ಹೆಂಡತಿ ಖಾಸಗಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಪತಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಕ್ಲಿಪ್‌ನಿಂದ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಮತ್ತಷ್ಟು ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಏನಿದು ಗಂಡ ಹೆಂಡತಿಯ ಖಾಸಗಿ ವಿಡಿಯೋ ಪ್ರಕರಣ 

ರೇವಾ (ಫೆ.19) ಗಂಡ ಹೆಂಡತಿ ನಡುವೆ ಮೈಮನಸ್ಸು, ಜಗಳ ಇದ್ದಿದ್ದೇ. ಮನಸ್ತಾಪಗಳು ತೀವ್ರಗೊಂಡಾಗ ವಿಚ್ಚೇದನ ದಾರಿ ಹಿಡಿಯುತ್ತಾರೆ, ಆಕ್ರೋಶ ಹೆಚ್ಚಾದಾಗ ಕಾನೂನು ಕೈಗೆ ತೆಗೆದುಕೊಂಡು ದುರಂತ ಘಟನೆಗೆ ಸಾಕ್ಷಿಯಾಗುತ್ತಾರೆ. ಇದೀಗ ವರದಕ್ಷಿಣೆ ಕಿರುಕುಳ ಜೊತೆಗೆ ಪತ್ನಿಯ ಖಾಸಗಿ ವಿಡಿಯೋ ಸೆರೆ ಹಿಡಿ ಪತಿ ಊರವರಿಗೆ ಹಂಚಿದ ಘಟನೆ ನಡೆದಿದೆ. ವ್ಯಾಟ್ಸಾಪ್ ಸೇರಿ ಸೋಶಿಯಲ್ ಮೀಡಿಯಾಗಳಲ್ಲಿ ಹೆಂಡತಿಯ ಖಾಸಗಿ ವಿಡಿಯೋವನ್ನು ಹರಿ ಬಿಟ್ಟಿದ್ದಾನೆ. ಹಲವು ವಿಡಿಯೋಗಳನ್ನು ಹರಿಬಿಟ್ಟು ಪತ್ನಿ ಹಾಗೂ ಆಕೆಯ ಕುಟುಂಬಸ್ಥರಿಗೆ ವರದಕ್ಷಿಣೆ ರೂಪದಲ್ಲಿ ಬರಬೇಕಿದ್ದ ಹಣ ನೀಡುವಂತೆ ಬೆದರಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಹೆಂಡತಿ ವಿಡಿಯೋ ಸೆರೆ ಹಿಡಿದ ಕಿರಾತಕ ಪತಿ

ಶಿವಂ ಸಾಹು ಮೆ 10, 2025ರಲ್ಲಿ ಮದುವೆಯಾಗಿದ್ದಾನೆ. ಮದುವೆ ಬಳಿಕ ಪತ್ನಿಗೆ ವರದಕ್ಷಿಣೆ ಹೆಸರಲ್ಲಿ ಕಿರುಕುಳ ಆರಂಭಗೊಂಡಿತ್ತು. ಪತ್ನಿಯ ಜೊತೆ ಬೆಡ್‌ರೂಂನಲ್ಲಿನ ಕೆಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ಪತ್ನಿ ಸ್ನಾನದ ವೇಳೆ ಗೊತ್ತಾಗದಂತೆ ಮೊಬೈಲ್ ಇಟ್ಟು ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಈ ರೀತಿ ಪತ್ನಿ ಹಲವು ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ಇತ್ತ ಇದೇ ವಿಡಿಯೋಗಳನ್ನಿಟ್ಟು ಪತ್ನಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಮದುವೆಯಾದ ಆರಂಭದಿಂದಲೂ ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ಇತ್ತೀಚೆಗೆ ವಿಡಿಯೋ ಬಹಿರಂಗ ಮಾಡುವುದಾಗಿ ಜಗಳದ ನಡುವೆ ಹೇಳಿದ್ದ. ಆದರೆ ಹೆಂಡತಿ ಖಾಸಗಿ ವಿಡಿಯೋಗಳನ್ನು ಪತಿ ಬಹಿರಂಗ ಮಾಡುವ ಸಾಧ್ಯತೆ ಇಲ್ಲ ಎಂದು ಪತ್ನಿ ಕಿರುಕಳ ಸಹಿಸಿಕೊಂಡು ಸುಮ್ಮನಾಗಿದ್ದಾಳೆ.

ತನ್ನದೇ ವ್ಯಾಟ್ಸಾಪ್‌ಗೆ ಬಂತು ವಿಡಿಯೋ

ಇದರ ನಡುವೆ ಕಿರುಕುಳ ನೀಡಿದ ಪತಿ ಈ ವಿಡಿಯೋಗಳನ್ನು ಊರಿನ ಕೆಲ ವ್ಯಾಟ್ಸಾಪ್ ಗ್ರೂಪ್, ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲವೆಡೆ ಪೋಸ್ಟ್ ಮಾಡಿದ್ದಾನೆ. ಕೆಲವೆ ನಿಮಿಷಗಳಲ್ಲಿ ಈ ವಿಡಿಯೋ ಎಲ್ಲೆಡೆ ಹರಿದಾಡಿದೆ. ಫ್ಯಾಮಿಲಿ ಗ್ರೂಪ್‌ಗಳಲ್ಲೂ ಈ ವಿಡಿಯೋ ಕಾಣಿಸಿಕೊಂಡಿದೆ. ಅಷ್ಟೇ ವೇಗದಲ್ಲಿ ಮಹಿಳೆಯ ಆಪ್ತರು ಈ ವಿಡಿಯೋ ಕಳುಹಿಸಿ ಏನಿದು ಎಂದು ಪ್ರಶ್ನಿಸಿದ್ದಾರೆ. ಅಲ್ಲಿಗೆ ಪತಿಯ ಕ್ರೌರ್ಯ ಪತ್ನಿಗೆ ಮನದಟ್ಟಾಗಿದೆ.

ದೂರು ನೀಡಿದ ಪತ್ನಿ

ವಿಡಿಯೋ ವೈರಲ್ ಆಗುತ್ತಿದ್ದಂತೆ ಪತ್ನಿ ದೂರು ನೀಡಿದ್ದಾಳೆ. ಪತಿ ಕಿರುಕುಳ, ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಘಟನೆ ಸೇರಿದಂತೆ ಇಂಚಿಂಚು ಘಟನೆಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾಳೆ. ಇತ್ತ ಮಹಿಳೆ ಪೋಷಕರು ದೂರಿಗೆ ಪೂರಕವಾಗಿ ಕೆಲ ಸಾಕ್ಷ್ಯಗಳನ್ನು ಹೇಳಿಕೆಯನ್ನು ನೀಡಿದ್ದರೆ. ಮದುವೆ ವೇಳೆ 3 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಮಗಳ ಭವಿಷ್ಯದ ದೃಷ್ಟಿಯಿಂದ ಹರಹಾಸ ಮಾಡಿ 2 ಲಕ್ಷ ರೂಪಾಯಿ ಹೊಂದಿಸಿ ನೀಡಿದ್ದೇವೆ. ಬಾಕಿ ಉಳಿದ ಹಣಕ್ಕಾಗಿ ಕಿರುಕುಳ ಆರಂಭಿಸಿದ್ದ. ಇತ್ತೀಚೆಗೆ ಕಿರುಕುಳ ತೀವ್ರಗೊಂಡಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಫೆಬ್ರವರಿ 12ರಂದು ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದರ ಬೆನ್ನಲ್ಲೇ ದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಶಿವಂ ಸಾಹು ಮುಂಬೈಗೆ ಪರಾರಿಯಾಗಿದ್ದಾನೆ. ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತಿದ್ದಂತೆ ಮುಂಬೈನಿಂದ ನೇರವಾಗಿ ಪತ್ನಿ ತವರು ಮನೆಗೆ ಆಗಮಿಸಿದ್ದಾನೆ. ಕತ್ತಲ ವೇಳೆ ಆಗಮಿಸಿದ ಶಿವಂ ಸಾಹು, ಚಾಕು ಹಿಡಿದು ಬಾಕಿ ಹಣ ನೀಡುವಂತೆ ಬೆದರಿಸಿದ್ದಾನೆ.ಇತ್ತ ತಕ್ಷಣವೇ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹಣ ಅರೇಂಜ್ ಮಾಡಿ ಕೊಡುತ್ತೇವೆ ಭರವಸೆ ನೀಡಿದ್ದಾರೆ.ಕೆಲ ಹೊತ್ತಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಿವಂ ಸಾಹುವನ್ನು ಬಂಧಿಸಿದ್ದಾರೆ.