ಫೇಮಸ್ ಆಗಲು ಪಿಎಫ್‌ಐ ದಾಳಿ ಕತೆ ಕಟ್ಟಿದ ಕೇರಳ ಯೋಧ, ಸ್ನೇಹಿತನ ಬಂಧನ
ಜನಪ್ರಿಯನಾಗಬೇಕು ಎಂಬ ಕಾರಣಕ್ಕೆ ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಕೇರಳದ ಯೋಧ ಕತೆ ಕಟ್ಟಿ, ತನ್ನ ಬೆನ್ನ ಮೇಲೆ ಸ್ನೇಹಿತನಿಂದಲೇ ಪಿಎಫ್‌ಐ ಎಂದು ಬರೆಸಿಕೊಂಡಿದ್ದ ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.
ತಿರುವನಂತಪುರಂ: ಜನಪ್ರಿಯನಾಗಬೇಕು ಎಂಬ ಕಾರಣಕ್ಕೆ ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಕೇರಳದ ಯೋಧ ಕತೆ ಕಟ್ಟಿ, ತನ್ನ ಬೆನ್ನ ಮೇಲೆ ಸ್ನೇಹಿತನಿಂದಲೇ ಪಿಎಫ್‌ಐ ಎಂದು ಬರೆಸಿಕೊಂಡಿದ್ದ ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಯೋಧ ಶೈನ್ ಕುಮಾರ್‌ನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಪಿಎಫ್‌ಐ (PFI) ಸಂಘಟನೆ ಕಾರ್ಯಕರ್ತರು ನನ್ನ ಕೈ ಕಟ್ಟಿ ಹಾಕಿ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆದು ಹಲ್ಲೆ ನಡೆಸಿದರು ಎಂದು ಸೋಮವಾರ ಕುಮಾರ್ ಆರೋಪಿಸಿದ್ದ, ಇದು ದೇಶಾದ್ಯಂತ ಭಾರಿ ಸಂಚಲನವನ್ನುಂಟು ಮಾಡಿತ್ತು. ಆದರೆ ತನಿಖೆ ಆರಂಭಿಸಿದ್ದ ಪೊಲೀಸರು ಶೈನ್ (Shine kumar) ಹಾಗೂ ಆತನ ಸ್ನೇಹಿತ ಜಾಶಿಯನ್ನು ವಿಚಾರಣೆ ನಡೆಸಿದಾಗ ಶೈನ್ ಆಡಿದ್ದ ನಾಟಕವನ್ನು ಜಾಶಿ ಬಾಯಿಬಿಟ್ಟಿದ್ದಾನೆ.
ಪುತ್ರಿಯ ಕಾಲೇಜು ಕಳ್ಳಾಟ ಅರಿತ ಹೆತ್ತಮ್ಮನ 30 ಬಾರಿ ಇರಿದು ಕೊಂದ ಮಗಳು...
ನನ್ನ ಮನೆಯಿಂದ ಹಸಿರು ಬಣ್ಣದ ಡಬ್ಬಿ ತರಿಸಿಕೊಂಡ ಶೈನ್, ತನ್ನ ಬಟ್ಟೆ ಹರಿಯುವಂತೆ ನನಗೆ ಹೇಳಿದ. ನಂತರ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆಸಿಕೊಂಡ. ನನಗೆ ಇಷ್ಟವಿಲ್ಲದಿದ್ದರೂ ಬಲವಂತನಾಗಿ ನಾನು ಬರೆದೆ. ಫೇಮಸ್ ಆಗಬೇಕೆಂದು ಶೈನ್ ಹೀಗೆ ಮಾಡಿದ ಎಂದು ಜಾಶಿ ಹೇಳಿದ್ದಾನೆ.
ರಜೆಯಲ್ಲಿ ಊರಿಗೆ ಬಂದಿದ್ದ ಯೋಧನ ಮೇಲೆ ದಾಳಿ ಮಾಡಿದ ಪಿಎಫ್‌ಐ ದುರುಳರು ಆತನ ಮೇಲೆ ಹಲ್ಲೆ ಮಾಡಿ ಬೆನ್ನಿನ ಮೇಲೆ ಹಸಿರು ಪೇಂಟ್‌ನಿಂದ ಪಿಎಫ್‌ಐ ಎಂದು ಬರೆದಿದ್ದಾರೆ ಎಂದು ಯೋಧನೇ ಪೊಲೀಸರಿಗೆ ದೂರು ನೀಡಿದ್ದ. ಕೊಲ್ಲಂನ ಕಡಕ್ಕಲ್ ಬಳಿ ತನ್ನ ಮನೆಯ ಸಮೀಪದಲ್ಲಿರುವ ರಬ್ಬರ್ ತೋಟದಲ್ಲಿ ಭಾನುವಾರ ರಾತ್ರಿ ಆರು ಜನರಿದ್ದ ಗುಂಪು ತನ್ನ ಮೇಲೆ ದಾಳಿ ನಡೆಸಿದೆ. ದಾಳಿಯ ನಂತರ ನನ್ನ ಕೈಗಳನ್ನು ಟೇಪ್‌ನಿಂದ ಸುತ್ತಿ ಬೆನ್ನಿನ ಮೇಲೆ ಪಿಎಫ್ಐ (PFI) ಎಂದು ಹಸಿರು ಬಣ್ಣದ ಪೈಂಟ್‌ನಲ್ಲಿ ಬರೆದಿದ್ದಾರೆ ಎಂದು ಆತ ದೂರಿದ್ದ . ಘಟನೆಗೆ ಸಂಬಂಧಿಸಿದಂತೆ ಕಡಕ್ಕಲ್ (Kadakkal) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
18ರ ಹುಡುಗನಾಗಲು ಹೊರಟಿರುವ 46ರ ಹರೆಯದ ಉದ್ಯಮಿ ಬ್ರಿಯಾನ್ ಲೈಫ್‌ಸ್ಟೈಲ್ ಹೇಗಿದೆ ನೋಡಿ?