ದೆಹಲಿ(ಅ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮೊಬೈಲ್, ಮಹಿಳೆಯರ ಬ್ಯಾಗ್, ಚಿನ್ನದ ಸರ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳುವು ಮಾಡುವ ಚಾಲಾಕಿ ಕಳ್ಳರ  ಸಂಖ್ಯೆ ಅತಿಯಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಹೋದರನ ಪುತ್ರಿಯ ವ್ಯಾನಿಟಿ ಬ್ಯಾಗನ್ನೇ ಕಳ್ಳರು ಕದ್ದೊಯ್ದಿದ್ದಾರೆ.

ಇದನ್ನೂ ಓದಿ: ಇಡೀ ದೇಶದ ನಾಯಕ ನೀ: ದೇಸಿ ಪಂಚೆಯಲ್ಲಿ ಕ್ಸಿ ಬರಮಾಡಿಕೊಂಡ ಪ್ರಧಾನಿ!

ಮೋದಿ ಸಹೋದರನ ಪುತ್ರಿ ದಮಯಂತಿ ಬೆನ್ ಮೋದಿ ದೆಹಲಿಯ ಗುಜರಾತ್ ಸಮಾಜ ಭವನ ಸಮೀಪದ ಸಿವಿಲ್ ಲೇನ್ ರಸ್ತೆಯಲ್ಲಿ ಕಳ್ಳತನ ನಡೆದಿದೆ. ದಮಯಂತಿ ಆಟೋರಿಕ್ಷಾದಿಂದ ಇಳಿದ ವೇಳೆ, ಬೈಕ್‌ನಲ್ಲಿ ಬಂದ ಇಬ್ಬರು ಏಕಾಏಕಿ ದಮಯಂತಿ ಬೆನ್ ಮೋದಿಯ ವ್ಯಾನಿಟಿ ಬ್ಯಾಗ್ ಕದ್ದೊಯ್ದಿದ್ದಾರೆ.  ಸಂಜೆ 7 ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿದೆ.

ಇದನ್ನೂ ಓದಿ: ಹದಗೆಟ್ಟರಸ್ತೆ: ವಿದ್ಯಾರ್ಥಿನಿ ಪತ್ರಕ್ಕೆ ಪ್ರಧಾನಿ ಸ್ಪಂದನೆ

ವ್ಯಾನಿಟಿ ಬ್ಯಾಗ್‌ನಲ್ಲಿ 50,000 ರೂಪಾಯಿ ನಗದು, 2 ಮೊಬೈಲ್ ಫೋನ್ ಹಾಗೂ ಇತರ ದಾಖಲೆ ಪತ್ರಗಳಿದ್ದವು. ದಮಯಂತಿ ಬೆನ್ ಮೋದಿ ಕಳ್ಳತನದ ಕುರಿತು ದೂರು ನೀಡಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ನಡೆದ ಸಮೀಪದಲ್ಲೇ ಲೆಫ್ಟಿನೆಂಟ್ ಗರ್ವನರ್ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸಗಳಿವೆ. ಹೆಚ್ಚಿನ ಭದ್ರತೆ ಇರವು ಸ್ಥಳದಲ್ಲೇ ಕಳ್ಳತನ ನಡೆದಿರುವುದು ದೆಹಲಿ ಪೊಲೀಸರ ತಲೆನೋವು ಹೆಚ್ಚಿಸಿದೆ.