ಭಾರತ ಹಿಂದೆಂದಿಗಿಂತಲೂ ಈಗ ಹೆಚ್ಚು ಸದೃಢ: ಪ್ರಧಾನಿ ಮೋದಿ

*  ರಷ್ಯಾ ಬಗ್ಗೆ ಜಗತ್ತೇ ಹೋಳಾದರೂ ನಮ್ಮದು ಭಿನ್ನ ನಿಲುವು
*  ಜಾಗತಿಕ ಒತ್ತಡಕ್ಕೆ ನಾವು ಮಣಿದಿಲ್ಲ: ಪ್ರಧಾನಿ
*  ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿರಿಸಿ ಕೆಲಸ ಮಾಡುತ್ತಿದೆ
 

PM Narendra Modi Talks Over Strong India grg

ನವದೆಹಲಿ(ಏ.07):  ರಷ್ಯಾ- ಉಕ್ರೇನ್‌ ಯುದ್ಧಕ್ಕೆ(Russia-Ukraine War) ಸಂಬಂಧಿಸಿದಂತೆ ಭಾರತ ತಳೆದಿರುವ ತಟಸ್ಥ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi), ಯುದ್ಧದ ವಿಷಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿದ್ದರೂ ಜಾಗತಿಕ ಒತ್ತಡಕ್ಕೆ ಮಣಿಯದೆ ತಟಸ್ಥ ಧೋರಣೆ ತಳೆಯುವ ಮೂಲಕ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಇದು ಭಾರತ(India) ಹಿಂದೆಂದಿಗಿಂತಲೂ ಹೆಚ್ಚು ಸದೃಢವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ 42ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಸಂಸದರು, ಶಾಸಕರು, ಕಾರ್ಯಕರ್ತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ವರ್ಷದ ಸಂಸ್ಥಾಪನಾ ದಿನ ಅತ್ಯಂತ ಮಹತ್ವಪೂರ್ಣವಾಗಿದೆ. ಮೊದಲನೆಯದಾಗಿ ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದೇವೆ. ಇದು ಭಾರತದ ಅಮೃತ ಕಾಲವಾಗಿದೆ. ಎರಡನೆಯದಾಗಿ ಜಾಗತಿಕ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆ ಕಂಡುಬರುತ್ತಿದ್ದು, ಇದು ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಸ್ಥಳೀಯ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ’ ಎಂದು ಪ್ರತಿಪಾಸಿದರು.

ಪಂಜಾಬ್ ಗೆದ್ದ ಆಪ್‌ ಕಣ್ಣು ಈಗ ಮೋದಿ ತವರು ನಾಡಿನ ಮೇಲೆ: ಕೇಜ್ರೀವಾಲ್‌ ಬೃಹತ್ ರೋಡ್‌ ಶೋ

ಜೊತೆಗೆ ರಷ್ಯಾ- ಉಕ್ರೇನ್‌ ಯುದ್ಧ ಮತ್ತು ಆ ವಿಷಯದಲ್ಲಿ ಭಾರತದ ನಿಲುವಿನ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ‘ಈ ಸಮರವು ಇಂದು ವಿಶ್ವವನ್ನು(World) ಇಬ್ಭಾಗ ಮಾಡಿದೆ. ಆದರೆ ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದು, ಮಾನವೀಯತೆಗಾಗಿ ವಿಭಿನ್ನ ನಿಲುವು ತಾಳಿದೆ’ ಎನ್ನುವ ಮೂಲಕ ಯುದ್ಧ ವಿಚಾರದಲ್ಲಿ ಸರ್ಕಾರದ ತಟಸ್ಥ ಧೋರಣೆ ಸಮರ್ಥಿಸಿಕೊಂಡರು. ಈ ಮೂಲಕ ಇದಕ್ಕೆಲ್ಲಾ ಕಾರಣವಾಗಿದ್ದು, ಭಾರತ ಹಿಂದೆಂದಿಗಿಂತಲೂ ಹೆಚ್ಚು ಸದೃಢವಾಗಿರುವುದು ಎಂದು ಪ್ರತಿಪಾದಿಸಿದರು.

ಉಕ್ರೇನ್‌ ಮೇಲೆ ರಷ್ಯಾ ದಾಳಿಯ ಹೊರತಾಗಿಯೂ, ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿ ಮಾಡಿತ್ತು. ಇದಕ್ಕೆ ಹಲವು ದೇಶಗಳು ಬಹಿರಂಗವಾಗಿಯೇ ವಿರೋಧ ಮಾಡಿದರೂ, ಯುದ್ಧವನ್ನು ಶಾಂತಿಯುತವಾಗಿ ಇತ್ಯರ್ಥ ಮಾಡಬೇಕೆಂಬ ಕಳಕಳಿ ವ್ಯಕ್ತಪಡಿಸುತ್ತಲೇ, ತನ್ನ ಹಳೆಯ ಮಿತ್ರ ರಷ್ಯಾ ಜೊತೆಗಿನ ಬಾಂಧವ್ಯ ಉಳಿಸಿಕೊಳ್ಳುವ ಅಗತ್ಯವನ್ನು ಭಾರತ ಸರ್ಕಾರ ಬಲವಾಗಿ ಪ್ರತಿಪಾದಿಸಿಕೊಂಡೇ ಬಂದಿತ್ತು. ಇದನ್ನು ಅಮೆರಿಕ ಸೇರಿದಂತೆ ಜಾಗತಿಕ ಸಮುದಾಯ ಒಪ್ಪಿಕೊಂಡಿತ್ತು ಕೂಡಾ.

ಬಿಜೆಪಿ ‘ರಾಷ್ಟ್ರಭಕ್ತಿ’ ಪರ, ವಿಪಕ್ಷ ‘ಕುಟುಂಬ ಭಕ್ತಿ’ ಪರ:

ಬಿಜೆಪಿ(BJP) ‘ರಾಷ್ಟ್ರಭಕ್ತಿ’ ಪರ ನಿಲ್ಲುತ್ತದೆ. ಆದರೆ ವಿರೋಧಿಗಳು‘ಕುಟುಂಬ ರಾಜಕಾರಣ’ದ ಪರ ನಿಲ್ಲುತ್ತಾರೆ. ಆದರೆ ಇಂಥ ಕುಟುಂಬ ರಾಜಕೀಯವು ಪ್ರಜಾಪ್ರಭುತ್ವದ ದೊಡ್ಡ ಶತ್ರು ಎಂಬುದರ ಅರಿವು ಈಗ ಜನರಿಗೆ ಆಗತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌(Congress) ಹಾಗೂ ಇತರ ವಿಪಕ್ಷಗಳ ಹೆಸರೆತ್ತದೇ ಕುಟುಕಿದ್ದಾರೆ.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲು ರದ್ದಾದರೆ ದಂಗೆ ಆಗುತ್ತೆ: ಕೇಂದ್ರದ ವಾದ

ಇದೇ ವೇಳೆ, ರಷ್ಯಾ-ಉಕ್ರೇನ್‌ ಯುದ್ಧದಿಂದ ಉದ್ಭವಿಸಿದ ಪರಿಸ್ಥಿತಿ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ‘ಈ ಸಮರವು ಇಂದು ವಿಶ್ವವನ್ನು ಇಭ್ಭಾಗ ಮಾಡಿದೆ. ಆದರೆ ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದು, ವಿಭಿನ್ನ ನಿಲುವು ತಾಳಿದೆ’ ಎಂದಿದ್ದಾರೆ. ಈ ಮೂಲಕ ಯುದ್ಧ ವಿಚಾರದಲ್ಲಿ ತಮ್ಮ ತಟಸ್ಥ ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಮೋದಿ ಹೇಳಿದ್ದು

- ರಷ್ಯಾ- ಉಕ್ರೇನ್‌ ಸಮರ ಇಂದು ವಿಶ್ವವನ್ನೇ ಎರಡು ಭಾಗ ಮಾಡಿದೆ
- ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿರಿಸಿ ಕೆಲಸ ಮಾಡುತ್ತಿದೆ
- ಮಾನವೀಯತೆಗಾಗಿ ವಿಭಿನ್ನ ನಿಲುವು ತಾಳಿದೆ. ಇದು ಸದೃಢತೆ ಸಂಕೇತ
- ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಷಣ
 

Latest Videos
Follow Us:
Download App:
  • android
  • ios