ರಾಮ ಮಂದಿರ ಶಿಲಾನ್ಯಾಸಕ್ಕೆ ಕಾವೇರಿ ತೀರ್ಥ, ಮಣ್ಣು ರವಾನೆ ..!

ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ಶ್ರೀ ರಾಮ ಮಂದಿರದ ಭೂಮಿ ಪೂಜಾ ಸಮಾರಂಭ ಹಾಗೂ ಶಿಲಾನ್ಯಾಸದ ಸಲುವಾಗಿ ದೇಶ ವ್ಯಾಪಿ ಪುಣ್ಯ ಕ್ಷೇತ್ರಗಳ ತೀರ್ಥ ಹಾಗೂ ಪವಿತ್ರ ಮಣ್ಣನ್ನು (ಮೃತ್ತಿಕೆ) ಅಯೋಧ್ಯೆಗೆ ಕಳುಹಿಸಿ ಕೊಡಲಾಗುತ್ತಿದೆ

Kaveri theertha and soil sent to ayodhya from madikeri

ಮಡಿಕೇರಿ(ಜು.24): ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ಶ್ರೀ ರಾಮ ಮಂದಿರದ ಭೂಮಿ ಪೂಜಾ ಸಮಾರಂಭ ಹಾಗೂ ಶಿಲಾನ್ಯಾಸದ ಸಲುವಾಗಿ ದೇಶ ವ್ಯಾಪಿ ಪುಣ್ಯ ಕ್ಷೇತ್ರಗಳ ತೀರ್ಥ ಹಾಗೂ ಪವಿತ್ರ ಮಣ್ಣನ್ನು (ಮೃತ್ತಿಕೆ) ಅಯೋಧ್ಯೆಗೆ ಕಳುಹಿಸಿ ಕೊಡಲಾಗುತ್ತಿದೆ.

ಈ ಸಲುವಾಗಿ ಗುರುವಾರ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುಣ್ಯ ಕ್ಷೇತ್ರದ ಮಣ್ಣು ಹಾಗೂ ಕಾವೇರಿ ತೀರ್ಥವನ್ನು ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂಚೆ ಮೂಲಕ ಕಳುಹಿಸಿ ಕೊಡಲಾಯಿತು.

ರಾಮಮಂದಿರ ಭೂಮಿಪೂಜೆ ಮುಹೂರ್ತವೇ ಸರಿಯಿಲ್ಲ..!

ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ವ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ವಿಳಾಸಕ್ಕೆ ಇರ್ಪು ರಾಮೇಶ್ವರ ಕ್ಷೇತ್ರದ ಪವಿತ್ರ ತೀರ್ಥ ಹಾಗೂ ಮೃತ್ತಿಕೆಯನ್ನು ಪೂಜಿಸಿ ಕಳುಹಿಸಿ ಕೊಡಲಾಯಿತು.

ತಲಕಾವೇರಿಯ ಹಿರಿಯ ಅರ್ಚಕರು ಹಾಗೂ ಅಯೋಧ್ಯೆಯ ಕರಸೇವಕರಾಗಿದ್ದ ಟಿ.ಎಸ್‌.ನಾರಾಯಣಾಚಾರ್ಯ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಚಕ್ಕೇರ ಮನು ಕಾವೇರಪ್ಪ, ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾ ಮಠ ಮಂದಿರ ಪ್ರಮುಖ ಚಿ.ನಾ.ಸೋಮೇಶ್‌ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.

ಮೋದಿಯಿಂದಲೇ ಆ.5ಕ್ಕೆ ಮಂದಿರಕ್ಕೆ ಭೂಮಿಪೂಜೆ ಶುಭಾರಂಭ!

ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಸಂಪತ್‌ ಕುಮಾರ್‌ ಪೂಜಾ ವಿಧಿಗಳನ್ನು ಸನ್ನಿಧಿ ಅರ್ಚಕರೊಂದಿಗೆ ನೆರವೇರಿಸಿದರು. ಕೊಡಗು ಜಿಲ್ಲಾ ಬಜರಂಗದಳ ಸಂಯೋಜಕ ಚೇತನ್‌ ಕೆ. ಎಚ್‌., ವಿಶ್ವಹಿಂದು ಪರಿಷದ್‌ ತಾಲೂಕು ಅಧ್ಯಕ್ಷ ಸುರೇಶ್‌ ಮುತ್ತಪ್ಪ, ವಿಶ್ವ ಹಿಂದು ಪರಿಷತ್‌ ಜಿಲ್ಲಾ ಸಹ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್‌, ಬಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ ವಿನಯ್‌ ಕುಮಾರ್‌, ಜಿಲ್ಲಾ ಆಖಾಡ ಪ್ರಮುಖ ನಾಗೇಶ್‌, ಕುಶಾಲನಗರ ಪ್ರಖಂಡ ಸಂಯೋಜಕ ರಾಜೀವ್‌, ಮಡಿಕೇರಿ ನಗರ ಸಹ ಸಂಯೋಜಕ ಚರಣ್‌, ಸತ್ಯ, ರವಿ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios