Asianet Suvarna News Asianet Suvarna News

ಕೊರೋನಾ ಹೋರಾಟದಲ್ಲಿ ನಿರ್ಲಕ್ಷ್ಯ ಸಲ್ಲದು ನೂತನ ಸಚಿವರಿಗೆ ಮೋದಿ ಕಿವಿಮಾತು!

* ನೂತನವಾಗಿ ಅಧಿಕಾರ ವಹಿಸಿಕೊಂಡ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತು

* ಕೊರೋನಾ ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಸಲ್ಲದು

* ಒಂದೇ ಒಂದು ತಪ್ಪು ಕೂಡ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲದು

PM tells Council of Ministers A single mistake enough to weaken Covid 19 fightback pod
Author
Bangalore, First Published Jul 9, 2021, 8:43 AM IST

ನವದೆಹಲಿ(ಜು.09): ನೂತನವಾಗಿ ಅಧಿಕಾರ ವಹಿಸಿಕೊಂಡ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂವಾದ ನಡೆಸಿದ್ದಾರೆ.

ಈ ವೇಳೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಸಲ್ಲದು. ಕೊರೋನಾ ಇನ್ನೂ ಮುಗಿದಿಲ್ಲ. ಒಂದೇ ಒಂದು ತಪ್ಪು ಕೂಡ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲದು ಹಾಗೂ ಹೋರಾಟವನ್ನು ದುರ್ಬಲಗೊಳಿಸಬಲ್ಲದು ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.

ನೂತನ ಸಚಿವರ ಕ್ಯಾಬಿನೆಟ್ ಸಭೆ; ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ ಘೋಷಣೆ!

ಲಸಿಕೆ ಅಭಿಯಾನದಲ್ಲಿ ವಿಜ್ಞಾನಿಗಳ ಪಾತ್ರವನ್ನು ಮೆಚ್ಚಿರುವ ಮೋದಿ, "ದೇಶದಲ್ಲಿ ಕೊರೋನಾ ಸೋಂಕನ್ನು ಹತೋಟಿಗೆ ತರುವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವವಾದದ್ದು. ಸೋಂಕನ್ನು ತಡೆಗಟ್ಟಲು ಲಸಿಕೆ ನಿರ್ಣಾಯಕವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ವಿಜ್ಞಾನಿಗಳು ಅತ್ಯುತ್ತಮ ವಿಶ್ವದರ್ಜೆಯ ಲಸಿಕೆಯನ್ನು ಸಂಶೋಧನೆ ಮಾಡಿದ್ದಾರೆ. ಈ ಲಸಿಕೆಗೆ ವಿದೇಶದಲ್ಲೂ ಸಾಕಷ್ಟು ಬೇಡಿಕೆ ಇರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.

ಇದೇ ವೇಳೆ ಸಚಿವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಸಚಿವಾಲಯದ ಕೆಲಸದಲ್ಲಿ ಸಂಪೂರ್ಣ ಪರಿಶ್ರಮದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ತುಳಿತಕ್ಕೆ ಒಳಗಾದವರಿಗೆ ಸಹಾಯ ಮಾಡುವುದು ಮೊದಲ ಆದ್ಯತೆ ಆಗಬೇಕು. ನೂತನ ಸಚಿವರು ಹಿಂದಿನ ಸಚಿವರನ್ನು ಭೇಟಿ ಮಾಡಿ ಅವರ ಕೆಲಸದ ಅನುಭವ ಪಡೆದುಕೊಳ್ಳಬೇಕು. ಯಾವುದೇ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಎಂದು ನೂತನ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.

ಸಕ್ರಿಯ ಕೇಸು ಹೆಚ್ಚಳದ ಆತಂಕ: 55 ದಿನದ ಇಳಿಮುಖದ ಹಾದಿಗೆ ಬ್ರೇಕ್‌!

ಜವಾಬ್ದಾರಿಗಳು ಕೊನೆಗೊಳ್ಳುವುದಿಲ್ಲ. ನಿಮ್ಮ ಅಧಿಕಾರಾವಧಿಯಲ್ಲಿ ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಂಡಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಕೆಲಸ ಎಂದು ಪ್ರಧಾನಿ ಮೋದಿ ಎಲ್ಲಾ ಸಚಿವರಿಗೆ ತಿಳಿಸಿದ್ದಾರೆ

Follow Us:
Download App:
  • android
  • ios