ನವದೆಹಲಿ(ಜು.25): ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಆಗಸ್ಟ್ 3 ರಿಂದ ಆಗಸ್ಟ್ 5ರ ವರೆಗೆ ನಿರ್ಮಾಣ ಕಾರ್ಯಾರಂಭಕ್ಕೆ ಪೂಜೆ ನಡೆಯಲಿದೆ. 3 ದಿನದ ವಿಶೇಷ ಕಾರ್ಯಕ್ರಮದಲ್ಲಿ ಅಂತಿಮ ದಿನ ಭೂಮಿ ಪೂಜೆ ನಡೆಯಲಿದೆ. ರಾಮ ಮಂದಿರದ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ.

ರಾಮ ಮಂದಿರ ಶಿಲಾನ್ಯಾಸಕ್ಕೆ ಕಾವೇರಿ ತೀರ್ಥ, ಮಣ್ಣು ರವಾನೆ ..!

ಆಗಸ್ಟ್ 5ರಂದು ಮಧ್ಯಹ್ನ 12.30ರ ವೇಳೆಗೆ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲಿ ವಿಶ್ವ ಹಿಂದೂ ಪರಿಷತ್ ದೇಶದ 11 ಪವಿತ್ರ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣನ್ನು ರಾಮ ಮಂದಿರ ಭೂಮಿ ಪೂಜೆಯಲ್ಲಿ ಬಳಸಲಿದ್ದಾರೆ. ಇದರ ನಡುವೆ ರಾಮ ಮಂದಿರ ಭೂಮಿ ಪೂಜೆ ದಿನಾಂಕ ಮತ್ತು ಸಮಯದ ಕುರಿತು ಪ್ರಶ್ನೆಗಳು ಎದ್ದಿದೆ. ಆಗಸ್ಟ್ 5 ಭೂಮಿ ಪೂಜೆಗೆ ಯೋಗ್ಯವಾದ ದಿನಾಂಕವಲ್ಲ ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸಾಮೀಜಿ ಹೇಳಿದ್ದರು.

40 ಕೆಜಿ ಬೆಳ್ಳಿ ಇಟ್ಟಿಗೆ, 300 ಕೋಟಿ ಯೋಜನೆ, 10 ಕೋಟಿ ಜನರಿಂದ ದೇಣಿಗೆ; ನಿರ್ಮಾಣವಾಗಲಿದೆ ರಾಮಮಂದಿರ

ವಾರಣಾಸಿ ಜ್ಯೋತಿಷಿಗಳು, ಸ್ವಾಮೀಜಿಗಳು ಸೇರಿ ಈ ದಿನಾಂಕ ನೀಡಿದ್ದಾರೆ. ಹಿಂದೂ ಪಂಚಾಂಗ ಆಧರಿಸಿ ದಿನಾಂಕ ನಿಗದಿ ಮಾಡಲಾಗಿದೆ. ಈ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವಾಮೀಜಿಗಳಾದ ಗೋವಿಂದದೇವ್ ಗಿರಿಜಿ ಮಹಾರಾಜ್ ಎಲ್ಲರನ್ನೂ ಸಂಪರ್ಕಿಸಿ ದಿನಾಂಕ ನಿಗದಿ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಆಲೋಕ್ ಕುಮಾರ್ ಹೇಳಿದ್ದಾರೆ.

ರಾಮ ಮಂದಿರ ಟ್ರಸ್ ಭೂಮಿ ಪೂಜೆಗೆ ಹಲವು ಗಣ್ಯರನ್ನು ಆಹ್ವಾನಿಸಿದೆ. ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ರಾಷ್ಟ್ರೀಯ ಸ್ವಯಂ ಸೇವ ಸಂಘದ ಮೊಹನ್ ಭಾಗ್ವತ್, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.

ಕೊರೋನಾ ವೈರಸ್ ಕಾರಣ ಭೂಮಿ ಪೂಜೆ ಕಾರ್ಯವನ್ನು ಪ್ರಸಾರ ಮಾಡಲಾಗುವುದು. ಈ ಮೂಲಕ ಜನಸಂದಣಿಯನ್ನು ಹೆಚ್ಚಾಗದಂತೆ ನೋಡಿಕೊಳ್ಳಲು ಟ್ರಸ್ ಸಕಲ ತಯಾರಿ ಮಾಡಿಕೊಂಡಿದೆ.