ಬೆಂಗಳೂರು( ಜೂ. 29)   ಕೊರೋನಾ ಅಟ್ಟಹಾಸ ರಾಜ್ಯದಲ್ಲಿ ಮುಂದುವರಿದಿದ್ದು ಸೋಮವಾರ ಮತ್ತೆ ಸಾವಿರ ದಾಟಿದೆ.

ರಾಜ್ಯದಲ್ಲಿ 1105 ಪಾಸಿಟಿವ್ ಕೇಸ್ ದಾಖಲಾಗಿದ್ದರೆ ಬೆಂಗಳೂರಿನ ಲೆಕ್ಕ 738! ಇನ್ನುಳಿದಂತೆ ಬಳ್ಳಾರಿ  76 , ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24  ಕೇಸುಗಳು ಪಾಸಿಟಿವ್ ದಾಖಲಾಗಿದ್ದು ನಂತರ ಸ್ಥಾನ ಪಡೆದುಕೊಂಡಿವೆ.

ಸೋಮವಾರ ಕೊರೋನಾದಿಂದ 19  ಜನ ಮೃತಪಟ್ಟಿದ್ದಾರೆ ಅಲ್ಲಿಗೆ ರಾಜ್ಯದ ಸಾವಿನ ಸಂಖ್ಯೆ  226ಕ್ಕೆ ಏರಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14295ಕ್ಕೆ ಏರಿದೆ.  ಸೋಮವಾರ  176  ಜನ ಡಿಸ್ಚಾರ್ಜ್ ಆಗಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಭಾನುವಾರ ಒಂದೇ ದಿನ 1267 ಕೇಸ್

ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಮಾತ್ರ ಹದಗೆಟ್ಟಿದ್ದು ರಾಜ್ಯ ಸರ್ಕಾರ ರಾತ್ರಿ ಸಂಚಾರಕ್ಕೆ ನಿಷೇಧ  ಹಾಕಿದೆ.  ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಐದು ಗಂಟೆವರೆಗೆ ಸಂಚಾರ ಮಾಡುವಂತೆ ಇಲ್ಲ ಎಂದು  ತಿಳಿಸಲಾಗಿದ್ದು ಪೊಲೀಸ್ ಇಲಾಖೆ ಭದ್ರತೆ ವಹಿಸಿಕೊಂಡಿದೆ. 

ಸೋಮವಾರದ ಜಿಲ್ಲಾವಾರು ಅಂಕಿ-ಅಂಶ

ಬಳ್ಳಾರಿ  76 , ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24 , ಕಲಬುರಗಿ 23, ಹಾಸನ 22, ವಿಜಯಪುರ 22, ತುಮಕೂರು18,  ಉಡುಪಿ 18, ಧಾರವಾಡ 17, ಚಿಕ್ಕಮಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 9,  ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು 4 ಬಾಗಲಕೋಟೆ 4, ಗದಗ 4, ಕೋಲಾರ 4, ಬೆಂಗಳೂರು ಗ್ರಾಮಾಂತರ  3,  ದಾವಣಗೆರೆ 2, ರಾಮನಗರ 2, ಚಿತ್ರದುರ್ಗ 2, ಹಾವೇರಿ 1, ಕೊಡಗು 1 ಕೇಸುಗಳು ದಾಖಲಾಗಿವೆ. ಬೆಳಗಾವಿ, ಕೊಪ್ಪಳ ಮತ್ತು ಚಾಮರಾಜನಗರ ಜಿಲ್ಲೆ ಸೋಮವಾರದ ಮಟ್ಟಿಗೆ ಕೊರೋನಾ ಮುಕ್ತವಾಗಿವೆ.