Asianet Suvarna News Asianet Suvarna News

Kedarnathಗೆ ಪ್ರಧಾನಿ ನರೇಂದ್ರ ಮೋದಿ, ಆದಿ ಶಂಕರಾಚಾರ್ಯರ ಸಮಾಧಿ ಲೋಕಾರ್ಪಣೆ

* ಮಹಾಪ್ರವಾಹದಲ್ಲಿ ಹಾನಿಯಾಗಿದ್ದ ಕೇದರನಾಥ
* ನವೆಂಬರ್ 5  ರಂದು ಭೇಟಿ ನೀಡಲಿರುವ ಪ್ರಧಾನಿ
* ಬಿಜೆಪಿ ನಾಯಕರಿಂದ ಪುಣ್ಯಕ್ಷೇತ್ರ ದರ್ಶನ ಅಭಿಯಾನ
* ಆದಿ ಶಂಕರಾಚಾರ್ಯರ ಸಮಾಧಿ ಸ್ಥಳ 

PM Narendra Modi to visit Kedarnath on 5th November and inaugurate Shri Adi Shankaracharya Samadhi mah
Author
Bengaluru, First Published Nov 3, 2021, 6:15 PM IST
  • Facebook
  • Twitter
  • Whatsapp

ನವದೆಹಲಿ( ನ. 03)  ಪ್ರಧಾನಿ ನರೇಂದ್ರ ಮೋದಿ (Narendra Modi) ನವೆಂಬರ್  5  ರಂದು ಪುಣ್ಯಕ್ಷೇತ್ರ ಕೇದರನಾಥಕ್ಕೆ(Kedarnath) ಭೇಟಿ ನೀಡಲಿದ್ದು ಆದಿ ಶಂಕರಾಚಾರ್ಯರ (Adi Shankaracharya) ಸಮಾಧಿ ಸ್ಥಳವನ್ನು  ಭಕ್ತರ ದರ್ಶನಕ್ಕೆ ಅನಾವರಣ ಮಾಡಲಿದ್ದಾರೆ.  2013  ರ ಮಹಾಪ್ರವಾಹಕ್ಕೆ(Flood)  ಸಿಲುಕಿದ್ದ ಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡಲಾಗಿದೆ.

ಇದೇ ದಿನ ಬಿಜೆಪಿ ನಾಯಕರು ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದು ದೇಶದ ಪ್ರಮುಖ ನೂರು ಪುಣ್ಯ ಕ್ಷೇತ್ರಗಳಿಗೆ ತೆರಳುವುದಾಗಿ ತಿಳಿಸಿದ್ದಾರೆ. ಶೃಂಗೇರಿಗೆ ಬನ್ನಿ ಎಂದು ಬಿಜೆಪಿ ಆಹ್ವಾನ ನೀಡಿದೆ.

ಇದೇ ಸಂದರ್ಭದಲ್ಲಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.   ಇದರ ಜತೆಗೆ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮುಕ್ತಾಯವಾಗಿದ್ದು ಜನರ ಸೇವೆಗೆ ಮೋದಿ ನೀಡಲಿದ್ದಾರೆ.  ಸರಸ್ವತಿ ತಡೆಗೋಡೆ ಆಸ್ಥಾಪತ್ ಮತ್ತು ಘಟ್ಟಗಳು, ಮಂದಾಕಿನಿ ತಡೆಗೋಡೆ ಆಸ್ಥಾಪತ್ ಗಳನ್ನು ಲೋಕಾರ್ಪಣೆ ಮಾಡಲುದ್ದಾರೆ.

ಕೇದರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಪ್ರಧಾನಿ

ಸಂಗಮ ಘಾಟ್, ಪ್ರಥಮ ಚಿಕಿತ್ಸಾ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಸೇರಿದಂತೆ 180 ಕೋಟಿ ರೂ.ಗಳ ಬಹುವಿಧದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ, 2014ರಲ್ಲಿ ಅದರ ಪುನರ್‌ನಿರ್ಮಾಣವನ್ನು ಆರಂಭಿಸಲಾಯಿತು. ಕೇದಾರನಾಥದಲ್ಲಿ ಸಂಪೂರ್ಣ ಪುನರ್ನಿರ್ಮಾಣ ಕಾರ್ಯವನ್ನು ಪ್ರಧಾನಮಂತ್ರಿಯವರ ವೈಯಕ್ತಿಕ ಮಾರ್ಗದರ್ಶನದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪ್ರಧಾನಿಯವರೇ ಮೇಲ್ವಿಚಾರಣೆ ಮಾಡಿದ್ದರು.

ಶೃಂಗೇರಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಧ್ವಜ!

ಚಾರ್ ಧಾಮಗಳು (ಬದ್ರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ) ಸೇರಿದಂತೆ ದೇಶದಾದ್ಯಂತ ಜ್ಯೋತಿರ್ಲಿಂಗಗಳು ಮತ್ತು ಜ್ಯೋತಿಷಪೀಠಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಸಾಂಪ್ರದಾಯಿಕ ಬೆಳಿಗ್ಗೆ ಆರತಿಯನ್ನು ಒಳಗೊಂಡಿರುತ್ತದೆ ಮತ್ತು ನಂತರ ವೇದ ಪಠಣವನ್ನು ಒಳಗೊಂಡಿರುತ್ತದೆ. ಸಂಸ್ಕೃತಿ ಸಚಿವಾಲಯವು ಜ್ಯೋತಿರ್ಲಿಂಗಗಳು / ಜ್ಯೋತಿಷಪೀಠದ ಆವರಣದಲ್ಲಿ ಅಥವಾ ಹತ್ತಿರದ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಐದನೇ ಸಾರಿ ಕೇದರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. 

 

 

Follow Us:
Download App:
  • android
  • ios