ವಿಶ್ವದ ಹಲವು ದೇಶಗಳಲ್ಲಿ ಇಷ್ಟುದ್ದದ ಎಕ್ಸ್‌ಪ್ರೆಸ್‌ ವೇಗಳು ಇಲ್ಲ ಉತ್ತರ ಪ್ರದೇಶದ 6ನೇ ಎಕ್ಸ್‌ಪ್ರೆಸ್‌ ವೇ ಜುಲೈ 16ರಂದು ಮೋದಿಯಿಂದ ಲೋಕಾರ್ಪಣೆ  7 ನಿರ್ಮಾಣ ಹಂತದಲ್ಲಿದ್ದು, ಮುಗಿದರೆ 3200 ಕಿ.ಮೀ. ಮಾರ್ಗ

ಲಖನೌ (ಜು.8): ಉತ್ತರಪ್ರದೇಶದ ಆರನೇ ಎಕ್ಸ್‌ಪ್ರೆಸ್‌ ವೇ ಆಗಿರುವ ಬುಂದೇಲ್‌ಖಂಡ್‌ನ 296 ಕಿ.ಮೀ. ಉದ್ದದ ಮಾರ್ಗವನ್ನು ಜು.16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇನ್ನೂ 7 ಎಕ್ಸ್‌ಪ್ರೆಸ್‌ ವೇಗಳು ಈಗಾಗಲೇ ಉತ್ತರಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿವೆ.

Scroll to load tweet…

ಈ ಕಾಮಗಾರಿಗಳು ಪೂರ್ಣಗೊಂಡರೆ, 3200 ಕಿ.ಮೀ. ಎಕ್ಸ್‌ಪ್ರೆಸ್‌ ವೇ ಹೊಂದಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಉತ್ತರಪ್ರದೇಶ ಪ್ರಾಪ್ತವಾಗುತ್ತದೆ. ವಿಶೇಷ ಎಂದರೆ, ಹಲವು ದೇಶಗಳಲ್ಲಿ ಇಷ್ಟುದ್ದದ ಎಕ್ಸ್‌ಪ್ರೆಸ್‌ ವೇಗಳು ಇಲ್ಲ.

ಕಳೆದ 6 ವರ್ಷಗಳಲ್ಲಿ ಉತ್ತರ ಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3 ಲಕ್ಷ ಇಳಿಕೆ!

ಬುಂದೇಲ್‌ಖಂಡ್‌ನ ಮಾರ್ಗ ಉದ್ಘಾಟನೆಯಾದರೆ 1225 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇಗಳು ಬಳಕೆಗೆ ಸಿಕ್ಕಂತಾಗಲಿದೆ. 1974 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ವಿವಿಧ ಹಂತದಲ್ಲಿವೆ.

Scroll to load tweet…

ಉತ್ತರಪ್ರದೇಶದಲ್ಲಿ ಈಗಾಗಲೇ ಐದು ಎಕ್ಸ್‌ಪ್ರೆಸ್‌ ವೇಗಳು ಇವೆ. ಗ್ರೇಟರ್‌ ನೋಯ್ಡಾದಿಂದ ಆಗ್ರಾ ಸಂಪರ್ಕಿಸುವ 165 ಕಿ.ಮೀ. ಉದ್ದದ ಯಮುನಾ ಎಕ್ಸ್‌ಪ್ರೆಸ್‌ ವೇ, ನೋಯ್ಡಾ- ಗ್ರೇಟರ್‌ ನೋಯ್ಡಾ ಎಕ್ಸ್‌ಪ್ರೆಸ್‌ ವೇ (25 ಕಿ.ಮೀ.), ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ ವೇ (302 ಕಿ.ಮೀ.), ದೆಹಲಿ- ಮೇರಠ್‌ ಎಕ್ಸ್‌ಪ್ರೆಸ್‌ ವೇ (96 ಕಿ.ಮೀ.) ಹಾಗೂ ಲಖನೌದಿಂದ ಗಾಜಿಪುರವರೆಗಿನ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ ವೇ (341 ಕಿ.ಮೀ.).

ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು 29 ಫೆಬ್ರವರಿ 2020 ರಂದು ಪ್ರಾರಂಭಿಸಲಾಯಿತು ಮತ್ತು ಜನವರಿ 2023 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಇದೀಗ 8 ತಿಂಗಳ ಮೊದಲೇ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

ಸಿಎಂ ಮಾನ್‌ ವಧುವಾದ 16 ವರ್ಷ ಕಿರಿಯ ಗುರುಪ್ರೀತ್: ಇಲ್ಲಿವೆ ಭಗವಂತ್ ಮದುವೆ ಫೋಟೋಸ್‌

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿ:

  • ಈ ಎಕ್ಸ್‌ಪ್ರೆಸ್‌ವೇ ಚಿತ್ರಕೂಟದಿಂದ ಉತ್ತರ ಪ್ರದೇಶದ ಇಟಾವಾಗೆ ಹಾದು ಹೋಗುತ್ತದೆ. ಯುಪಿಯ ನೈಋತ್ಯ ಅಂಚಿನಲ್ಲಿ ನೆಲೆಗೊಂಡಿರುವ ಬುಂದೇಲ್‌ಖಂಡ್ ಪ್ರದೇಶವು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವೆ ವಿಭಜಿಸಲ್ಪಟ್ಟ ರಸ್ತೆಯಾಗಿದೆ. 
  • ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಫೆಬ್ರವರಿ 2018 ರಲ್ಲಿ ಭಾರತ ಸರ್ಕಾರ ಘೋಷಿಸಿದ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ ಗಳಲ್ಲಿ ಒಂದಾಗಿದೆ. ಇದನ್ನು ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಭಿವೃದ್ಧಿಪಡಿಸುತ್ತಿದೆ.
  • ಯೋಜನೆಯ ಸಂಪೂರ್ಣ ವೆಚ್ಚ 15,000 ಕೋಟಿ ರೂ. ಇದರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಇ-ಟೆಂಡರ್ ಮೂಲಕ 1,132 ಕೋಟಿ ರೂ.ಗಳನ್ನು ಉಳಿಸಿದೆ, ಈ ಮೂಲಕ ಮೂಲ ಅಂದಾಜು ವೆಚ್ಚದ ಸುಮಾರು 12.72 ಪ್ರತಿಶತ ಉಳಿದಂತಾಗಿದೆ.
  • ಈ ಚತುಷ್ಪಥ ಎಕ್ಸ್‌ಪ್ರೆಸ್‌ವೇ ಭವಿಷ್ಯದಲ್ಲಿ ಆರು-ಲೇನ್‌ಗೆ ವಿಸ್ತರಿಸಬಹುದು, 13 ಇಂಟರ್‌ಚೇಂಜ್ ಪಾಯಿಂಟ್‌ಗಳನ್ನು ಹೊಂದಿದೆ ಮತ್ತು ರಾಜ್ಯದ ಏಳು ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
  • ಚಿತ್ರಕೂಟದಲ್ಲಿ ಝಾನ್ಸಿ-ಪ್ರಯಾಗ್‌ರಾಜ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-35 ರಲ್ಲಿ ಭಾರತ್‌ಕೂಪ್‌ನಿಂದ ಪ್ರಾರಂಭವಾಗುವ ಎಕ್ಸ್‌ಪ್ರೆಸ್‌ವೇ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಇಟಾವಾ ಗ್ರಾಮದ ಕುಡ್ರೈಲ್ ಬಳಿ ಕೊನೆಗೊಳ್ಳುತ್ತದೆ.
  • ರಸ್ತೆಯ ಒಟ್ಟು ಉದ್ದ 296.07 ಕಿಮೀ ಮತ್ತು ಇದು ಉತ್ತರ ಪ್ರದೇಶದ ಏಳು ಜಿಲ್ಲೆಗಳನ್ನು ಸಂಪರ್ಕಿಸುತ್ತದೆ - ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ.
  • ಎಕ್ಸ್‌ಪ್ರೆಸ್‌ವೇಯು ಬಾಗೆನ್, ಕೆನ್, ಶ್ಯಾಮಾ, ಚಂದವಾಲ್, ಬಿರ್ಮಾ, ಯಮುನಾ, ಬೆಟ್ವಾ ಮತ್ತು ಸೆಂಗರ್‌ನಂತಹ ನದಿಗಳನ್ನು ದಾಟುತ್ತದೆ.
  • ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು ನಾಲ್ಕು ರೈಲ್ವೆ ಮೇಲ್ಸೇತುವೆಗಳು ಬರುತ್ತವೆ. ಇನ್ನೂ 14 ದೊಡ್ಡ ಸೇತುವೆಗಳು, ಆರು ಟೋಲ್ ಪ್ಲಾಜಾಗಳು, ಏಳು ರಾಂಪ್ ಪ್ಲಾಜಾಗಳು, 266 ಸಣ್ಣ ಸೇತುವೆಗಳು ಮತ್ತು 18 ಫ್ಲೈ ಓವರ್‌ಗಳು ಎಕ್ಸ್‌ಪ್ರೆಸ್‌ವೇಯಲ್ಲಿ ಬರಲಿವೆ.