'ನಾನು ಹಾಡುತ್ತಿರುವ ವಿಡಿಯೋ ನೋಡಿದ್ದೇನೆ..' ಡೀಪ್‌ಫೇಕ್‌, ಎಐ ಬಗ್ಗೆ ಮೋದಿ ಮಾತು!

ಕೇಂದ್ರ ಸರ್ಕಾರದ ವೋಕಲ್‌ ಫಾರ್‌ ಲೋಕಲ್‌ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿರುವ ಬಗ್ಗೆಯೂ ಪ್ರಧಾನಿ ಮೋದಿ ಖುಷಿಪಟ್ಟಿದ್ದು, ಇದರ ಹಿಂದೆ ಇರುವುದು ನಮ್ಮದೇ ಜನ ಎಂದಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ಸಾಧನೆಗಳ ಬಗ್ಗೆ ಮೋದಿ ಹೆಮ್ಮೆ ವ್ಯಕ್ತಪಡಿಸಿದರು, ರಾಷ್ಟ್ರವು ಪ್ರಗತಿಯ ಅಚಲವಾದ ಹಾದಿಯಲ್ಲಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಿದರು.
 

PM Narendra Modi flagging issues with deepfakes and AI says Saw a video of me singing san

ನವದೆಹಲಿ (ನ.17):  ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಭಾಷಣದಲ್ಲಿ, 'ಕೃತಕ ಬುದ್ಧಿಮತ್ತೆ' (AI) ಮತ್ತು 'ಡೀಪ್‌ಫೇಕ್‌ಗಳಿಗೆ' ಸಂಬಂಧಿಸಿದ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವಲ್ಲಿ ಪತ್ರಕರ್ತರ ಪಾತ್ರವನ್ನು ಒತ್ತಿ ಹೇಳಿದರು. ಮೋಸಗೊಳಿಸುವ 'ಡೀಪ್‌ಫೇಕ್‌ಗಳನ್ನು' ರಚಿಸುವಲ್ಲಿ ಕೃತಕಬುದ್ಧಿಮತ್ತೆಯ ಸಂಭಾವ್ಯ ದುರುಪಯೋಗದ ಬಗ್ಗೆ ಮಾತನಾಡಿದ ಅವರು, ಈಗ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮಗಳನ್ನು ಒತ್ತಾಯಿಸಿದ್ದಾರೆ. 'ಇತ್ತೀಚೆಗೆ ನಾನು ಹಾಡುತ್ತಿರುವ ವೀಡಿಯೊವನ್ನು ನೋಡಿದೆ. ನನ್ನನ್ನು ಇಷ್ಟಪಡುವ ಜನರು ನನಗೆ ಅದನ್ನು ಫಾರ್ವರ್ಡ್ ಮಾಡಿದ್ದರು' ಎಂದು ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಹೇಳಿದರು. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದೆ ಎಂದು ಶಂಕಿಸಲಾದ ನಟಿ ರಶ್ಮಿಕಾ ಮಂದಣ್ಣ ಒಳಗೊಂಡಿರುವ 'ಡೀಪ್‌ಫೇಕ್' ವೀಡಿಯೊದ ಪ್ರಸಾರದ ಬೆನ್ನಲ್ಲಿಯೇ ಮೋದಿ ಅವರಿಂದ ಈ ಹೇಳಿಕೆ ಬಂದಿದೆ. ರಶ್ಮಿಕಾ ಮಂದಣ್ಣ ಅವರ ವಿಡಿಯೋದ ಮೂಲ ಭಾರತೀಯ-ಬ್ರಿಟಿಷ್‌ ಪ್ರಜೆ ಜಾರಾ ಪಟೇಲ್‌ ಅವರದ್ದಾಗಿತ್ತು. ಇದನ್ನು ಡೀಪ್‌ಫೇಕ್‌ ಎಐನಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಸೇರಿಸಿ ಫೇಕ್‌ ವಿಡಿಯೋ ಮಾಡಲಾಗಿತ್ತು.

ದೇಶದಲ್ಲಿ ಡೀಪ್‌ಫೇಕ್‌ ವಿಡಿಯೋಗಳ ಸಂಖ್ಯೆ ಏರಿಕೆ ಆಗುತ್ತಿದೆ. ಫೇಕ್‌ ವಿಡಿಯೋಗಳನ್ನು ಬಹಳ ಕುಶಲವಾಗಿ ಮಾಡಲಾಗುತ್ತಿದೆ. ವಿಡಿಯೋ ಮತ್ತು ಆಡಿಯೋಗಳಲ್ಲಿ ಇದು ಸತ್ಯ ಎನಿಸುವಷ್ಟು ಸ್ಪಷ್ಟವಾಗಿ ಮೋಸಗೊಳಿಸುತ್ತಿದ್ದಾರೆ. ತಪ್ಪು ಮಾಹಿತಿಯನ್ನು ಹರಡುವಲ್ಲಿ ಅವುಗಳ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಂದಣ್ಣ ಒಳಗೊಂಡ ಡೀಪ್‌ಫೇಕ್‌ನ ವಿವಾದದ ನಂತರ, ಭಾರತ ಸರ್ಕಾರವು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಹೊಸ ಸಲಹೆಯನ್ನು ನೀಡಿದೆ. ಡೀಪ್‌ಫೇಕ್‌ಗಳ ವಿರುದ್ಧ ತ್ವರಿತ ಕ್ರಮ ಮತ್ತು ದೂರಿನ 36 ಗಂಟೆಗಳ ಒಳಗೆ ತಪ್ಪುದಾರಿಗೆಳೆಯುವ ವಿಷಯವನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ. ಹಾಗಿದ್ದರೂ, ಎಐ ಮತ್ತು ಡೀಪ್‌ಫೇಕ್‌ಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳು ಅಸಮರ್ಪಕವಾಗಿದೆ.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ತಮ್ಮ ಬದ್ಧತೆಯನ್ನು ಮೋದಿ ಒತ್ತಿ ಹೇಳಿದರು, ಈ ಆಶಯಗಳು ಕೇವಲ ಪದಗಳಲ್ಲ ಆದರೆ ಸ್ಪಷ್ಟವಾದ ವಾಸ್ತವಗಳಾಗಿವೆ ಎಂದು ಹೇಳಿದ್ದಾರೆ. ವೋಕಲ್‌ ಫಾರ್‌ ಲೋಕಲ್‌ ಕಾರ್ಯಕ್ರಮಕ್ಕೆ ಹೆಚ್ಚುತ್ತಿರುವ ಬೆಂಬಲವನ್ನು ಪ್ರಧಾನಮಂತ್ರಿ ಗಮನಸೆಳೆದರು.ಇದರ ಯಶಸ್ಸಿನ ಹಿಂದೆ ನಮ್ಮದೇ ಜನರಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ಸಾಧನೆಗಳ ಬಗ್ಗೆ ಮೋದಿ ಹೆಮ್ಮೆ ವ್ಯಕ್ತಪಡಿಸಿದರು, ರಾಷ್ಟ್ರವು ಪ್ರಗತಿಯ ಅಚಲವಾದ ಹಾದಿಯಲ್ಲಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಿದರು.

ರಶ್ಮಿಕಾ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್! ಕೇಂದ್ರ ಸರ್ಕಾರದ ಆದೇಶಕ್ಕೂ ಖದೀಮರು ಡೋಂಟ್ ಕೇರ್!

ಇದಲ್ಲದೆ, ಅವರು ಛತ್‌ ಪೂಜೆಯ ಮಹತ್ವವನ್ನು ಮೋದಿ ತಿಳಿಸಿದರು. ಅದನ್ನು 'ರಾಷ್ಟ್ರೀಯ ಪರ್ವ' (ರಾಷ್ಟ್ರೀಯ ಹಬ್ಬ) ಎಂದು ಘೋಷಿಸಿದರು. ನವೆಂಬರ್ 17 ರಂದು ಪ್ರಾರಂಭವಾಗಿ ನವೆಂಬರ್ 20 ರವರೆಗೆ ಛತ್ ಪೂಜೆ ಹಬ್ಬಗಳು ರಾಷ್ಟ್ರಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ ಎಂದರು.

ನಟಿ ಕಾಜೋಲ್​ ಬಟ್ಟೆ ಬದಲಿಸುವ ಶಾಕಿಂಗ್​ ವಿಡಿಯೋ ವೈರಲ್​? ನಿಜಕ್ಕೂ ಆಗಿರೋದೇನು?

Latest Videos
Follow Us:
Download App:
  • android
  • ios