ನವದೆಹಲಿ(ಮಾ. 02)  ದೀರ್ಘ ಕಾಲದ ನಂತರ ಪ್ರಧಾನಿ ನರೇಂದ್ರ ಮೋದಿ ರಜಾ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಮೂಲಕವೇ ಘೋಷಣೆ ಮಾಡಿದ್ದಾರೆ. ಸಹಜವಾಗಿಯೇ ಮೋದಿ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾ ಮೂಲಕವೇ ಪ್ರಧಾನಿ ಕೋಟ್ಯಂತರ ಜನರನ್ನು ತಲುಪಿಕೊಂಡು ಬಂದವರು. ತಮ್ಮ ಕಾರ್ಯಕ್ರಮಗಳನ್ನು ತಿಳಿಸುತ್ತ ಬಂದವರು. ಯಾವ ಕಾರಣಕ್ಕೆ ಫೆಸ್ ಬುಕ್, ಇಸ್ಟಾಗ್ರ್ಯಾಮ್ ಮತ್ತು ಟ್ವಿಟರ್ ನಿಂದ ಪ್ರಧಾನಿ ಹೊರಗೆ ಹೊರಟಿದ್ದಾರೆ ತಿಳಿಯದಾಗಿದೆ.

ಅಷ್ಟಕ್ಕೂ ಟ್ರಂಪ್ ಭೇಟಿಯಿಂದ ದೇಶಕ್ಕೆ ಸಿಕ್ಕ ಲಾಭ ಏನು?

2014 ರ ಚುನಾವಣೆ ಸಂದರ್ಭ ಮೋದಿ ಅವರಿಗೆ ಬಹುದೊಡ್ಡ ಶಕ್ತಿ ತಂದುಕೊಟ್ಟಿದ್ದು ಇದೇ ಸೋಶಿಯಲ್ ಮೀಡಿಯಾ. ಅದಾದ ನಂತರ ಅವರ ಪ್ರತಿ ಚುನಾವಣೆ ಸಂದರ್ಭದಲ್ಲಿಯೂ  ನೆರವಿಗೆ ಬಂದಿದ್ದು ಸೋಶಿಯಲ್ ಮೀಡಿಯಾ.

ಮೋದಿ ಅವರ ವಿಚಾರವಾಗಲಿ ಅಥವಾ ಕೇಂದ್ರ ಸರ್ಕಾರದ ವಿಚಾರವಾಗಲಿ ಇಲ್ಲವೇ ದೇಶದ ವಿಚಾರವಾಗಲಿ ಮೋದಿ ಶೇರ್ ಮಾಡಿಕೊಳ್ಳುತ್ತಿದ್ದುದ್ದು ಇಲ್ಲಿಯೇ. ಇದೀಗ ಮೋದಿ ಸಂಡೆ ಬಂದಿದೆ ಎಂದು ಹೇಳಿದ್ದಾರೆ. ಸಂಡೇ ಒಂದೇ ದಿನ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಬಂದ್ ಮಾಡುತ್ತಾರೋ ಅಥವಾ ಸಂಪೂರ್ಣವಾಗಿ ಬಂದ್ ಮಾಡುತ್ತಾರೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ!