Asianet Suvarna News Asianet Suvarna News

'ಜನತಾ ಜನಾರ್ಧನನಿಗೆ ನನ್ನ ನಮನ..' ತ್ರಿವಿಕ್ರಮ ಸಾಧಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಟ್ವೀಟ್‌!

ದೇಶದ ಮೂರು ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಪಕ್ಷದ ದೊಡ್ಡ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, ಜನತಾ ಜನಾರ್ಧನನಿಗೆ ನನ್ನ ನಮನ ಎಂದು ಟ್ವೀಟ್‌ ಮಾಡಿದ್ದಾರೆ.
 

PM Narendra Modi Tweet After Assembly Election Results 2023  Madhya Pradesh Chhattisgarh Rajasthan BJP Win san
Author
First Published Dec 3, 2023, 4:50 PM IST

ನವದೆಹಲಿ (ಡಿ.3): ಭಾರೀ ಬಹುಮತದೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ 'ತ್ರಿವಿಕ್ರಮ' ವಿಜಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜನತಾ ಜನಾರ್ಧನನನಿಗೆ ನನ್ನ ನಮನ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಈ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಮ್ಮದು ಉತ್ತಮ ಅಧಿಕಾರಿ ಹಾಗೂ ಅಭಿವೃದ್ಧಿ ಪ್ರೇರಿತ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಜೆ 4 ಗಂಟೆಯ ವೇಳೆ ಬಿಜೆಪಿ ರಾಜಸ್ಥಾನದಲ್ಲಿ 116 ಸೀಟ್‌ಗಳಲ್ಲಿ ಮುನ್ನಡೆ ಕಂಡಿದ್ದರೆ, ಮಧ್ಯಪ್ರದೇಶದಲ್ಲಿ 165 ಸೀಟ್‌ಗಳಲ್ಲಿ ಮುನ್ನಡೆ ಕಂಡಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿ 54 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದಾರೆ. ಇನ್ನು ತೆಲಂಗಾಣದಲ್ಲಿ 69 ಕ್ಷೇತ್ರಗಳಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಗೆಲುವಿನ ಸೂಚನೆ ಸಿಕ್ಕ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಜನತಾ ಜನಾರ್ಧನನಿಗೆ ನನ್ನ ನಮನ.. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಚುನಾವಣಾ ಫಲಿತಾಂಶಗಳು ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದಲ್ಲಿ ಮಾತ್ರ ನಂಬಿಕೆ ಹೊಂದಿದ್ದಾರೆಂದು ತೋರಿಸುತ್ತಿದೆ, ಅವರ ನಂಬಿಕೆ ಬಿಜೆಪಿ ಪಕ್ಷದ ಮೇಲೆ ಮಾತ್ರವೇ ಇದೆ.  ಬಿಜೆಪಿಯ ಮೇಲೆ ತಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವನ್ನು ಧಾರೆಯೆರೆದಿದ್ದಕ್ಕಾಗಿ ಈ ಎಲ್ಲಾ ರಾಜ್ಯಗಳ ಕುಟುಂಬ ಸದಸ್ಯರಿಗೆ, ವಿಶೇಷವಾಗಿ ತಾಯಿ, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ನಮ್ಮ ಯುವ ಮತದಾರರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಮೋದಿ ಬರೆದುಕೊಂಡಿದ್ದಾರೆ.

ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್‌ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್‌ ಹಾಕಿದ ಹಸ್ತ!

ನಿಮ್ಮ ಶ್ರೇಯೋಭಿವೃದ್ಧಿಗಾಗಿ ನಾವು ಅವಿರತವಾಗಿ ಶ್ರಮಿಸುತ್ತೇವೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ ಶ್ರಮಿಸಿದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದಗಳು! ನೀವೆಲ್ಲರೂ ಅದ್ಭುತ ಉದಾಹರಣೆಯಾಗಿದ್ದೀರಿ. ನೀವು ಬಿಜೆಪಿಯ ಅಭಿವೃದ್ಧಿ ಮತ್ತು ಕಳಪೆ ಕಲ್ಯಾಣ ನೀತಿಗಳನ್ನು ಜನರಲ್ಲಿ ಕೊಂಡೊಯ್ದ ರೀತಿಯನ್ನು ಪ್ರಶಂಸಿಸಲು ನನ್ನಲ್ಲಿ ಪದಗಳೇ ಇಲ್ಲ. ಅಭಿವೃದ್ಧಿ ಹೊಂದಿದ ಭಾರತದ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನಾವು ನಿಂತಿಲ್ಲ ಅಥವಾ ದಣಿದಿಲ್ಲ. ನಾವು ಭಾರತವನ್ನು ವಿಜಯಶಾಲಿಯಾಗಿಸಬೇಕು. ಇಂದು ಒಟ್ಟಾಗಿ ನಾವು ಈ ದಿಕ್ಕಿನಲ್ಲಿ ಬಲವಾದ ಹೆಜ್ಜೆ ಇಟ್ಟಿದ್ದೇವೆ ಎಂದು ಮೋದಿ ಬರೆದಿದ್ದಾರೆ.

ರೈತರಾಯ್ತ, ಮೃತ ಸೈನಿಕನ ಕುಟುಂಬವಾಯ್ತು ಈಗ ಮಾಧ್ಯಮಗಳಿಗೂ ಹಣ ಬಾಕಿ ಇರಿಸಿಕೊಂಡ ರಾಜ್ಯ ಸರ್ಕಾರ!

 

Follow Us:
Download App:
  • android
  • ios