Asianet Suvarna News Asianet Suvarna News

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾನಕ್ಕೂ ಮುನ್ನ ಕಟ್ಟುನಿಟ್ಟಾದ ಆಚರಣೆ; ಹಲವು ದೇಗುಲಗಳಿಗೆ ಭೇಟಿ ನೀಡ್ತಿರೋ ಮೋದಿ..

ಪ್ರಧಾನಿ ಮೋದಿ ನೆಲದ ಮೇಲೆ ಕಂಬಳಿ ಹೊದ್ದು ಮಲಗುತ್ತಿದ್ದಾರೆ ಹಾಗೂ ಎಳನೀರನ್ನು ಮಾತ್ರ ಸೇವಿಸುತ್ತಿದ್ದಾರೆ. ಅಲ್ಲದೆ, ಗೋಪೂಜೆ ಮಾಡುವುದು ಮತ್ತು ಹಸುಗಳಿಗೆ ಪ್ರತಿನಿತ್ಯ ಆಹಾರ ನೀಡುವುದು; ಮತ್ತು ಪ್ರತಿದಿನವೂ ‘ಅನ್ನದಾನ’, ವಸ್ತ್ರಗಳನ್ನು ನೀಡುವುದು ಇತ್ಯಾದಿ ‘ದಾನ’ದ ವಿವಿಧ ರೂಪಗಳನ್ನು ಮಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ. 

pm s tireless devotional efforts in the run up to pran pratishtha ceremony in ayodhya ash
Author
First Published Jan 19, 2024, 1:30 PM IST

ನವದೆಹಲಿ (ಜನವರಿ 19, 2024): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವು ನಡೆಯುತ್ತಿದೆ. ಈ ಹಿನ್ನೆಲೆ ಉದ್ಘಾಟನೆ ಮಾಡುವ ಪ್ರಧಾನಿ ಮೋದಿಯವರು 11 ದಿನಗಳ ಕಾಲ ಅನುಷ್ಠಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಅನುಷ್ಠಾನಕ್ಕಾಗಿ, ಅವರು ಪವಿತ್ರ ಗ್ರಂಥಗಳಿಂದ ಸೂಚಿಸಲಾದ ಹಲವು ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. 

ಅಲ್ಲದೆ, ಪ್ರಧಾನಿ ಮೋದಿ ನೆಲದ ಮೇಲೆ ಕಂಬಳಿ ಹೊದ್ದು ಮಲಗುತ್ತಿದ್ದಾರೆ ಹಾಗೂ ಎಳನೀರನ್ನು ಮಾತ್ರ ಸೇವಿಸುತ್ತಿದ್ದಾರೆ. ಅಲ್ಲದೆ, ಗೋಪೂಜೆ ಮಾಡುವುದು ಮತ್ತು ಹಸುಗಳಿಗೆ ಪ್ರತಿನಿತ್ಯ ಆಹಾರ ನೀಡುವುದು; ಮತ್ತು ಪ್ರತಿದಿನವೂ ‘ಅನ್ನದಾನ’, ವಸ್ತ್ರಗಳನ್ನು ನೀಡುವುದು ಇತ್ಯಾದಿ ‘ದಾನ’ದ ವಿವಿಧ ರೂಪಗಳನ್ನು ಮಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಭಾರತ ಒಂದು ಅಸಾಧಾರಣ ಯಶಸ್ಸಿನ ಕಥೆ; ಮೋದಿ ಸರ್ಕಾರದ ಸಾಧನೆಗಳಿಂದ ಅನೇಕರಿಗೆ ಲಾಭ: ಅಮೆರಿಕ ಶ್ಲಾಘನೆ
 
ರಾಮಭಕ್ತನಾಗಿ, ಪ್ರಧಾನಮಂತ್ರಿಯವರು ಕಳೆದ ಕೆಲವು ದಿನಗಳಲ್ಲಿ ರಾಮಕುಂಡ್ ಮತ್ತು ನಾಸಿಕ್‌ನ ಶ್ರೀ ಕಲಾರಾಮ್ ದೇವಾಲಯ, ಆಂಧ್ರಪ್ರದೇಶದ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಾಲಯ; ಕೇರಳದ ಗುರುವಾಯೂರ್ ದೇವಸ್ಥಾನ ಮತ್ತು ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನ.ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಮುಂದಿನ 2 ದಿನಗಳಲ್ಲಿ ತಮಿಳುನಾಡಿನಲ್ಲಿ ಇಂತಹ ಇನ್ನಷ್ಟು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಈ ದೇವಾಲಯಗಳು ದೇಶದ ವಿವಿಧ ಭಾಗಗಳಿಗೆ ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಭಗವಾನ್ ರಾಮನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ ಎಂದೂ ತಿಳಿದುಬಂದಿದೆ.

ಪ್ರಧಾನಮಂತ್ರಿಯವರು ಕಳೆದ ಕೆಲವು ದಿನಗಳಲ್ಲಿ ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡಿದ್ದು ಮತ್ತು ಬಹು ಭಾಷೆಗಳಲ್ಲಿ ರಾಮಾಯಣವನ್ನು ಆಲಿಸುವುದು ಮತ್ತು ದೇವಾಲಯಗಳಲ್ಲಿ ಭಜನೆಗಳಲ್ಲಿ ಭಾಗವಹಿಸುವುದು ಗಮನಾರ್ಹವಾಗಿದೆ. ಏಕೆಂದರೆ ಅದರ ಪ್ರಭಾವವು ಧರ್ಮದ ಕ್ಷೇತ್ರವನ್ನು ಮೀರಿದೆ. ಪ್ರಧಾನಮಂತ್ರಿಯವರ ಪ್ರಯತ್ನಗಳು ‘ಏಕ್ ಭಾರತ್ ಶ್ರೇಷ್ಠ ಭಾರತ’ ವೆಂಬ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ರಚನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಅಯೋಧ್ಯೆಯ ರಾಮಮಂದಿರ ನೆನಪಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ
 
ಈ ಮಧ್ಯೆ, ಪ್ರಧಾನಮಂತ್ರಿಯವರು ಸ್ವಚ್ಛ ತೀರ್ಥ ಉಪಕ್ರಮವನ್ನು ಪ್ರಾರಂಭಿಸಿದರು ಮತ್ತು ಸ್ವತಃ ಅದರ ಮುಂದಾಳತ್ವವನ್ನು ವಹಿಸಿದರು. ಜನವರಿ 12 ರಂದು ನಾಸಿಕ್‌ನ ಕಲಾರಾಮ ದೇವಸ್ಥಾನದ ಆವರಣವನ್ನು ಅವರೇ ಸ್ವಚ್ಛಗೊಳಿಸಿದರು. ದೇಶದ ಪ್ರಧಾನ ಸೇವಕನ ಈ ವಿನಮ್ರ ಕಾರ್ಯವು ದೇಶಾದ್ಯಂತ ದೇವಾಲಯಗಳ ಸ್ವಚ್ಛತೆಗಾಗಿ ಸಾಮೂಹಿಕ ಆಂದೋಲನವನ್ನು ಪ್ರಾರಂಭಿಸಿತು. 

ಮೋದಿಯಿಂದ ಉತ್ಸಾಹಿತರಾಗಿ ಲಕ್ಷಾಂತರ ಜನರು ಸ್ವಯಂಪ್ರೇರಿತರಾಗಿ ದೇವಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು. ಒಟ್ಟಾರೆ, ಈ ಆಂದೋಲನವು ದೇಶದ ಎಲ್ಲಾ ಸ್ತರದ ಜನರಿಂದ ಉತ್ಸಾಹದ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ, ಎಲ್ಲರೂ ಪ್ರಧಾನಿಯವರ ಕರೆಗೆ ಪ್ರತಿಕ್ರಿಯಿಸಿದ್ದರು. ಇನ್ನು, #SwachhTeerthCampaign X (twitter) ನಲ್ಲಿನ ಟಾಪ್ ಟ್ರೆಂಡ್‌ಗಳಲ್ಲಿ ಒಂದಾಗಿದೆ.

11 ದಿನ ಕೇವಲ ಎಳನೀರು ಸೇವಿಸಿ ಮೋದಿ ಉಪವಾಸ: ನೆಲದ ಮೇಲೆ ನಿದ್ದೆ ಸೇರಿ ಯಮ ನಿಯಮ ವ್ರತ ಪಾಲನೆ

Follow Us:
Download App:
  • android
  • ios