ಮೋದಿಗೆ ಭಗವಂತನೆಂದ ಮಹಿಳೆ: ಭಾವುಕರಾದ ಪ್ರಧಾನಿ ಮೋದಿ!
ಜನೌಷಧಿ ದಿನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್| ಮೋದಿ ಜೊತೆ ಜನೌಷಧಿ ಕೇಂದ್ರಗಳ ಸಂಚಾಲಕ ಹಾಗೂ ಫಲಾನುಭವಿಗಳ ಸಂವಾದ| ಫಲಾನುಭವಿಯೊಬ್ಬರ ಮಾತಿನಿಂದ ಭಾವುಕರಾದ ಮೋದಿ
ನವದೆಹಲಿ[ಮಾ.07]: ಪಿಎಂ ಮೋದಿ ಶನಿವಾರದಂದು ಜನೌಷಧಿ ದಿನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಜನೌಷಧಿ ಕೇಂದ್ರಗಳ ಸಂಚಾಲಕ ಹಾಗೂ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂವಾದದ ನಡುವೆ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ.
ಹೌದು ಸಂವಾದದಲ್ಲಿ ಡೆಹ್ರಾಡೂನ್ ದೀಪಾ ಶಾ ಹೆಸರಿನ ಮಹಿಳಾ ಫಲಾನುಭವಿ ತನ್ನ ಅನುಭವವನ್ನು ಮೋದಿ ಜೊತೆ ಹಂಚಿಕೊಂಡಿದ್ದಾರೆ. ಮೋದಿ ಜೊತೆ ಮಾತನಾಡಿದ ಮಹಿಳೆ '2011 ರಲ್ಲಿ ನನಗೆ ಪಾರ್ಶ್ವವಾಯುಗೀಡಾಗಿದ್ದೆ. ಮಾತನಾಡಲು ಕೂಡಾ ಆಗುತ್ತಿರಲಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಔಷಧಿ ಬೆಲೆ ಕೂಡಾ ದುಬಾರಿಯಾಗಿದ್ದು, ನನ್ನ ಗಂಡ ಕೂಡಾ ಓರ್ವ ವಿಕಲಚೇತನ. ಹೀಗಿರುವಾಗ ನಿಮ್ಮ ಮೂಲಕ ಜನೌಷಧಿ ಕೇಂದ್ರದಿಂದ ಔಷಧಿ ಪಡೆದುಕೊಂಡೆ. ವೈದ್ಯರಂತೂ ನಾನು ಬದುಕುಳಿಯುವುದಿಲ್ಲ ಎಂದೇ ಹೇಳಿದ್ದರು. ಈಗ ನಾನು ಬದುಕುಳಿದಿದ್ದು ಮಾತ್ರವಲ್ಲ, ಔಷಧಿ ಕೂಡಾ ಫಲ ನೀಡಿತು' ಎಂದಿದ್ದಾರೆ. ಬಳಿಕ ಮುಂದುವರೆಸಿ 'ಮೋದೀಜೀ ನಾನು ಭಗವಂತನನ್ನು ನೋಡಿಲ್ಲ. ಆದರೆ ನಿಮ್ಮನ್ನು ಭಗವಂತನ ರೂಪದಲ್ಲಿ ಕಂಡೆ' ಎಂದು ಗದ್ಗದಿತರಾಗಿದ್ದಾರೆ.
ದೀಪಾ ಶಾರವರ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಮಾತುಗಳನ್ನು ಕೇಳುತ್ತಿದ್ದಂತೆಯೇ ತಲೆ ಬಾಗಿ ತಮ್ಮ ಕಣ್ಣೀರು ಮರೆಮಾಚುವ ಯತ್ನ ಮಾಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಈ ಮಹಿಳೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ ಅಂದರೆ PMBJPಯ ಬಹುದೊಡ್ಡ ಕೊಂಡಿಯಾಗಿದ್ದಾರೆ. ಇದು ದೇಶದ ಪ್ರತಿಯೊಬ್ಬ ವ್ಯಕ್ತಿಗೆ ತಲುಪುವ ಹಾದಿ ಹಾಗೂ ಉತ್ತಮ ಚಿಕಿತ್ಸೆ ತಲುಪಿಸುವ ಸಂಕಲ್ಪವಾಗಿದೆ. ಈವರೆಗೂ ದೇಶದಾದ್ಯಂತ ಸುಮಾರು 6 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ತೆರೆದಿವೆ ಎಂಬುವುದು ಬಹಳ ಖುಷಿ ಕೊಡುವ ವಿಚಾರ ಎಂದಿದ್ದಾರೆ.
ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ