ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!
ಭಾರತ ಮಾಲಿನ್ಯ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಜೊತೆಗೆ ಸೋಲಾರ್ ಪವರ್ ಬಳಕೆಗೂ ಅಷ್ಟೇ ಮಹತ್ವ ನೀಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ್ದಾರೆ.
ನವದೆಹಲಿ(ಜು.10): ಏಷ್ಯಾದ ಅತೀ ದೊಡ್ಡ ಸೋಲಾರ್ ಪವರ್ ಪ್ಲಾಂಟ್ ಭಾರತದಲ್ಲಿ ತಲೆ ಏತ್ತಿ ನಿಂತಿದೆ. 750 MW ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಸೋಲಾರ್ ಪವರ್ ಪ್ಲಾಂಟ್ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನೂತನ ಸೋಲಾರ್ ಪವರ್ ಪ್ಲಾಂಟ್ ಕಾರ್ಯರಂಭಗೊಂಡಿದೆ. ನೂತನ ಸೋಲಾರ್ ಪ್ಲಾಂಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!.
ರೇವಾದಲ್ಲಿ ನಿರ್ಮಿಸಲಾಗಿರುವ ಸೋಲಾರ್ ಪವರ್ ಪ್ಲಾಂಟ್‍ನಿಂದ ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲಿದೆ. ರೇವಾ ಜಿಲ್ಲೆ ಇದೀಗ ವಿಶ್ವದಲ್ಲೇ ಗುರುತಿಸಿಕೊಂಡಿದೆ. ಮಾಲಿನ್ಯ ನಿಯಂತ್ರಣಕ್ಕೆ ರೇವಾ ಸೋಲಾರ್ ಪ್ಲಾಂಟ್ ಕೊಡುಗೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ತಿಳಿಯಲಿದೆ ಎಂದು ಘಟಕ ಉದ್ಘಾಟಿಸಿ ಹೇಳಿದರು.
ಕೊರೋನಾ ರಣಕೇಕೆ: ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಟೀಂ ಸಲಹೆ.
ರೇವಾ ಜಿಲ್ಲೆಯ ಗುರ್ ತೆಹ್ಸಲ್ ವಲಯದ 1590 ಏಕರೆ ಪ್ರದೇಶದಲ್ಲಿ ಸೋಲಾರ್ ಪವರ್ ಪ್ಲಾಂಟ್ ತಲೆ ಎತ್ತಿ ನಿಂತಿದೆ. ಇಲ್ಲಿ 250MW ಸಾಮರ್ಥ್ಯ 3 ಘಟಕಗಳನ್ನು ನಿರ್ಮಿಸಲಾಗಿದೆ. 3 ಘಟಕಗಳು ಒಟ್ಟು 750 MW ವಿದ್ಯುತ್ ಉತ್ಪಾದಿಸಲಿದೆ.
ಮಧ್ಯ ಪ್ರದೇಶದ ಸೋಲಾರ್ ಪ್ಲಾಂಟ್‌ನಿಂದ ಇಲ್ಲಿನ ಜನತೆ, ಕೈಗಾರಿಕೆಗಳಿಗೆ ಮಾತ್ರವಲ್ಲ, ಮೆಟ್ರೋ ರೈಲು ಸೇರಿದಂತೆ ಹಲವು ಕ್ಷೇತ್ರಗಳಿಗೆ ಇಲ್ಲಿನ ವಿದ್ಯುತ್ ಬಳಕೆಯಾಗಲಿದೆ. ಮಧ್ಯ ಪ್ರದೇಶ ಸೋಲಾರ್ ವಿದ್ಯುತ್ ಕೇಂದ್ರವಾಗಿ ಮಾರ್ಪಡಲಿದೆ. ಇಷ್ಟೇ ಅಲ್ಲ, ಇಂಗಾಲ ಕಡಿಮೆ ಹೊರಸೂಸುವ ಮೂಲಕ ಉತ್ತಮ, ಮಾಲಿನ್ಯ ರಹಿತ ರಾಜ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ರೀತಿಯ ಸೋಲಾರ್ ಪವರ್ ಪ್ಲಾಂಟ್ ಶೀಘ್ರದಲ್ಲೇ ಶಾಜಾಪುರ್, ನೀಮೂಚ್ ಹಾಗೂ ಚತ್ತಾರ್‌ಪುರ್‌ನಲ್ಲಿ ತಲೆ ಎತ್ತಲಿದೆ.
ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (RUMSL), ಭಾರತದ ಸೋಲಾರ್ ಎನರ್ಜಿ ಕಾರ್ಪೊರೇಶನ್(SECI) ಹಾಗೂ ಮಧ್ಯ ಪ್ರದೇಶದ ಉರ್ಜವಿಕಾಸ್ ನಿಗಮ್ ಲಿಮಿಟೆಡ್(MPUVN) ಜಂಟಿಯಾಗಿ ಸೋಲಾರ್ ಪವರ್ ಪ್ಲಾಂಟ್ ನಿರ್ಮಿಸಿದೆ. ಸೋಲಾರ್ ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 138 ಕೋಟಿ ರೂಪಾಯಿಯನ್ನು RUMSLಗೆ ನೀಡಿತ್ತು.