ಕ್ರೀಡೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಜನ 2010ರಲ್ಲಿ ಸಿಎಂ ಆಗಿದ್ದ ವೇಳೆ ಮೋದಿ ಆರಂಭಿಸಿದ್ದ ಖೇಲ್ ಮಹಾಕುಂಭ
ಅಹಮ್ಮದಾಬಾದ್(ಮಾ.12): ದೇಶದ ಅತೀ ದೊಡ್ಡ ಕ್ರೀಡಾಹಬ್ಬ ಖೇಲ್ ಮಹಾಕುಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅಹಮ್ಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಮಹಾ ಕ್ರೀಡೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.
2010ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಖೇಲ್ ಮಹಾಕುಂಭ ಮೊದಲ ಬಾರಿಗೆ ಆರಂಭಿಸಿದ್ದರು. ಇದೀಗ 11 ನೇ ಮಹಾಕುಂಭ ಆಯೋಜಿಸಲಾಗಿದೆ. ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಇಲ್ಲಿನ ಜನಸ್ತೋಮ ಆಕಾಶ ಮುಟ್ಟಲು ರೆಡಿ ಎಂದು ಹೇಳುತ್ತಿದ್ದಾರೆ. ಕೊರೋನಾ ಕಾರಣ ಕಳೆದೆರಡು ವರ್ಷ ಖೇಲ್ ಮಹಾಕುಂಭ ಆಯೋಜಿಸಲು ಸಾಧ್ಯವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.
ಗುಜರಾತ್‌ನ ಯುವ ಸಮೂಹ, ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಲು 2010ರಲ್ಲಿ ಈ ಕ್ರೀಡೆ ಆರಂಭಿಸಿದೆ. ಇದು ನನ್ನ ಕನಸಿನ ಯೋಜನೆಯಾಗಿತ್ತು. ಅಂದು ಸಣ್ಣ ಮಟ್ಟದಲ್ಲಿ ಆರಂಭಗೊಂಡ ಈ ಕ್ರೀಡಾ ಉತ್ಸವ ಇದೀಗ ಅತೀ ದೊಡ್ಡ ಆಲದ ಮರವಾಗಿ ಬೆಳೆದಿದೆ ಎಂದು ಮೋದಿ ಹೇಳಿದ್ದಾರೆ.
PM Modi in Gujarat ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!
ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ. ಇದಕ್ಕೆ ಪೂರಕವಾದ ವಾತಾವರಣ, ವೇದಿಕೆ ಕಲ್ಪಿಸಲಬೇಕು. ಈ ರೀತಿಯ ಕ್ರೀಡೋತ್ಸವ ಗುಜರಾತ್ ಹಾಗೂ ಭಾರತದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ ಎಂದು ಮೋದಿ ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 7 ಪದಕ ಗೆದ್ದು ಉತ್ತಮ ಸಾಧನೆ ಮಾಡಿದೆ. ಇನ್ನು ಪ್ಯಾರಾ ಒಲಿಂಪಿಕ್ಸ್‌ನಲ್ಲಿ 19 ಪದಕ ಗೆದ್ದುಕೊಂಡಿದೆ. ಭಾರತ ಇದೀಗ ವಿಶ್ವಮಟ್ಟದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ಪದಕಗಳನ್ನು ಗೆದ್ದುಕೊಳ್ಳುತ್ತಿದೆ ಎಂದು ಮೋದಿ ಹೇಳಿದ್ದಾರೆ.
2010ರ ಮೊದಲ ಆವೃತ್ತಿ ಖೇಲ್ ಮಹಾಕುಂಭದಲ್ಲಿ 16 ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮೊದಲ ವರ್ಷದಲ್ಲೇ 13 ಲಕ್ಷ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇಂದು ಇದೇ ಮಹಾಕುಂಭ 36 ಜನರಲ್ ಸ್ಪೋರ್ಟ್ಸ್, 26 ಪ್ಯಾರಾ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಈಗಾಗಲೇ 45 ಲಕ್ಷ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ.
ಯುಪಿ ಗೆಲ್ಲಲು 193 ಕ್ಷೇತ್ರಗಳಿಗೆ ಮೋದಿ ಪರ್ಯಟನೆ, ಉನ್ನಾವೋ ಗೆಲುವಿನ ಹಿಂದಿದೆ ಈ ರಹಸ್ಯ!
ಖೇಲ್ ಮಹಾಕುಂಭಕ್ಕೆ ಚಾಲನೆಗೊ ಮೊದಲೇ ಅಂದರೆ ಮಾರ್ಚ್ 11 ರಂದು ಗುಜರಾತ್‌ಗೆ ಬೇಟಿ ನೀಡಿದ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ಮೂಲಕ ಚುನಾವಣೆಗೆ 9 ತಿಂಗಳ ಮೊದಲೇ ಮೋದಿ ರಣಕಹಳೆ ಊದಿದ್ದಾರೆ. ರೋಡ್ ಶೋ ವೇಳೆ, ಕಾರ್ಯಕರ್ತರು ಕೇಸರಿ ಪೇಟ ಧರಿಸಿ ‘ಮೋದಿ..ಮೋದಿ..’ ಘೋಷಣೆ ಕೂಗಿದರು ಹಾಗೂ ಗುಜರಾತ್‌ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನೇಕ ಕಲಾವಿದರು ಕೂಡ ಆಗಮಿಸಿ ಸಾಂಪ್ರದಾಯಿಕ ಕಲೆ ಪ್ರದರ್ಶಿಸಿದರು. ವಿಶೇಷವಾಗಿ ಉಕ್ರೇನ್‌ನಿಂದ ಮರಳಿದ ಕೆಲವು ವಿದ್ಯಾರ್ಥಿಗಳು ರೋಡ್ ಶೋಗೆ ಬಂದು ತಮ್ಮನ್ನು ಯುದ್ಧಪೀಡಿತ ದೇಶದಿಂದ ರಕ್ಷಿಸಿದ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.
ನರೇಂದ್ರ ಮೋದಿಯವರ ಶಕ್ತಿ ಮತ್ತೊಮ್ಮೆ ಅನಾವರಣ
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದು ಇದು ಕೇಂದ್ರ ಸರ್ಕಾರವನ್ನು ಪದೇ ಪದೇ ಟೀಕಿಸುವ ಪ್ರತಿಪಕ್ಷಗಳಿಗೆ ಸೂಕ್ತ ಉತ್ತರ ಎಂದು ಕೆ.ಆರ್. ನಗರ ಜಿಲ್ಲಾ ಗ್ರಾಮಾಂತರ ಬಿಜೆಪಿ ವಕ್ತಾರ ಮಿರ್ಲೆ ಶ್ರೀನಿವಾಸಗೌಡ ಹೇಳಿದರು.ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡದೆ ಅನಗತ್ಯವಾಗಿ ಟೀಕೆ ಮಾಡುತ್ತಿದ್ದ ಪ್ರತಿಪಕ್ಷಗಳಿಗೆ ದೇಶದ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಅವರು ತಿಳಿಸಿದರು.
