ನವದೆಹಲಿ(ಡಿ.07): ಪಿಎಂ ಮೋದಿ ಡಿಸೆಂಬರ್ 8, ಮಂಗಳವಾರದಂದು ಬೆಳಗ್ಗೆ 10.45ಕ್ಕೆ ವರ್ಚುವಲ್ ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಲಿದ್ದಾರೆ. ದೂರ ಸಂಪರ್ಕ ವಿಭಾಗ, ಭಾರತ ಸರ್ಕಾರ ಹಾಗೂ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇದನ್ನು ಆಯೋಜಿಸಿದ್ದು,. ಡಿಸೆಂಬರ್ 8 ರಿಂದ 10ರವರೆಗೆ ನಡೆಯಲಿದೆ.

ಕೇರಳ ಜೈವಿಕ ತಂತ್ರಜ್ಞಾನ ಕೇಂದ್ರಕ್ಕೆ ಗೋಲ್ವಾಲ್ಕರ್‌ ಹೆಸರು: ವಿವಾದ

ನಾಲ್ಕನೇ ಬಾರಿ ನಡೆಯುತ್ತಿರುವ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಭಾರತದ ಕೋಟ್ಯಾಧಿಪತಿ ಮುಕೇಶ್ ಅಂಬಾನಿಯೂ ಭಾಗಿಯಾಗಲಿದ್ದಾರೆ. ದೂರ ಸಂಪರ್ಕ ವಿಭಾಗದ ಈ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಈ ಕಾರ್ಯಕ್ರಮ ಕೊರೋನಾ ಮಹಾಮಾರಿಯಿಂದಾಗಿ ಇದೇ ಮೊದಲ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದೆ. ಈ ಕಾರ್ಯಕ್ರಮ ಮೂರು ದಿನ ನಡೆಯಲಿದೆ.

ಏನಿದು ಐಎಂಸಿ 2020?

ಐಎಂಸಿ 2020ರ ಥೀಮ್ ಅಂತರ್ಗತ ನಾವೀನ್ಯತೆ - ಸ್ಮಾರ್ಟ್, ಸುರಕ್ಷಿತ, ಸುಸ್ಥಿರ ಎಂದಿದೆ. ಈ ಮೂಲಕ ಆತ್ಮನಿರ್ಭರ ಭಾರತ, ಡಿಜಿಟಲ್ ಸಮಾವೇಶಕ್ಕೆ ಮತ್ತಷ್ಟಯು ಪ್ರೋತ್ಸಾಹ ನೀಡುವುದಾಗಿದೆ. ಜೊತೆಗೆ ಇದು ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.