ಪಶ್ಚಿಮ ಬಂಗಾಳ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ| ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ| ಕಮಲ ಪಾಳಯಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇಢ ಮಹತ್ವದ ಹೇಳಿಕೆ

ಕೋಲ್ಕತ್ತಾ(ಮಾ.07) ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗಲೇ ರಾಜಕೀಯ ಚಟುವಟಿಕೆಗಳು ಭಾರೀ ಗರಿಗೆದರಿವೆ. ಒಂದೆಡೆ ಸಿಎಂ ಮಮತಾ ಬ್ಯಾನರ್ಜಿ ಆಪ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಟಿಎಂಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಈ ನಡುವೆಯೇ ಸದ್ಯ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಮಲ ಪಾಳಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. 

Scroll to load tweet…

ಇನ್ನು ಕೋಲ್ಕತ್ತಾದ ಬ್ರಿಗೇಡ್ ಗ್ರೌಂಡ್‌ನ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಿಥುನ್ ಚಕ್ರವರ್ತಿ 'ನಾನು ನಂಬರ್ ವನ್ ಕೋಬ್ರಾ, ಯಾರಿಗಾದರೂ ಕಚ್ಚಿದರೆ ಅವರು ಫೋಟೋ ಫ್ರೇಮ್ ಆಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ. ನಾನೊಬ್ಬ ಬಂಗಾಳಿಗ ಎನ್ನಲು ನನಗೆ ಹೆಮ್ಮೆಯಾಗುತ್ತದೆ' ಎಂದಿದ್ದಾರೆ.

ಫೆ.16ರಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಿಥುನ್‌ ಚಕ್ರವರ್ತಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಿಥುನ್‌ ಅವರ ರಾಜಕೀಯ ಸೇರ್ಪಡೆ ಬಗ್ಗೆ ವದಂತಿಗಳು ಹರಿದಾಡುತ್ತಿವೆ.

70 ವರ್ಷದ ನಟ ಮಿಥುನ್‌ ಚಕ್ರವರ್ತಿ ಅವರು ರಾಜ್ಯದಲ್ಲಿ ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿಂದೆ ಸಿಪಿಎಂಗೆ ಆಪ್ತರಾಗಿದ್ದ ಮಿಥುನ್‌, ಕೆಲಕಾಲ ಟಿಎಂಸಿ ಸಂಸದರಾಗಿ ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದರು.