೆ, ಬೆದರಿಸಿ ಅಥವಾ ಇನ್ಯಾವುದೇ ಪರಿಸ್ಥಿತಿ ಬಳಸಿಕೊಂಡು ಹೆಣ್ಮುಮಕ್ಕಳ ಖಾಸಗಿ ಅಂಗಕ್ಕೆ ಕೈಬೆರಳು, ಅಥವಾ ಇನ್ಯಾವುದೇ ವಸ್ತುಗಳ ತುರುಕುವುದಾಗಿದೆ.ದೈಹಿಕ ಸಂಪರ್ಕ ನಡೆಸದೇ ಹೆಣ್ಣನ್ನು ಕೈಬೆರಳಿನ ಮೂಲಕ, ಇತರ ವಸ್ತುಗಳ ಮೂಲಕ ಅತ್ಯಾ*ರ ಎಸಗುವುದು, ಉದ್ರೇಕಗೊಳಿಸುವುದು, ಕಿರುಕುಳ ನೀಡುವುದೇ ಡಿಜಿಟಲ್ ರೇಪ್. 2012ರ ವರೆಗೆ ಈ ರೀತಿಯ ಪ್ರಕರಣವನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗಿತ್ತು. ಆದರೆ ದೆಹಲಿಯ ನಿರ್ಭಯಾ ಪ್ರಕರಣ ಬಳಿಕ ಅತ್ಯಾಚಾರ ಪ್ರಕರಣದ ಗಂಭೀರತಯನ್ನು ಅರಿತು ಕೆಲ ಮಾರ್ಪಾಟು ಮಾಡಲಾಗಿದೆ. 2012ರ ಬಳಿಕ ಈ ರೀತಿಯ ಪ್ರಕರಣಗಳನ್ನು ಡಿಜಿಟಲ್ ರೇಪ್ ಅಡಿಯಲ್ಲಿ ದಾಖಲಿಸಲಾಗುತ್ತಿದೆ. ಇದು ಗಂಭೀರ ಲೈಂಗಿಕ ಅಪರಾಧವಾಗಿದೆ.ಪ್ರಮುಖವಾಗಿ ಆರೋಗ್ಯ ತಪಾಸಣೆ, ಐಸಿಯು, ಅಸ್ವಸ್ಥಗೊಂಡಿರುವಾಗ ನಡೆಯುವ ಡಿಜಿಟಲ್ ರೇಪ್ ಅತ್ಯಂತ ಗಂಭೀರ ಪರಿಣಾಮ ಸೃಷ್ಟಿಸಲಿದೆ. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಆರೋಪಿ ಅರೆಸ್ಟ್
ಕೃತ್ಯ ಎಸಗಿದ ಆಸ್ಪತ್ರೆ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತನನ್ನು ಮೆದಾಂತ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಪ್ರಕರಣ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಬಿಹಾರದ ಮುಝಾಫರ್ ನಗರದ ಈತ ಗುರುಗ್ರಾಂ ಮೆದಾಂತ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ವಿಚಾರಣೆ ಆರಂಭಗೊಂಡಿದೆ. ಇದೇ ರೀತಿ ಹಲವು ರೋಗಿಗಳ ಮೇಲೆ ದೌರ್ಜನ್ಯ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
