Asianet Suvarna News Asianet Suvarna News

ಮೋದಿ ಅಜೇಯ ಆಡಳಿತಕ್ಕೆ 20 ವರ್ಷ: ಒಂದು ದಿನವೂ ಅವರು ಅಧಿ​ಕಾ​ರ​ದಿಂದ ವಂಚಿ​ತ​ರಾ​ಗಿ​ಲ್ಲ!

* 13 ವರ್ಷ ಮುಖ್ಯ​ಮಂತ್ರಿ​ಯಾಗಿ ರಾಜ್ಯ​ಭಾರ

* 7 ವರ್ಷ​ದಿಂದ ಪ್ರಧಾನಿ ಹುದ್ದೆ​ಯಲ್ಲಿ ಕೆಲ​ಸ

* ಒಂದು ದಿನವೂ ಅವರು ಅಧಿ​ಕಾ​ರ​ದಿಂದ ವಂಚಿ​ತ​ರಾ​ಗಿ​ಲ್ಲ

PM Narendra Modi completes 20 years in public office: How BJP plans to celebrate pod
Author
Bangalore, First Published Oct 7, 2021, 11:03 AM IST

ನವದೆಹಲಿ(ಅ.07): 2021ರ ಅ.7ಕ್ಕೆ (ಗು​ರು​ವಾ​ರ​) ನರೇಂದ್ರ ಮೋದಿ(Narendra Modi) ಅವರು ಸಾಂವಿಧಾನಿಕ ಹುದ್ದೆ ಏರಿ 20 ವರ್ಷ ತುಂಬಲಿದೆ. ಕಳೆದ 20 ವರ್ಷಗಳಿಂದಲೂ ಒಂದಲ್ಲಾ ಒಂದು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆದುಕೊಂಡೇ ಬಂದಿರುವ ಮೋದಿ ಅವರ ಸಾರ್ವಜನಿಕ ಜೀವನದ ಕುತೂ​ಹ​ಲ​ಕಾರಿ ಅಂಶ​ಗ​ಳನ್ನು ಇಲ್ಲಿ ತೆರೆ​ದಿ​ಡ​ಲಾ​ಗಿ​ದೆ.

ಅತಿ ಸುದೀರ್ಘ ಅವಧಿಗೆ ಚುನಾಯಿತ ಸರ್ಕಾರದ ಮುಖ್ಯಸ್ಥ

2001ರ ಅ.7ರಂದು ನರೇಂದ್ರ ಮೋದಿ ಮೊದಲ ಬಾರಿಗೆ ಗುಜರಾತ್‌(Gujarat) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ಅಂದರೆ ಸತತ 7306 ದಿನಗಳ ಅವಧಿಗೆ ಒಂದಲ್ಲಾ ಒಂದು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆದುಕೊಂಡು ಬಂದಿದ್ದಾರೆ. ಈ ಪೈಕಿ ಗುಜರಾತ್‌ ಮುಖ್ಯಮಂತ್ರಿಯಾಗಿ 4607 ದಿನ ಮತ್ತು ಪ್ರಧಾನಿಯಾಗಿ 2691 ದಿನ ಸೇವೆ ಸಲ್ಲಿಸಿದ್ದಾರೆ. ಇಂಥ ದಾಖಲೆ ಹೊಂದಿದ ಏಕೈಕ ವ್ಯಕ್ತಿ ಅವರು.

ಪ್ರಧಾ​ನಿ​ಗ​ಳು ​ಅ​ಧಿ​ಕಾ​ರ​ದ​ ದಿನ​ಗ​ಳು

ನರೇಂದ್ರ ಮೋದಿ 7306

ಜವಾಹರ್‌ಲಾಲ್‌ ನೆಹರೂ 6130

ಇಂದಿರಾ ಗಾಂಧಿ 5829

ಮನಮೋಹನ್‌ಸಿಂಗ್‌ 3656

ಮೊರಾರ್ಜಿ ದೇಸಾಯಿ 2511

ಎ.ಬಿ.ವಾಜಪೇಯಿ 2272

ನರಸಿಂಹರಾವ್‌ 2229

ರಾಜೀವ್‌ಗಾಂಧಿ 1857

ವಿ.ಪಿ.ಸಿಂಗ್‌ 1082

ಎಚ್‌.ಡಿ.ದೇವೇಗೌಡ 862

ಚರಣ್‌ಸಿಂಗ್‌ 723

ಲಾಲ್‌ ಬಹಾದ್ದೂರ್‌ ಶಾಸ್ತಿ್ರ 581

ಐ.ಕೆ.ಗುಜ್ರಾಲ್‌ 332

ಚಂದ್ರಶೇಖರ್‌ 223

ಗುಲ್ಜಾರಿಲಾಲ್‌ ನಂದಾ 26

ಅತಿ ಹೆಚ್ಚು ಅವಧಿಗೆ ಪ್ರಧಾನಿ ಹುದ್ದೆ: ಟಾಪ್‌ 5ರಲ್ಲಿ ಮೋದಿ

ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರೆಂದರೆ ನೆಹರೂ, ಇಂದಿರಾಗಾಂಧಿ, ಮನಮೋಹನ್‌ಸಿಂಗ್‌, ನರೇಂದ್ರ ಮೋದಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ.

ಪ್ರಧಾ​ನಿ​ಗ​ಳು ​ದಿ​ನ​ಗ​ಳು

ನೆಹರೂ 6130

ಇಂದಿರಾ ಗಾಂಧಿ 5829

ಮನಮೋಹನ್‌ಸಿಂಗ್‌ 3656

ನರೇಂದ್ರ ಮೋದಿ 2691

ವಾಜಪೇಯಿ 2272

ಸಾಮಾಜಿಕ ಮತ್ತು ನೈತಿಕ ನಾಯಕತ್ವ

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಘೋಷಿಸಿದ ಹಲವು ಯೋಜನೆಗಳು ದೇಶದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾದವು. ಜೊತೆಗೆ ಹಲವು ಯೋಜನೆಗಳನ್ನು ತಾವು ಕೂಡಾ ಪಾಲಿಸುವ ಜೊತೆಗೆ ಇತರರಿಗೆ ಮಾದರಿಯಾದವರು. ಉದಾಹರಣೆಗೆ ಸ್ವಚ್ಛ ಭಾರತ, ಅಂತಾರಾಷ್ಟ್ರೀಯ ಯೋಗ ದಿನ, ಫಿಟ್‌ ಇಂಡಿಯಾ, ಬಯಲು ಶೌಚ ಮುಕ್ತ ಯೋಜನೆ, ಬೇಟಿ ಬಚಾವೋ, ಬೇಟಿ ಫಡಾವೋ ಉಜ್ವಲ, ಎಲ್‌ಪಿಜಿ ಸಬ್ಸಿಡಿಯನ್ನು ಸ್ವತಃ ಜನರೇ ಕೈಬಿಡುವಂತೆ ಪ್ರೋತ್ಸಾಹಿಸಿದ್ದು ಮೊದಲಾದವು.

ಇನ್ನು ಹಣಕಾಸು ಒಳಗೊಳ್ಳುವಿಕೆಗಾಗಿ 44 ಜನರಿಗೆ ಜನಧನ ಯೋಜನೆಯಡಿ ಬ್ಯಾಂಕ್‌ ಖಾತೆ, ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ಸುಲಭ ಸಾಲ, ಡಿಜಿಟಲ್‌ ಕ್ರಾಂತಿ, ಗ್ರಾಮಗ್ರಾಮಗಳಿಗೆ ವಿದ್ಯುತ್‌ ಜಾಲ, ಆರೋಗ್ಯ ಸೌಲಭ್ಯ ವಿಸ್ತರಣೆ, ಮನೆಮನೆಗೂ ಸ್ವಚ್ಛ ಕುಡಿಯುವ ನೀರು, ಪ್ರತಿ ಕುಟುಂಬಕ್ಕೂ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ವಿಮಾ ಸೌಲಭ್ಯ, ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ವಿತರಣೆ.

ದಶಕಗಳಿಂದ ಬಾಕಿ ಉಳಿದಿದ್ದ ಅಯೋಧ್ಯೆ ರಾಮಮಂದಿರ ವಿವಾದ ಇತ್ಯರ್ಥ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನ 370ನೇ ವಿಧಿ ರದ್ದು, ಬಳಕೆದಲ್ಲಿದ್ದಲ್ಲ ನೂರಾರು ಗತಕಾಲದ ಕಾನೂನುಗಳ ರದ್ದು, ಜಿಎಸ್‌ಟಿ ಜಾರಿ.

Follow Us:
Download App:
  • android
  • ios