ಲುಂಬಿನಿಯಲ್ಲಿ ಬುದ್ಧನ ಜಯಂತಿ ಕಾರ್ಯಕ್ರಮ ಬುದ್ಧನ ತಾಯಿ ಮಾಯಾವತಿ ಅವರ ದೇವಾಲಯಕ್ಕೆ ಭೇಟಿ ದೀಪ ಬೆಳಗುವ ಸಮಾರಂಭದಲ್ಲಿ ಮೋದಿ ಭಾಗಿ
ನವದೆಹಲಿ(ಮೇ.04): ಪ್ರಧಾನಿ ನರೇಂದ್ರ ಮೋದಿ ಮೇ. 16 ರಂದು ಬುದ್ಧ ಪೌರ್ಣಿಮೆಯ ಅಂಗವಾಗಿ ನೇಪಾಳದ ಲುಂಬಿನಿಗೆ ಭೇಟಿ ನೀಡಲಿದ್ದಾರೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ. ನೇಪಾಳದ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಕೂಡಾ ಈ ವೇಳೆ ಲುಂಬಿನಿಯಲ್ಲಿ ಬುದ್ಧನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ದೇವುಬಾ ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡಿದ ಒಂದು ತಿಂಗಳ ಅಂತರದಲ್ಲೇ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ನೇಪಾಳದ ಭೇಟಿ ವೇಳೆಯಲ್ಲಿ ಉಭಯ ದೇಶದ ಪ್ರಧಾನಿಗಳು ಯಾವುದೇ ಔಪಚಾರಿಕ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೇವಲ ಬುದ್ಧನ ತಾಯಿ ಮಾಯಾವತಿ ಅವರ ದೇವಾಲಯಕ್ಕೆ ಭೇಟಿ ನೀಡಿ ದೀಪ ಬೆಳಗುವ ಸಮಾರಂಭದಲ್ಲಿ ದೇವುಬಾ ಅವರೊಂದಿಗೆ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಪಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ, ಜೊತೆಗಿದ್ದ ಯುವತಿ ಯಾರು? ಸದ್ದು ಮಾಡುತ್ತಿದೆ ಚೀನಾ ಸುಂದರಿಯ ಹೆಸರು!
21 ವರ್ಷದ ಬಳಿಕ ಭಾರತ, ನೇಪಾಳ ನಡುವೆ ಇಂದಿನಿಂದ ಪ್ರಯಾಣಿಕ ರೈಲು ಸಂಚಾರ
ಭಾರತ ಮತ್ತು ನೇಪಾಳ ನಡುವೆ ಶನಿವಾರದಿಂದ ಪ್ರಯಾಣಿಕ ರೈಲು ಸಂಚಾರ ಪುನಾರಂಭಗೊಳ್ಳಲಿದೆ. ಭಾರತದ ಜಯನಗರ ಮತ್ತು ನೇಪಾಳದ ಕುರ್ತಾನಡುವಿನ 34.5 ಕಿ.ಮೀ ಉದ್ದದ ಪ್ರಯಾಣಿಕರ ರೈಲು ಸೇವೆಗೆ ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹುದ್ದೂರ್ ದೇವುಬಾ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಜಯನಗರ ಮತ್ತು ನೇಪಾಳದ ಬಿಜಾಲ್‌ಪುರ ನಡುವೆ 1937ರಲ್ಲೇ ರೈಲು ಸಂಚಾರ ಆರಂಭವಾಗಿತ್ತು. ಆದರೆ 2001ರಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ ಜಯನಗರ- ಕುರ್ತಾ ನಡುವೆ ಸಂಚಾರ ಪುನಾರಂಭಿಸಲಾಗಿದೆ.
ಉಕ್ರೇನಿಂದ ನೇಪಾಳಿಯರ ರಕ್ಷಿಸಿದ್ದಕ್ಕೆ ಮೋದಿಗೆ ದೇವುಬಾ ಧನ್ಯವಾದ
ಯುದ್ಧಪೀಡಿತ ಉಕ್ರೇನಿನಲ್ಲಿ ಸಿಲುಕಿದ ನೇಪಾಳಿ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆ ತಂದಿದ್ದಕ್ಕೆ ನೇಪಾಳದ ಪ್ರಧಾನಿ ಶೇರ್ ಬಹಾದುರ್ ದೇವುಬಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಧನ್ಯವಾದ ಸಲ್ಲಿಸಿದ್ದಾರೆ. ‘ಭಾರತ ಸರ್ಕಾರದ ಸಹಾಯದಿಂದ ಉಕ್ರೇನಿನಲ್ಲಿ ಸಿಲುಕಿದ 4 ನೇಪಾಳಿ ನಾಗರಿಕರು ತವರಿಗೆ ಮರಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದಗಳು’ ಎಂದು ದೇವುಬಾ ಟ್ವೀಟ್ ಮಾಡಿದ್ದಾರೆ. ಕಳೆದ ವಾರ 2 ನೇಪಾಳಿ ನಾಗರಿಕರನ್ನು ಕರೆತರಲಾಗಿತ್ತು.
ಭಾರತಕ್ಕೆ ಆಗಮಿಸಿದ ನೇಪಾಳ ಪ್ರಧಾನಿ: ಇಂದು ಭಾರತ ನೇಪಾಳ ನಡುವೆ ಪ್ರಯಾಣಿಕ ರೈಲಿಗೆ ಚಾಲನೆ
ನೇಪಾಳದಲ್ಲೂ ಭಾರತದ ಯುಪಿಐ ವ್ಯವಸ್ಥೆ ಬಳಕೆ
ಭಾರತದಲ್ಲಿ ಡಿಜಿಟಲ್ ಪಾವತಿಯ ವ್ಯವಸ್ಥೆಯಲ್ಲಿನ ಕ್ರಾಂತಿಗೆ ಕಾರಣವಾದ ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್) ವ್ಯವಸ್ಥೆಯನ್ನು ಇದೀಗ ನೆರೆಯ ನೇಪಾಳ ದೇಶ ಕೂಡಾ ಅಳವಡಿಸಿಕೊಳ್ಳಲು ಮುಂದಾಗಿದೆ. ಭಾರತದಲ್ಲಿ ಯುಪಿಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ದ ಅಂತಾರಾಷ್ಟ್ರೀಯ ಅಂಗವಾದ ಎನ್‌ಐಪಿಎಲ್, ನೇಪಾಳದ ಗೇಟ್‌ವೇ ಪೇಮೆಂಟ್ಸ್ ಸವೀರ್‍ಸ್ ಮತ್ತು ಮನಂ ಇನ್ಪೋಟೆಕ್ ಸಹಯೋಗದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಒಪ್ಪಂದ ಮಾಡಿಕೊಂಡಿದೆ.
ಹೀಗಾಗಿ ವ್ಯವಸ್ಥೆ ಜಾರಿಯಾದ ಬಳಿಕ ನೇಪಾಳದಲ್ಲೂ ಇಬ್ಬರು ವ್ಯಕ್ತಿಗಳ ನಡುವೆ ತತ್‌ಕ್ಷಣದ ಹಣ ಪಾವತಿ ಸಾಧ್ಯವಾಗಲಿದೆ. ಅಷ್ಟುಮಾತ್ರವಲ್ಲ ಭಾರತ ಮತ್ತು ನೇಪಾಳಿ ನಾಗರಿಕರೂ ಪರಸ್ಪರ ಈ ವ್ಯವಸ್ಥೆ ಬಳಸಿಕೊಂಡು ಹಣ ಪಾವತಿ ಮಾಡಬಹುದಾಗಿದೆ.
