Asianet Suvarna News Asianet Suvarna News

BJP Marketing ಮಾಡಲು ಕೇದಾರನಾಥಕ್ಕೆ ಮೋದಿ ಭೇಟಿ : ಹರೀಶ್ ರಾವತ್!

*ಆದಿಗುರು ಶಂಕರರ ಪ್ರತಿಮೆ ಅನಾವರಣಗೊಳಿದ್ದ ರಾಷ್ಟ್ರನಾಯಕ
*ಮೋದಿ ಬಂದಿದ್ದು ಮಾರ್ಕೆಂಟಿಗ್‌ ಮಾಡಲು ಎಂದ ಕಾಂಗ್ರೇಸ್‌ ನಾಯಕ
*80 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ್ದ ಪ್ರಧಾನಿ

PM Narendra Modi visited Kedarnath for BJP Marketing said Congress leader Harish Rawat
Author
Bengaluru, First Published Nov 6, 2021, 11:53 AM IST

ಹರಿದ್ವಾರ (ನ.6): ಉತ್ತರಾಖಂಡ ವಿಧಾನಸಭೆ ಚುನಾವಣೆಗೂ (Uttrarakhand Assembly Elections) ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಬಿಜೆಪಿಯ ಮಾರ್ಕೆಟಿಂಗ್ (BJP's marketing) ಮತ್ತು ರಾಜಕೀಯ ಲಾಭಕ್ಕಾಗಿ ಎಂದು ಕಾಂಗ್ರೆಸ್ ಮುಖಂಡ ಹರೀಶ್ ರಾವತ್ (Harish Rawat) ಶುಕ್ರವಾರ (ನ.5) ಹೇಳಿದ್ದಾರೆ.  ಶುಕ್ರವಾರ ಉತ್ತರಾಖಂಡದ ಕೇದಾರನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಆದಿ ಶಂಕರಾಚಾರ್ಯರ  35 ಟನ್ ತೂಕದ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಜತೆಗೆ 130 ಕೋಟಿ ರೂ. ಮೌಲ್ಯದ ಹಲವು ಪುನರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು ಹಾಗೂ ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ್ದರು.

ಆದಿಗುರು ಶಂಕರರ ಪುತ್ಥಳಿ ಅನಾವರಣ : ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ!

ಹರಿದ್ವಾರದ (Haridwar) ತಿಲಭಾಂಡೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಹರೀಶ್ ರಾವತ್, 'ಪ್ರಧಾನಿ ರಾಜಕೀಯ ಭಾಷಣ ಮಾಡಲು ಇಲ್ಲಿಗೆ ಬಂದಿದ್ದಾರೆ, ಅವರು ತಮ್ಮ ಪಕ್ಷದ ಮಾರ್ಕೆಟಿಂಗ್‌ಗಾಗಿ ಬಂದಿದ್ದಾರೆ, ನಮ್ಮ ಶಿವ ದೇವಾಲಯಗಳಲ್ಲಿ ಜ್ಯೋತಿರ್ಲಿಂಗವನ್ನು (Jyotirlinga) ನಾವು ನೋಡುತ್ತೇವೆ, ನಮ್ಮ ದೇವಾಲಯಗಳಲ್ಲಿ ಕೇದಾರ ದೇವರನ್ನು ಕಾಣುತ್ತೇವೆ. ಶಿವ ಮಂದಿರಗಳಲ್ಲಿ ನೀರಿನ ಅಭಿಷೇಕ ಮಾಡಲಿದ್ದೇವೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ (congress) ಕಾರ್ಯಕರ್ತರು ಶಿವ ದೇವಾಲಯಗಳಿಗೆ ನೀರು ಹಾಕುತ್ತಿದ್ದಾರೆ, 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ನೀರು ಹರಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

ದೇಶದ ಆರ್ಥಿಕ ಪರಿಸ್ಥಿತಿ (Economy) ಬಗ್ಗೆ ಮಾತನಾಡುತ್ತ "ಹಣದುಬ್ಬರವು (inflation) ಸ್ವಲ್ಪ ಹೆಚ್ಚಾದರೆ ಜನರಿಗೆ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಾವು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಪ್ರಾರ್ಥಿಸುತ್ತೇವೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು (Democracy) ರಕ್ಷಿಸಬೇಕು" ಎಂದು ಕಾಂಗ್ರೆಸ್ ನಾಯಕ ಹರೀಶ್ ರಾವತ್ ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 57, ಕಾಂಗ್ರೆಸ್ 11 ಮತ್ತು ಉಳಿದ ಸ್ಥಾನಗಳನ್ನು ಇತರರು ಗೆದ್ದಿದ್ದರು.

ಕೇದಾರನಾಥಕ್ಕೆ ಮೋದಿ ಭೇಟಿ!

ಶುಕ್ರವಾರ ಕೇದಾರನಾಥ (Kedarnath)ಭೇಟಿ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ 'ವರ್ಷಗಳ ಹಿಂದೆ ಈ ಸ್ಥಳವು [ಕೇದಾರನಾಥ] ಕಂಡ ವಿನಾಶವು ಊಹಿಸಲೂ ಅಸಾಧ್ಯವಾಗಿತ್ತು. ಈ ಸ್ಥಳಕ್ಕೆ ಭೇಟಿ ನೀಡಿದ ಜನರು, ನಮ್ಮ ಕೇದಾರ ಧಾಮವನ್ನು ಮತ್ತೆ ಪುನಃಸ್ಥಾಪಿಸಬಹುದೇ ಎಂದು ಸಂದೇಹ ಪಡುತ್ತಿದ್ದರು. ಆದರೆ ನನ್ನೊಳಗಿನ ಧ್ವನಿಯು ಅದನ್ನು  ಪುನರಾಭಿವೃದ್ಧಿ ಮಾಡಿ ವೈಭವದೊಂದಿಗೆ ಮೆರೆಯುವಂತೆ ಮಾಡಬಹುದು ಎಂದು ಹೇಳುತಿತ್ತು' ಎಂದು  ಹೇಳಿದ್ದರು. ಕೇದಾರಪುರಿ ಪುನರ್ನಿರ್ಮಾಣವನ್ನು ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಎಂದೇ ಪರಿಗಣಿಸಲಾಗಿದೆ. ಹಾಗಾಗಿ ಅದರ ಪ್ರಗತಿಯನ್ನು ನಿಯಮಿತವಾಗಿ ಮೋದಿ ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದರು.

ಪಿಎಂ ಆದ ಬಳಿಕ 5ನೇ ಬಾರಿ ಬಾಬಾ Kedarnath ಸನ್ನಿಧಾನ ತಲುಪಿದ ಮೋದಿ, ಹೀಗಿದೆ ವಿಶೇಷತೆ!

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ ಪ್ರದರ್ಶಿಸಿದ ಶಿಸ್ತನ್ನು ಶ್ಲಾಘಿಸಿ 'ಭೌಗೋಳಿಕ ತೊಂದರೆಗಳ ಹೊರತಾಗಿಯೂ, ಇಂದು ಉತ್ತರಾಖಂಡ ಮತ್ತು ಅದರ ಜನರು 100% ರಷ್ಟು ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಿದ್ದಾರೆ. ಇದು ಉತ್ತರಾಖಂಡದ ಶಕ್ತಿಯಾಗಿದೆ" ಎಂದು ಅವರು ಹೇಳಿದರು.

ಕೇದಾರನಾಥ ಮತ್ತು ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಬಗ್ಗೆ ಮಾತನಾಡಿದ್ದ ಮೋದಿ, " ಹೇಮಕುಂಡ್ ಸಾಹಿಬ್‌ಗೆ ಭಕ್ತರಿಗೆ ಸುಲಭವಾಗಿ ಭೇಟಿ ನೀಡಲು ರೋಪ್‌ವೇ (Rope way) ನಿರ್ಮಿಸುವ ಯೋಜನೆಯು ಪ್ರಗತಿಯಲ್ಲಿದೆ. ಚಾರ್ ಧಾಮ್ ರಸ್ತೆ ಯೋಜನೆ ಅತ್ಯಂತ ವೇಗದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ, ಭವಿಷ್ಯದಲ್ಲಿ ಭಕ್ತರು ಕೇಬಲ್ ಕಾರ್ (Cable Car) ಮೂಲಕ ಕೇದಾರನಾಥವನ್ನು ತಲುಪಲು ಸಾಧ್ಯವಾಗುತ್ತದೆ, ಈ ಕೆಲಸ ಕೂಡ ಪ್ರಾರಂಭವಾಗಿದೆ.  " ಎಂದು ತಿಳಿಸಿದ್ದರು. 

Follow Us:
Download App:
  • android
  • ios