ವಾರಾಣಸಿ(ಫೆ.16): ತನ್ನ ಮಗಳ ಮದುವೆಗೆ ಬರುವಂತೆ ಆಟೋ ಡ್ರೈವರ್ ವೋರ್ವ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದು, ಆತನ ಮಗಳ ಮದುವೆಗ ಶುಭ ಕೋರಿ ಪ್ರಧಾನಿ ಮೋದಿ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ.

ಇಲ್ಲಿನ ಡೋರ್ಮಿ ಗ್ರಾಮದ ಮಂಗಲ್ ಕೇವಾತ್ ಎಂಬ ಆಟೋ ಡ್ರೈವರ್ ತನ್ನ ಮಗಳ ಮದುವೆಗೆ ಬರುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಮದುವೆಯ ಮೊದಲ ಆಹ್ವಾನ ಪತ್ರಿಕೆಯನ್ನು ಮಂಗಲ್ ಕೇವಾತ್ ಪ್ರಧಾನಿ ಮೋದಿ ಅವರಿಗೆ ಕಳುಹಿಸಿದ್ದ.

ಮಂಗಲ್ ಕೇವಾತ್ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿರುವ ಪ್ರಧಾನಿ ಮೋದಿ, ಮಗಳ ಮದುವೆಗೆ ಶುಭ ಕೋರಿ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಸಹಿ ಇರುವ ಪತ್ರವನ್ನು ಪ್ರಧಾನಿ ಕಚೇರಿ ಮಂಗಲ್ ಕೇವಾತ್ ಅವರಿಗೆ ರವಾನಿಸಿದೆ.

ಪ್ರಧಾನಿ ಮೋದಿಗೆ ಪತ್ರ ಬರೆದ ಸ್ಪಿನ್ನರ್ ಯುಜುವೇಂದ್ರ ಚೆಹಾಲ್

ಕಳೆದ ಫೆ.12ರಂದು ಮಂಗಲ್ ಕೇವಾತ್ ಪುತ್ರಿಯ ವಿವಾಹ ನೆರವೇರಿದ್ದು, ಆಟೋ ಡ್ರೈವರ್ ವೋರ್ವನ ಆಹ್ವಾನ ಪತ್ರಿಕೆ ಸ್ವೀಕರಿಸಿ ಶುಭ ಕೋರಿದ ಪ್ರಧಾನಿ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.