ಲಂಡನ್(ಏ.16): ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಹಾರಿದ ಆರೋಪಿ ನೀರವ್ ಮೋದಿಗೆ ಸಂಕಷ್ಟ ಹೆಚ್ಚಾಗಿದೆ. ಇದೀಗ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುವ ಸರ್ಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ನೀರವ್ ಮೋದಿಯನ್ನು ಬ್ರಿಟನ್‌ನಿಂದ ಗಡಿಪಾರು ಮಾಡಲು ಬ್ರಿಟನ್ ಗೃಹ ಸಚಿವಾಲ ಅಸ್ತು ಎಂದಿದೆ.

ಮಲ್ಯ ಗಡೀಪಾರಿಗೆ ಕೇಂದ್ರ ಎಲ್ಲಾ ಪ್ರಯತ್ನ ಮಾಡಿದೆ: ಸುಪ್ರೀಂಗೆ ಕೇಂದ್ರ ಮಾಹಿತಿ!_

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ನಲ್ಲಿ ತಲೆ ಮರೆಸಿಕೊಂಡಿದ್ದ 50 ವರ್ಷದ ನೀರವ್ ಮೋದಿ, ಯುಕ ಗೃಹ ಸಚಿವಾಲಯ ಸಹಿ ಹಾಕಿದೆ. ಈ ಆದೇಶವನ್ನು 28 ದಿನದ ಒಳಗೆ ಯುಕೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಹೀಗಾಗಿ ಈ ಪ್ರಕರಣ ಕೂಡ ಮದ್ಯ ದೊರೆ ವಿಜಯ್ ಮಲ್ಯ ಪ್ರಕರಣದಂತೆ ವರ್ಷ ಹಿಡಿದರೂ ಅಚ್ಚರಿಯಿಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೀರವ್ ಮೋದಿ ಬ್ರಿಟನ್‌ಗೆ ಹಾರಿದ್ದರು. ಬ್ರಿಟನ್‌ನಲ್ಲಿ ತಲೆ ಮರೆಸಿಕೊಂಡಿದ್ದ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಸರ್ಕಾರ ಸತತ ಪ್ರಯತ್ನ ನಡೆಸುತ್ತಲೇ ಇದೆ.