ನವದೆಹಲಿ (ಮಾ.12): ಸ್ವಾಮಿ ಚಿದ್ಭವಾನಂದ ಅವರು ಬರೆದ ‘ಭಗವದ್ಗೀತೆ’ಯ ಕಿಂಡಲ್‌ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಡುಗಡೆ ಮಾಡಿದರು.

 ಬಳಿಕ ಮಾತನಾಡಿದ ಅವರು, ‘ಕೇವಲ ನಮಗಾಗಿ ಅಲ್ಲ, ಇಡೀ ಜನಸಮುದಾಯಕ್ಕಾಗಿ ಸಂಪತ್ತು ಮತ್ತು ಮೌಲ್ಯಗಳನ್ನು ಸೃಷ್ಟಿಮಾಡುವುದೇ ಆತ್ಮನಿರ್ಭರ ಭಾರತದ ಸಾರ. ಅತಿ ಕಡಿಮೆ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಶೋಧಿಸಿದ ಕೊರೋನಾ ಲಸಿಕೆ ಇವತ್ತು ಇಡೀ ವಿಶ್ವವನ್ನು ತಲುಪುತ್ತಿದೆ. ಕಾಡುತ್ತಿರುವ ವೈರಸ್‌ ಅನ್ನು ಉಪಶಮನ ಮಾಡಿ ಮಾನವಕುಲಕ್ಕೆ ಆದಷ್ಟುನೆರವು ನೀಡುವುದು ನಮ್ಮ ಉದ್ದೇಶ. ಭಗವದ್ಗೀತೆಯೂ ನಮಗೆ ಇದನ್ನೇ ಹೇಳಿಕೊಟ್ಟಿದೆ’ ಎಂದು ಹೇಳಿದರು. 

21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ! .

ಇದೇ ವೇಳೆ ಭಗವದ್ಗೀತೆ ಸಂಘರ್ಷದ ವೇಳೆ ಜನ್ಮತಾಳಿತು. ಸದ್ಯ ಇಡೀ ಮಾನವ ಜನಾಂಗವೂ ಅಂಥದ್ಧೇ ಸಂಘರ್ಷ ಮತ್ತು ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ ಭಗವದ್ಗೀತೆಯನ್ನು ಓದುವಂತೆ ಯುವಕರಿಗೆ ಕರೆ ನೀಡಿದರು.