ಗೋಧ್ರಾ ಗಲಭೆ ಕುರಿತ ಸಿನಿಮಾ ವೀಕ್ಷಿಸಿದ ಮೋದಿ: ಸತ್ಯ ಹೊರಬಂದಿದೆ ಎಂದ ನಮೋ

ಮೋದಿ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ. ಅದೂ ಕೂಡ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ. ಸುಳ್ಳುಕತೆ ಹೆಚ್ಚು ದಿನ ಉಳಿಯುವುದಿಲ್ಲ. ಕ್ರಮೇಣವಾಗಿ ಸತ್ಯ ಹೊರಗೆ ಬರಲೇಬೇಕು. ಸುಳ್ಳು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ: ಪ್ರಧಾನಿ ನರೇಂದ್ರ ಮೋದಿ 

PM Narendra Modi watched film on The Sabarmati Report Movie grg

ನವದೆಹಲಿ(ಡಿ.03):  2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆಯ ಕುರಿತಾದ ನೈಜ ಅಂಶಗಳನ್ನು ಆಧರಿ ಸಿದ 'ಸಾಬರಮತಿ ರಿಪೋರ್ಟ್' ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ವೀಕ್ಷಿಸಿದರು. 
ಬಾಲಯೋಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್ ಶಾ, ಜೆ.ಪಿ. ನಡ್ಡಾ, ಸಂಸದೀಯ ಖಾತೆ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮೋದಿಗೆ ಸಾಥ್ ನೀಡಿದರು. 

ಚಿತ್ರ ವೀಕ್ಷಣೆಯ ಬಳಿಕ ಈ ಕುರಿತು ಮೋದಿ ಟ್ವಿಟ್ ಮಾಡಿ, 'ಎನ್‌ಡಿಎ ನಾಯಕರ ಜತೆ ಸಿನಿಮಾ ವೀಕ್ಷಿಸಿದೆ. ಚಿತ್ರದ ನಿರ್ಮಾಪಕರ ಪ್ರಯತ್ನಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ' ಎಂದಿದ್ದಾರೆ. ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್ ಮೈಸಿ, ರಿಧಿ ದೋಗ್ರಾ, ರಾಶಿ ಖನ್ನಾ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಜೆಪಿ ಆಡಳಿತದ ಹಲವು ರಾಜ್ಯಗಳು ಈಗಾಗಲೇ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿವೆ.

'ಸಾಬರಮತಿ ರಿಪೋರ್ಟ್' ವೀಕ್ಷಿಸಿದ ಯೋಗಿ, ಸಿನಿಮಾ ನೋಡಲೇಬೇಕು, ಸಿಎಂ ಆದಿತ್ಯನಾಥ ಹೇಳಿದ್ದೇನು?

ಸಾಬರಮತಿ ಸಿನಿಮಾದಲ್ಲೇನಿದೆ? 

2002 ಫೆ.27 ರಂದು ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಹಾಗೂ ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 239 ಕರಸೇವಕರು ಮೃತಪಟ್ಟಿದ್ದರು. ಬಳಿಕ ರಾಜ್ಯದಲ್ಲಿ ಸಂಭವಿಸಿದ ಕೋಮಗಲಭೆಯಲ್ಲಿ 1200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ನೈಜ ಘಟನೆಯನ್ನು ಕಥಾಹಂದರವ ನ್ನಾಗಿ ಇಟ್ಟುಕೊಂಡು ನಿರ್ಮಿಸಿದ ಈ ಚಿತ್ರ ನ.15ರಂದು ಬಿಡುಗಡೆ ಯಾಗಿತ್ತು. ಈ ಚಿತ್ರಕ್ಕೆ ನ.17ರಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಸತ್ಯ ಹೊರಬರಲಿದೆ ಎಂದು ಪ್ರಶಂಸಿಸಿದ್ದರು.

ಸತ್ಯ ಹೊರಬಂದಿದೆ: 

ಮೋದಿ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ. ಅದೂ ಕೂಡ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ. ಸುಳ್ಳುಕತೆ ಹೆಚ್ಚು ದಿನ ಉಳಿಯುವುದಿಲ್ಲ. ಕ್ರಮೇಣವಾಗಿ ಸತ್ಯ ಹೊರಗೆ ಬರಲೇಬೇಕು. ಸುಳ್ಳು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ಗೋಧ್ರಾ ಗಲಭೆ ಬಗ್ಗೆ ಸತ್ಯ ಈಗ ಹೊರಬರುತ್ತಿದೆ, ಸುಳ್ಳು ಹೆಚ್ಚು ದಿನ ಉಳಿಯುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ‘ಸತ್ಯ (ಗೋಧ್ರೋತ್ತರ ಗಲಭೆ) ಕೊನೆಗೂ ಹೊರಬರುತ್ತಿದೆ. ಅದೂ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ. ಸುಳ್ಳು ಕತೆ ಹೆಚ್ಚು ದಿನ ಉಳಿಯುವುದಿಲ್ಲ. ಕ್ರಮೇಣ ಸತ್ಯ ಹೊರಗೆ ಬರಲೇಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಯಾದ ‘ಸಾಬರಮತಿ ರಿಪೋರ್ಟ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಅಯೋಧ್ಯೆಯಲ್ಲಿ ಕರಸೇವೆ ಮಾಡಿ ಬಂದ 59 ಕರಸೇವಕರು ಇದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ 2002ರಲ್ಲಿ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಬಳಿಕ ಇದರ ಸೇಡಿಗೆ ಗುಜರಾತ್ ದಂಗೆ ನಡೆದಿತ್ತು. ಈ ಘಟನೆಗಳಿಗೆ ಕಾರಣವಾದ ವಿಷಯಗಳ ಬಗ್ಗೆ ವಿಕ್ರಾಂತ್‌ ಮಸ್ಸೆ ನಟನೆಯ ಸಾಬರಮತಿ ರಿಪೋರ್ಟ್‌ ಚಿತ್ರ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ

ಗೋಧ್ರಾ ಪ್ರಕರಣದಲ್ಲಿ ನೀವು ರಾಜೀನಾಮೆ ಕೊಟ್ರಾ? ಪ್ರಧಾನಿ ಮೋದಿಗೆ ಸಿಎಂ ತಿರುಗೇಟು

ಅದಕ್ಕೆ ಸಂಬಂಧಿಸಿದ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ತಾವು ಆರೋಪಿಯಾಗಿ ಕ್ಲೀನ್‌ಚಿಟ್‌ ಪಡೆದ ಗೋಧ್ರಾ ಹತ್ಯಾಕಾಂಡದ ವಿಷಯದಲ್ಲಿ ಪ್ರಚಲಿತದಲ್ಲಿರುವ ಕತೆಗಳು ಸುಳ್ಳು ಎಂಬುದನ್ನು ಈ ಸಿನಿಮಾ ಹೊರಗೆಡವಿದೆ ಎಂದು ಶ್ಲಾಘಿಸಿದ್ದರು.

2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದ ವೇಳೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ನಂತರ ಗುಜರಾತ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ದಾಳಿಗಳು ನಡೆದಿದ್ದವು. ಅವುಗಳಿಗೆ ಮೋದಿ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಲಾಗಿತ್ತು.

Latest Videos
Follow Us:
Download App:
  • android
  • ios