Asianet Suvarna News Asianet Suvarna News

11 ದಿನ ಕೇವಲ ಎಳನೀರು ಸೇವಿಸಿ ಮೋದಿ ಉಪವಾಸ: ನೆಲದ ಮೇಲೆ ನಿದ್ದೆ ಸೇರಿ ಯಮ ನಿಯಮ ವ್ರತ ಪಾಲನೆ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಯಜಮಾನತ್ವ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಶಾಸ್ತ್ರೋಕ್ತವಾದ 11 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ.  

Modi fasting for 11 days by drinking only tender coconut water sleeping on the floor and observing Yama Niyama Vrata akb
Author
First Published Jan 19, 2024, 6:53 AM IST

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಯಜಮಾನತ್ವ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಶಾಸ್ತ್ರೋಕ್ತವಾದ 11 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ.  ಪ್ರಾಣಪ್ರತಿಷ್ಠೆಗಾಗಿ ಮೋದಿ ‘ಯಮ ನಿಯಮ’ ವ್ರತಾಚರಣೆಯನ್ನು ಮಾಡುತ್ತಿದ್ದು, ಅದರ ಅಂಗವಾಗಿ ಜ.12ರಿಂದ ನೆಲದ ಮೇಲೆ ಮಲಗುತ್ತಾ, ಕೇವಲ ಎಳನೀರು ಸೇವಿಸಿ ಉಪವಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀರಾಮನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಹಾಗೂ ಪವಿತ್ರ ಸಂದರ್ಭದಲ್ಲಿ ಪಾಲ್ಗೊಳ್ಳಲು ನಾನು ಅದೃಷ್ಟ ಮಾಡಿದ್ದೇನೆ. ಇದಕ್ಕಾಗಿ ದೇವರೇ ನನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಭಾವಿಸಿದ್ದೇನೆ. ಹೀಗಾಗಿ ಶಾಸ್ತ್ರಬದ್ಧವಾಗಿ ವ್ರತಾಚರಣೆ ಮಾಡುತ್ತೇನೆ ಎಂದು ಜ.12ರಂದೇ ಮೋದಿ ಪ್ರಕಟಿಸಿದ್ದರು. ಆದರೆ ಅದು ಯಾವ ವ್ರತ ಎಂಬುದನ್ನು ಹೇಳಿರಲಿಲ್ಲ. ಪ್ರಧಾನಿ ಕಚೇರಿಯ ಮೂಲಗಳ ಪ್ರಕಾರ ಅವರು ‘ಯಮ ನಿಯಮ’ ವ್ರತದಲ್ಲಿ ತೊಡಗಿದ್ದಾರೆ. ಅದರ ಅಂಗವಾಗಿ ಕೇವಲ ಎಳನೀರು ಬಿಟ್ಟರೆ ಇನ್ನಾವುದೇ ಆಹಾರ ಸೇವಿಸುತ್ತಿಲ್ಲ. ನಿತ್ಯ ರಾತ್ರಿ ನೆಲದ ಮೇಲೆ ಮಲಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಮ ಮಂದಿರ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ, ಮೊಬೈಲ್ ಬಳಕೆ ನಿಷೇಧ!

ಯಮ ನಿಯಮ ವ್ರತದಲ್ಲಿ ಹಲವಾರು ಕ್ರಮಗಳನ್ನು ಹೇಳಲಾಗಿದೆ. ಯೋಗ, ಧ್ಯಾನ ಹಾಗೂ ಬೇರೆ ಬೇರೆ ಕ್ರಿಯೆಗಳಲ್ಲಿ ಶಿಸ್ತು ಪಾಲಿಸುವುದು ಪ್ರಮುಖವಾಗಿದೆ. ಮೋದಿ ಪ್ರತಿದಿನ ಸೂರ್ಯೋದಯಕ್ಕೂ ಮೊದಲೇ ಏಳುವುದು, ಧ್ಯಾನ ಮಾಡುವುದು, ಸಾತ್ವಿಕ ಆಹಾರ ಮಾತ್ರ ಸೇವಿಸುವುದು ಮುಂತಾದ ನಿಯಮಗಳನ್ನು ಸಾಮಾನ್ಯ ದಿನಗಳಲ್ಲೂ ಪಾಲಿಸುತ್ತಾರೆ. ಈಗ ಶ್ರೀರಾಮನ ಪ್ರಾಣ ಪ್ರತಿಷ್ಠೆಗಾಗಿ ಉಪವಾಸ ಹಾಗೂ ನೆಲದ ಮೇಲೆ ಮಲಗುವ ವ್ರತದಲ್ಲೂ ತೊಡಗಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ರಾಮಾಯಣಕ್ಕೆ ಸಂಬಂಧಿಸಿದ 6 ಅಂಚೆಚೀಟಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಮಾಯಣಕ್ಕೆ ಸಂಬಂಧಿಸಿದ ಚಿತ್ರವಿರುವ ಆರು ಅಂಚೆಚೀಟಿಗಳು, ವಿಶ್ವದ ವಿವಿಧ ದೇಶಗಳು ಹೊರತಂದಿರುವ ರಾಮನಿಗೆ ಸಂಬಂಧಪಟ್ಟ ಅಂಚೆಚೀಟಿಗಳ ಸಂಗ್ರಹವುಳ್ಳ ಪುಸ್ತಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ, ಅಂಚೆಚೀಟಿಗಳು ಕೇವಲ ಕಲಾಕೃತಿಗಳಲ್ಲ. ಅವು ನಮ್ಮ ಮಹಾಕಾವ್ಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಿರುಚಿತ್ರಗಳಾಗಿವೆ ಎಂದು ಬಣ್ಣಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಆರು ಅಂಚೆಚೀಟಿಗಳು ರಾಮಮಂದಿರ, ಗಣೇಶ, ಹನುಮಂತ, ಜಟಾಯು, ಕೇವತರಾಜ ಮತ್ತು ಮಾತೆ ಶಬರಿಯ ಚಿತ್ರಗಳನ್ನು ಒಳಗೊಂಡಿವೆ.

ಹಾಗೆಯೇ 48 ಪುಟಗಳಿರುವ ರಾಮನ ಕುರಿತ ಅಂಚೆಚೀಟಿಗಳ ಸಂಗ್ರಹ ಪುಸ್ತಕವನ್ನು ಪಂಚಭೂತಗಳನ್ನು ಆಸ್ವಾದಿಸುವ ರೀತಿ ಆಕರ್ಷಕ ಪುಟವಿನ್ಯಾಸ ಮಾಡಲಾಗಿದೆ. ಇದರಲ್ಲಿ ಅಮೆರಿಕ, ಸಿಂಗಾಪುರ, ಕಾಂಬೊಡಿಯಾ ಮುಂತಾದ 20 ದೇಶಗಳಲ್ಲಿ ಬಿಡುಗಡೆಯಾಗಿರುವ ರಾಮನ ಅಂಚೆಚೀಟಿಗಳ ಚಿತ್ರಗಳನ್ನು ಒಳಗೊಂಡಿವೆ.

ಒಂದು ದಿನ ಮುಂಚಿತವಾಗಿ ಆಯೋಧ್ಯೆಗೆ ಮೋದಿ, ಬೆಳ್ಳಂಬೆಳಗ್ಗೆ ಸರಯು ನದಿಯಲ್ಲಿ ಸ್ನಾನ!

Follow Us:
Download App:
  • android
  • ios