Asianet Suvarna News Asianet Suvarna News

ನೂತನ ಸಚಿವರ ಕ್ಯಾಬಿನೆಟ್ ಸಭೆ; ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ ಘೋಷಣೆ!

  • ಸಂಪುಟ ಪುನಾರಚನೆ ಬಳಿಕ ಪ್ರಧಾನಿ ಮೋದಿ ಮೊದಲ ಸಭೆ
  • ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ  ಘೋಷಣೆ
  • ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಲು ಹಣ ಬಳಕೆ
Health Minister Mansukh Mandaviya annouces emergency package for tackle coronavirus ckm
Author
Bengaluru, First Published Jul 8, 2021, 8:28 PM IST

ನವದೆಹಲಿ(ಜು.08): ಕೇಂದ್ರ ಸಂಪುಟ ಪುನಾರಚನೆ ಬಳಿಕ ಮೊದಲ ಕ್ಯಾಬಿನೆಟ್ ಸಭೆ ನಡೆದಿದೆ. ಈ ಸಭೆ ಬಳಿಕ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ನೂತನ ಆರೋಗ್ ಸಚಿವ ಮನ್ಸೂಕ್ ಮಾಂಡವಿಯಾ ಬರೋಬ್ಬರಿ  23,123 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

ಆಗಸ್ಟ್ 15ರ ವರೆಗೆ ದೆಹಲಿಯಲ್ಲೇ ಇರಬೇಕು ; ನೂತನ ಸಚಿವರಿಗೆ ಬಂತು ಮಹತ್ವದ ಸೂಚನೆ!

736 ಜಿಲ್ಲೆಗಳಲ್ಲಿ ಪೀಡಿಯಾಟ್ರಿಕ್ಸ್ ವಿಭಾಗಗಳು, 20,000 ಹೊಸ ಐಸಿಯು ಹಾಸಿಗೆಗಳು ಮತ್ತು ಔಷಧಿಗಳ ಬಫರ್ ಸ್ಟಾಕ್ ಸೇರಿದಂತೆ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಮಾಂಡವಿಯಾ ಹೇಳಿದರು.

 

ನೂತನ ಸಚಿವರ ಕ್ಯಾಬಿನೆಟ್ ಸಭೆ; ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ ಘೋಷಣೆ!... Read more at: https://kannada.asianetnews.com/india-news/health-minister-mansukh-mandaviya-annouces-emergency-package-for-tackle-coronavirus-ckm-qvxlld

23,123 ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ 15,000 ಕೋಟಿ ರೂಪಾಯಿ ಮೊತ್ತವನ್ನು ಕೇಂದ್ರ ಆರೋಗ್ಯ ಮೂಲ ಸೌಕರ್ಯ ವೃದ್ಧಿಗೆ ಖರ್ಚು ಮಾಡಲಿದೆ. ಇನ್ನುಳಿದ 8,000 ಕೋಟಿ ರೂಪಾಯಿ ಹಣ ರಾಜ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಮಾಂಡವಿಯಾ ಹೇಳಿದರು. ಮುಂದಿನ 9  ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಮೋದಿ ಸಂಪುಟ ಸೇರಿದ ನೂತನ ಸಚಿವರಿಗೆ ಖಾತೆ ಹಂಚಿಕೆ; ಶಾಗೆ ಹೆಚ್ಚುವರಿ ಸಹಕಾರ ಸಚಿವಾಲಯ!..

ಕೊರೋನಾ ವೈರಸ್ 2ನೇ ಅಲೆ ನಿಯಂತ್ರ ಕುರಿತು ಮೋದಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಪರಿಣಾಣ ಆರೋಗ್ಯ ಸಚಿವ ಹರ್ಷವರ್ಧನ್ ಸ್ಥಾನ ತ್ಯಜಿಸಬೇಕಾಯಿತು.  ಇದೀಗ ನೂತನ ಮಂತ್ರಿ ಅಧಿಕಾರ ಸ್ವೀಕರಿಸದ ಮೊದಲ ದಿನವೇ ಭರ್ಜರಿ ಪ್ಯಾಕೇಜ್ ಘೋಷಿಸಿದ್ದಾರೆ.

Follow Us:
Download App:
  • android
  • ios